ಹುಬ್ಬಳ್ಳಿ: ಈಚೆಗೆ ನಡೆದ ಪಿಎಸ್‌ಐ ಪರೀಕ್ಷೆ ಮತ್ತು 540 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅವ್ಯವಹಾರದ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಇಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಪೋಲಿಸ್ ಸಬ್ ಇನ್‌ಸ್ಪೆಕ್ಟರ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಈಗಾಗಲೇ ಹೋರಾಟ ಸೇರಿದಂತೆ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಆದರೆ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಲ್ಲದೇ ಯಾವುದೇ ಅಕ್ರಮವಾಗಿಲ್ಲವೆಂದು ಗೃಹ ಮಂತ್ರಿಗಳು ವಿಧಾನಸಭೆಯ ಕಾರ್ಯ ಕಲಾಪದಲ್ಲಿ ಹೇಳಿದ್ದು ಈ ನೇಮ ಕಾತಿಗಳಲ್ಲಿ ಸರ್ಕಾರದ ಕೈವಾಡವೂ ಇದೆ ಎಂದು ಮಾತನಾಡಿದ ಮುಖಂಡರು ಆರೋಪಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವವರನ್ನು ಸಂಪೂರ್ಣ ಪರೀಕ್ಷೆ ಮಾಡಿ ಪರೀಕ್ಷಾ ಕೊಠಡಿಗೆ ಬಿಡಬೇಕು. ವರ್ಷದ ಆರಂಭದಲ್ಲಿಯೇ ಪರೀಕ್ಷೆಗಳ ಅಧಿಸೂಚನೆ ಹೊರಡಿಸಬೇಕು. ಒಬ್ಬ ವಿದ್ಯಾರ್ಥಿ ಒಂದೇ ಅರ್ಜಿ ಸಲ್ಲಿಸಲು ಗುರತಿನ ಚೀಟಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಎಎಪಿ ಜಿಲ್ಲಾಧ್ಯಕ್ಷ ಅನಂತಕುಮಾರ ಬುಗಡಿ ಜಿಲ್ಲಾ ಉಪಾಧ್ಯಕ್ಷ ಪ್ರವೀಣ ಕುಮಾರ ನಡಕಟ್ಟಿನ, ಸಂಘಟನಾ ಕಾರ್ಯದರ್ಶಿ ಎಜಾಜ್ ಅಹ್ಮದ್ ಶೇಖ್, ವಿಕಾಸ ಸೊಪ್ಪಿನ,ಅಲಾಗೊಂದ ಬಿರಾದಾರ, ಬಸವರಾಜ ಮುದಿಗೌಡರ, ಶಶಿಕುಮಾರ ಸುಳ್ಳದ,ಶ್ಯಾಮ ನರಗುಂದ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ಇದಕ್ಕೂ ಮೊದಲು ಶಹೀದ ದಿನದಂಗವಾಗಿ ಆಪ್ ವತಿಯಿಂದ ಶ್ರೀನಗರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತಿರಂಗಾ ಯಾತ್ರೆ ಮಾಡಲಾಯಿತು.