ಹುಬ್ಬಳ್ಳಿ-ಧಾರವಾಡ ಸುದ್ದಿ
’ಟಿಎಸ್‌ಸಿಎ’ಗೆ ಲೀಗ್ ಹಂತದಲ್ಲಿ ಎರಡು ಬಡ್ತಿ ನಾಲ್ಕು ವರ್ಷದಲ್ಲಿ ಅಭೂತಪೂರ್ವ ಸಾಧನೆ

’ಟಿಎಸ್‌ಸಿಎ’ಗೆ ಲೀಗ್ ಹಂತದಲ್ಲಿ ಎರಡು ಬಡ್ತಿ ನಾಲ್ಕು ವರ್ಷದಲ್ಲಿ ಅಭೂತಪೂರ್ವ ಸಾಧನೆ

ಹುಬ್ಬಳ್ಳಿ : ಉತ್ತರ ಕರ್ನಾಟಕದ ಬಹುತೇಕ ಆಟಗಾರರು ಕ್ರಿಕೆಟ್ ತರಬೇತಿಗಾಗಿ ಮೊದಲು ರಾಜಧಾನಿ ಬೆಂಗಳೂರಿನತ್ತ ಮುಖ ಮಾಡುತ್ತಿದ್ದರು. ಆದರೆ ನಾಲ್ಕು ವರ್ಷದಿಂದ ಬಹುತೇಕ ಬೆಂಗಳೂರು ಆಟಗಾರರೇ ತರಬೇತಿಗಾಗಿ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯತ್ತ ಮುಖ ಮಾಡುತ್ತಿದ್ದು ಗೋಕುಲ ರಸ್ತೆಯಲ್ಲಿರುವ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡಮಿಗೆ ಇಂತಹ ಸಾಧನೆಗೆ ಕಾರಣವಾಗಿದೆ.
ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡಮಿಯು ಆರಂಭವಾದ ಕೇವಲ ನಾಲ್ಕು ವರ್ಷದಲ್ಲಿ ಇಬ್ಬರು ಆಟಗಾರರನ್ನು ರಾಜ್ಯ ತಂಡಕ್ಕೆ ನೀಡಿದೆ. ಕೆಎಸ್‌ಸಿಎ ಧಾರವಾಡ ವಲಯ ನಾಲ್ಕನೇ ಹಾಗೂ ಮೂರನೇ ಡಿವಿಜನ್ ಲೀಗ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆ ಮೂಲಕ ಎರಡು ಲೀಗ್ ಹಂತದಲ್ಲಿ ಬಡ್ತಿ (ಪ್ರಮೋಶನ್) ಪಡೆದಿದೆ.


19 ವರ್ಷದೊಳಗಿನವರ ರಾಜ್ಯ ತಂಡ ಪ್ರತಿನಿಧಿಸುತ್ತಿರುವ ರಾಜೇಂದ್ರ ಡಂಗನವರ ಹಾಗೂ ಹಿರಿಯ ಮಹಿಳಾ ರಾಜ್ಯ ತಂಡ ಪ್ರತಿನಿಧಿಸುವ ಅಶ್ಮೀರಾಬಾನು ಕಣಕಿ ಅವರ ಯಶಸ್ಸಿಗೆ ಬಿಸಿಸಿಐ ಲೇವಲ್ ’ಸಿ’ ಕೋಚ್ ಸೋಮಶೇಖರ ಶಿರಗುಪ್ಪಿ ಅವರ ಕಠಿಣ ತರಬೇತಿ ಹಾಗೂ ಆಟಗಾರರ ಶ್ರದ್ಧೆ, ಸತತ ಅಭ್ಯಾಸದಿಂದ ಈ ಯಶಸ್ಸು ಲಭಿಸಿದೆ.
ಅಲ್ಲದೇ ಅಕಾಡಮಿಯ ಇಬ್ಬರು ವಲಯ ತಂಡದಲ್ಲಿ ಆಡುತ್ತಿದ್ದಾರೆ. ಇಲ್ಲಿ ಸಂಘಟನಾತ್ಮಕ, ರಚನಾತ್ಮಕ ಹಾಗೂ ಕೌಶಲಪೂರ್ಣ ತರಬೇತಿ ನೀಡಲಾಗುತ್ತಿದೆ. ಹಾಗೂ ಕ್ರಿಕೆಟ್ ಆಟದ ಬೇಸಿಕ್ ಹಾಗೂ ಉತ್ಕೃಷ್ಟ ಕೌಶಲಗಳಿಗೆ ಆದ್ಯತೆ ನೀಡ ಲಾಗುತ್ತಿರುವುದರಿಂದ ಸೋಮಶೇಖರ ಶಿರಗುಪ್ಪಿ ಅವರಲ್ಲಿ ಒನ್ ಆನ್ ಒನ್ ತರಬೇತಿಗಾಗಿ ಕೇರಳ ರಾಜ್ಯ ಜ್ಯೂನಿಯರ್ಸ್ ತಂಡದ ಆಟಗಾರರು, ಉತ್ತರಪ್ರದೇಶ, ಜಾರ್ಖಂಡ್, ಗೋವಾದಿಂದ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.

