ಅಣ್ಣಿಗೇರಿ: ಅಪ್ರಾಪ್ತೆಯ ಮೇಲೆ ಯುವಕನೋಬ್ಬ ಅತ್ಯಾಚಾರವೆಸಗಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಅಸ್ಪಾಕ ರಾಜೇಸಾಬ ಅಲೀಖಾನವರ(23) ಎಂಬಾತ ಪಟ್ಟಣದ 16 ವಯಸ್ಸಿನ ಬಾಲಕಿಯನ್ನು ಅಡ್ನೂರು ಗ್ರಾಮದ ರಸ್ತೆಯಲ್ಲಿ ಹೊಲಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು ಈ ಬಗ್ಗೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ನಿವಾಸಿಯಾದ ಬಾಲಕಿ ಶಾಲೆಗೆ ಹೋಗುವಾಗ ಅದೇ ಪಟ್ಟಣದ ನಿವಾಸಿ ಅಸ್ಪಾಕ ರಾಜೇಸಾಬ ಅಲೀಖಾನ ವರ ಕಳೆದ ಒಂದು ವರ್ಷದಿಂದ ಪರಿಚಯ ಮಾಡಿಕೊಂಡು ವಿಶ್ವಾಸಗಳಿಸಿ ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಬಾಲಕಿ ಪಾಲಕರು ಹೇಳಿದ್ದಾರೆ.