ಹುಬ್ಬಳ್ಳಿ-ಧಾರವಾಡ ಸುದ್ದಿ
ಅಪ್ರಾಪ್ತೆಯನ್ನು ಗರ್ಭವತಿ ಮಾಡಿದ ಕಾಮುಕನ ಮೇಲೆ ’ಫೋಕ್ಸೋ’ ದಾಖಲು

ಅಪ್ರಾಪ್ತೆಯನ್ನು ಗರ್ಭವತಿ ಮಾಡಿದ ಕಾಮುಕನ ಮೇಲೆ ’ಫೋಕ್ಸೋ’ ದಾಖಲು

ಮುಂಡಗೋಡ : ವಸತಿ ಶಾಲೆಯ ಆವರಣದಲ್ಲಿ ಶಿಶು ಶವ ಎಸೆದು ಹೋಗಿರುವ ಪ್ರಕರಣ ಭೇದಿಸಿದ ಪೊಲೀಸರು ಅಪ್ರಾಪ್ತೆಯನ್ನು ಗರ್ಭವತಿಯನ್ನಾಗಿ ಮಾಡಿದ ಆರೋಪಿಯನ್ನು ಬಂಧಿಸಿ ಫೊಕ್ಸೊ ಕಾಯ್ದೆಯಡಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯನ್ನು ಹಾವೇರಿ ಜಿಲ್ಲೆ ಹಿರೇಕೇರೂರ ತಾಲೂಕಿನ ನಿಟ್ಟೂರ ಗ್ರಾಮದ ಶಾಂತೇಶ ಜಾವಳ್ಳಿ ಎಂದು ತಿಳಿದು ಬಂದಿದೆ.
ದಿ.22-08-2021 ರಂದು ನಂತರ 2-3 ದಿನಕ್ಕೊಮ್ಮೆ ಆರೋಪಿಯು ಅಪ್ರಾಪ್ತೆಯನ್ನು ಯಾರೂ ಇಲ್ಲದ ಸಮಯದಲ್ಲಿ ದೈಹಿಕವಾಗಿ ದುರ್ಭಳಕೆ ಮಾಡಿಕೊಂಡು ಗರ್ಭವತಿಯನ್ನಾಗಿ ಮಾಡಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ಜೀವ ತೆಗೆಯುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಅಪ್ರಾಪ್ತೆಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
2-3 ದಿನಗಳ ಹಿಂದೆ ಅಪ್ರಾಪ್ತೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ನೋವಿಗೆ ಮಾತ್ರೆಯನ್ನು ಸೇವಿಸಿದ ನಂತರ ಹೊಟ್ಟೆನೋವು ಕಾಣಿಸಿದ್ದರಿಂದ ಶೌಚಾಲಯದಲ್ಲಿ ಅವದಿ ಪೂರ್ವ ಹೆರಿಗೆಯಾಗಿದೆ. ಮೃತ ಶಿಶುವನ್ನು ವಸತಿ ಶಾಲೆಯ ಆವರಣದಲ್ಲಿ ಎಸೆದು ಹೋಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿ ಶ್ಯಾಮಲಾ ಸಿ.ಕೆ., ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಲಕ್ಷ್ಮಣ ಬಬಲಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಲ್, ಕಾರವಾರ ಎಸ್.ಜಿ.ಪಿ.ಒ ರುದ್ರೇಶ ಮೇತ್ರಾಣಿ, ಜಿಲ್ಲಾ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಬಿ.ಎನ್.ನಾಯ್ಕ್, ಮುಂಡಗೋಡ ಸಿಡಿಪಿಒ ದೀಪಾ ಬಂಗೇರ, ಪಿಸೈ ಬಸವರಾಜ ಮಬನೂರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *