ಹುಬ್ಬಳ್ಳಿ-ಧಾರವಾಡ ಸುದ್ದಿ
ವಿನೂತನವಾಗಿ ಜನ್ಮದಿನ ಆಚರಿಸಿದ ಚಂದ್ರಶೇಖರ ಗೋಕಾಕ        ಪುಟ್ಬಾಲ್ ತಂಡಕ್ಕೆ ಜೆರ್ಸಿ, ಶೂ ವಿತರಣೆ

ವಿನೂತನವಾಗಿ ಜನ್ಮದಿನ ಆಚರಿಸಿದ ಚಂದ್ರಶೇಖರ ಗೋಕಾಕ ಪುಟ್ಬಾಲ್ ತಂಡಕ್ಕೆ ಜೆರ್ಸಿ, ಶೂ ವಿತರಣೆ

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯಲ್ಲಿರುವ ಸೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ಬಿಜೆಪಿ ಹ-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಮುಖಂಡ ಹಾಗೂ ಹುಡಾ ಸದಸ್ಯ ಚಂದ್ರಶೇಖರ ಗೋಕಾಕ ಅವರ ಜನ್ಮದಿನದ ನಿಮಿತ್ತ ಸಿಆರ್ 7 ಪುಟ್ಬಾಲ್ ತಂಡಕ್ಕೆ “ಜೆರ್ಸಿ, ಪುಟ್ಬಾಲ್, ಶೂ” ವಿತರಿಸಲಾಯಿತು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಕ್ರೀಡಾ ಮನೋಭಾವ ಬೆಳೆಸುವ ಮೂಲಕ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳನ್ನಾಗಿ ತಯಾರು ಮಾಡಬೇಕು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಂಬಲದಲ್ಲಿ ಹಸಿವು ನೀರಡಿಕೆ ಮರೆತು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಖಂಡಿತ, ಕ್ರೀಡಾಳುಗಳು ಸೋಲು ಗೆಲುವನ್ನು ಸ್ಪರ್ಧಾತ್ಮಕವಾಗಿ ಎದುರಿಸಬೇಕು ಎಂದು ಹೇಳಿದರು.
ಹು-ಢಾ ಅಧ್ಯಕ್ಷ ನಾಗೇಶ ಕಲಬುರ್ಗ, ಚಂದ್ರಶೇಖರ ಗೋಕಾಕ, ಬಿಜೆಪಿ ಹು-ಧಾ ಪೂರ್ವ ಅಧ್ಯಕ್ಷ ಪ್ರಭು ನವಲಗುಂದಮಠ, ಪ್ರಧಾನ ಕಾರ್ಯದರ್ಶಿ ವಿನಯ ಸಜ್ಜನರ, ಪಾಲಿಕೆ ಸದಸ್ಯೆ ಉಮಾ ಮುಕುಂದ, ಮಾಜಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಅಣ್ಣಪ್ಪ ಗೋಕಾಕ, ಹನಮಂತಪ್ಪ ದೊಡ್ಡಮನಿ ಸುರೇಶ್ ಜೈನ್, ಲಲಿತ್ ಜೈನ್, ಹರೀಶ ಹಳ್ಳಿಕೆರಿ, ಪ್ರವೀಣ ಕುಬಸದ, ಮಂಜುನಾಥ ಚಿಂತಗಿಂಜಲ್, ಶಿವಯ್ಯ ಹಿರೇಮಠ, ಗೋಪಾಲ ಕಲ್ಲೂರ, ವಿನಾಯಕ ಲದವಾ, ಮಹೇಶ ಲಾಜಿನವರ ಹಾಗೂ ಇನ್ನಿತರರಿದ್ದರು.

administrator

Related Articles

Leave a Reply

Your email address will not be published. Required fields are marked *