ಹುಬ್ಬಳ್ಳಿ-ಧಾರವಾಡ ಸುದ್ದಿ
’ದಿ ಕಾಶ್ಮೀರಿ ಫೈಲ್’ ರಾಜಕೀಯ ಲಾಭದ ಹುನ್ನಾರ: ಆರೋಪ

’ದಿ ಕಾಶ್ಮೀರಿ ಫೈಲ್’ ರಾಜಕೀಯ ಲಾಭದ ಹುನ್ನಾರ: ಆರೋಪ

ಧಾರವಾಡ: ಕಾಶ್ಮೀರಿ ಪಂಡಿತರ ಜೇವನಾಧಾರಿಸಿದ ದಿ ಕಾಶ್ಮೀರಿ ಫೈಲ್ ದೇಶದೆಲ್ಲೆಡೆ ಪ್ರದರ್ಶನವಾಗುತ್ತಿದ್ದು ಒಂದೆಡೆಯಾದರೆ, ಇದು ರಾಜಕೀಯಕ್ಕೆ ಬಳಕೆಯಾಗುತ್ತಿದೆಯಾ ಎಂಬ ಚರ್ಚೆ ಕೂಡ ವೇಗವಾಗಿದೆ. ಚಿತ್ರದ ಹೆಸರಿನಲ್ಲಿ ಭಾರತೀಯ ಜನತಾ ಪಕ್ಷ ರಾಜಕೀಯ ಲಾಭ ಪಡೆದು ಕೊಳ್ಳುತ್ತಿದೆ. ದಿ ಕಾಶ್ಮೀರಿ ಫೈಲ್ಸ್ ಬಿಜೆಪಿಯ ಸಂಪೂರ್ಣ ರಾಜಕೀಯ ತಂತ್ರಗಾರಿಕೆ. ಇಡೀ ದೇಶದಾದ್ಯಂತ ಅನೇಕ ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿರುವಾಗ ಇಂತಹ ಸಿನೆಮಾದ ಅವಶ್ಯಕತೆ ಇತ್ತಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ ಎಂದು ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಪಿ.ಎಚ್. ನೀರಲಕೇರಿ ಆರೋಪಿಸಿದರು.
ಅವರು ಶುಕ್ರವಾರ ಮಾಧ್ಯಮವರೊಂದಿಗೆ ಚಿತ್ರ ವೀಕ್ಷಿಸಿಸಿದ ನಂತರ ಹಲವಾರು ಸಂಗತಿಗಳನ್ನು ತೆರೆದಿಟ್ಟರು. ಈ ಚಲನಚಿತ್ರದಿಂದ ಸಮಾಜದಲ್ಲಿ ಅಂತಹ ಹೇಳಿಕೊಳ್ಳುವಂತಹ ಪರಿಣಾಮ ಆಗದು. ಸದ್ಯ ಸಮಾಜದ ಶಾಂತಿ ಕದಡಲು ಮತ್ತು ಕೋಮು ದಳ್ಳುರಿಗೆ ಕಾರಣವಾಗುವ ಅಂಶಗಳನ್ನು ಅತಿಯಾಗಿ ರಂಜಿಸಲಾಗಿದೆ ಎಂದರು.
೧೯೮೯-೯೧ರಲ್ಲಿ ಕೇಂದ್ರದಲ್ಲಿ ಇದ್ದದ್ದು ಬಿಜೆಪಿ ಸರ್ಕಾರ. ಈ ಸರ್ಕಾರಕ್ಕೆ ಬೆಂಬಲ ಕೊಟ್ಟದ್ದು ಬಿಜೆಪಿ. ಕಾಶ್ಮೀರದಲ್ಲಿ ಆಗ ರಾಜ್ಯಪಾಲರಾಗಿ ನೇಮಕವಾಗಿದ್ದು ಆರ್‌ಎಸ್‌ಎಸ್ ಮೂಲದ ವ್ಯಕ್ತಿ. ವಾಸ್ತವ ಪರಿಸ್ಥಿತಿ ಹೀಗಿರುವಾಗ ಆ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರಿಗೆ ಅನ್ಯಾಯವಾಗಿ ರುವುದಕ್ಕೆ ಕಾಂಗ್ರೆಸ್ ಮೇಲೆ ಗೂಬೆ ಕೂಡ್ರಿಸುವ ಕೆಲಸ ಮಾತ್ರ ಈಗ ನಡೆದಿರುವುದು ನಾಚಿಕಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದ ಇನ್ನೊಂದು ಅತೀ ದು:ಖಕರ ಸಂಗತಿ ಎಂದರೆ, ಚುನಾವಣೆಯನ್ನು ಹೇಗೆ ಮಾಡಬೇಕೆಂಬುದನ್ನೂ ಕೂಡ ತೋರಿಸಿರುವುದು ಹೀನ ಕೆಲಸ ಅಲ್ಲದೇ ಮತ್ತೇನೂ ಅಲ್ಲ. ಎಲ್ಲ ಚಿತ್ರಗಳಿಗೂ ಸೆನ್ಸಾರ್ ಇರುತ್ತೆ. ಆದರೆ ಈ ಚಿತ್ರಕ್ಕೆ ಸೆನ್ಸಾರ್ ವೇ ಇಲ್ಲ. ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಭೀಬತ್ಸವಾಗಿ ತೋರಿಸಿರುವುದು ಖೇದಕರ. ಇನ್ನೂ, ಸ್ಥಳೀಯ ಬಿಜೆಪಿ ನಾಯಕರು ಚಿತ್ರ ವೀಕ್ಷಣೆ ಅವಕಾಶ ಮಾಡಿದ್ದಾರೆ. ಆದರೆ ಹಲವಾರು ಜ್ವಲಂತ ಸಮಸ್ಯೆಗಳಿ ದ್ದರೂ ಅತ್ತ ಗಮನ ಹರಿಸಿಲ್ಲ. ಸ್ವತಃ ಮಾಜಿ ಸಿಎಂ ಜಗದೀಶ್ ಶೆಟ್ಟರ ಕ್ಷೇತ್ರದಲ್ಲಿಯೇ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಆದರೂ ಗಮನ ಹರಿಸಿಲ್ಲ. ಆದರೆ ಚಿತ್ರದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ನೀರಲಕೇರಿ ಆರೋಪಿಸಿದರು.

 

administrator

Related Articles

Leave a Reply

Your email address will not be published. Required fields are marked *