ಹುಬ್ಬಳ್ಳಿ: ಗದಗ ಜಿಲ್ಲೆಯ ಹಿಂದೂ ಧರ್ಮದ ಬ್ರಾಹ್ಮಣ ಯುವತಿ ಮೇಲೆ ಮುಸ್ಲಿಂ ಯುವಕ ಮಾರಣಾಂತಿಕ ಹಲ್ಲೆ ಮಾಡಿದ್ದನ್ನು ಧಾರವಾಡ ಜಿಲ್ಲಾ ಸಮಸ್ತ ಬ್ರಾಹ್ಮಣ ಸಮಾಜದಿಂದ ಖಂಡಿಸಿಸುತ್ತದೆ ಎಂದು ಬ್ರಾಹ್ಮಣ ಸಮಾಜದ ಮುಖಂಡ ವಸಂತ ನಾಡಜೋಶಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಕೃತ್ಯ ಮಾಡಿದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಮಸ್ತ ಬ್ರಾಹ್ಮಣ ಸಮಾಜ, ವಿಶ್ವ ಹಿಂದೂ ಪರಿಷತ್, ಹಿಂದೂ ಭಜರಂಗದಳ ಮತ್ತು ಶ್ರೀರಾಮ ಸೇನೆ ಜೊತೆ ಗೂಡಿ ಉಗ್ರ ಹೋರಾಟ ಮಾಡಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ಎಲ್.ಎ. ಓಕ್ ಮಾತನಾಡಿ, ಲವ್ ಜಿಹಾದ್ ಮುಂದಿಟ್ಟುಕೊಂಡು ಹಿಂದೂ ಯುವತಿ ಪ್ರೀತಿ, ಪ್ರೇಮ ಎಂಬ ಹೆಸರಿನಲ್ಲಿ ವಂಚಿಸಿ ಅವರನ್ನು ಮದುವೆ ಯಾಗಿ ಅವಳ ಮೇಲೆ ದೌರ್ಜನ್ಯ ಮಾಡಿದ್ದಾನೆ. ಅವನಿಗೆ 2ನೇ ಮದುವೆ ಯಾಗಿದೆ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ ಎಂದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇದೇ ರೀತಿ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದರು.
ಯುವತಿಗೆ ನ್ಯಾಯ ಸಿಗುವರೆಗೂ ಸಮಸ್ತ ಬ್ರಾಹ್ಮಣ ಸಮಾಜದಿಂದ ಹೋರಾಟ ಮಾಡಲಾಗುವುದು. ಆರೋಪಿಯನ್ನು ರಕ್ಷಿಸಲು ಸಾಕ್ಷಿ ನಾಶ ಮಾಡುವಂತಹ ಕೃತ್ಯ ಪೊಲೀಸ್ ಇಲಾಖೆ ಮಾಡಿದರೆ ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಅಧ್ಯಕ್ಷ ದತ್ತಮೂರ್ತಿ ಕುಲಕರ್ಣಿ, ಸುನಿಲ ಗುಮಾಸ್ತೆ, ವಿಜಯ ನಾಡಜೋಶಿ, ಮನೋಹರ ಪರ್ವತಿ, ಎನ್.ಎಚ್.ನಿಡಗುಂದಿ, ಸುದರ್ಶನ ದಿನ್ನಿಹಳ್ಳಿ ಇದ್ದರು.