ಸ್ಥಳಾಂತರವಾದ ಅಕಾಡೆಮಿ

ನಾಲ್ಕು ವರ್ಷದ ಹಿಂದೆ ಅಂದರೆ 2018 ರಲ್ಲಿ ಹುಬ್ಬಳ್ಳಿಯ ಗೋಕುಲ ರೋಡ್ ಇನ್ಫೋಸಿಸ್ ಎದುರು ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡಮಿ ಆರಂಭವಾಗಿತ್ತು. ಆದರೆ ನಗರದ ಕೇಂದ್ರದಲ್ಲಿರುವವರಿಗೆ, ಬೇರೆ ಬೇರೆ ನಗರಗಳಿಂದ ಬರುವ ಆಟಗಾರರಿಗೆ ಅನಾನುಕೂಲತೆ ಆಗುತ್ತಿತ್ತು. ಪಾಲಕರಿಗೆ ಸಂಚಾರ ವೆಚ್ಚ ವೆಚ್ಚದಾಯಕವಾಗಿತ್ತು. ಅಲ್ಲದೇ ಮಕ್ಕಳು ಶಾಲೆ ವೇಳೆ ಹೊಂದಿಸಿಕೊಳ್ಳಲು ಆಗುತ್ತಿರುವ ಅನಾನುಕೂಲತೆ, ದೂರದ ಬೇರೆ ಬೇರೆ ನಗರಗಳಿಂದ ಬರುವ ಆಟಗಾರರಿಗೆ ಉಳಿದುಕೊಳ್ಳಲು ಹತ್ತಿರವಾಗಲಿ ಎಂಬ ಹಿತದೃಷ್ಟಿಯಿಂದ ಅಕಾಡಮಿಯನ್ನು ಹುಬ್ಬಳ್ಳಿಯಲ್ಲಿನ ಹೊಸ ಕೋರ್ಟ್ ಹಿಂಭಾಗದಲ್ಲಿನ ಕಲ್ಲೂರ್ ಲೇಔಟ್‌ನಲ್ಲಿ ಸ್ಥಳಾಂತರಿಸಲಾಗಿದೆ.

ತರಬೇತಿ ಏ.1ರಿಂದ

ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡಮಿಯಿಂದ ಏ.1ರಿಂದ ಮೇ 15ರ ವರೆಗೆ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಆರಂಭವಾಗಲಿದೆ. ತರಬೇತಿಗೆ 8 ವರ್ಷದ ಮಕ್ಕಳಿಂದ 22 ವರ್ಷದವರೆಗಿನವರು ಸೇರಬಹುದಾಗಿದೆ. ಬೇಸಿಗೆ ಕ್ರಿಕೆಟ್ ತರಬೇತಿ ಹಾಗೂ ವರ್ಷ ಪೂರ್ಣ ತರಬೇತಿಗೆ ಸೇರ ಬಯಸುವವರು 9535913130,7899425035 &  7022876250 ಗೆ ಸಂಪರ್ಕಿಸಬಹುದಾಗಿದೆ.

 

administrator

Related Articles

Leave a Reply

Your email address will not be published. Required fields are marked *