ಹುಬ್ಬಳ್ಳಿ: ಲವ್ ಜಿಹಾದ್ ಸಂತ್ರಸ್ತೆ ಹಿಂದು ಸಮಾಜದ ಮಹಿಳೆ ಅಪೂರ್ವ ಪುರಾಣಿಕ ಅವರಿಗಾದ ಮಾರಣಾಂತಿಕ ಹಲ್ಲೆ ಮತ್ತು ದೌರ್ಜನ್ಯ ಖಂಡಿಸಿ ನಗರದಲ್ಲಿಂದು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಹಿಂದು ಸಮಾಜದ ಬಾಂಧವರು, ಮಾತಾ ಭಗಿನಿಯರು ಪಾಲ್ಗೊಂಡು ಲವ್ ಜಿಹಾದ್‌ಗೆ ಅಂತ್ಯ ಹಾಡಲು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಇಂತಹ ಲವ್ ಜಿಹಾದ್ ಘಟನೆಗಳು ಮೇಲಿಂದ ಮೇಲೆ ಮರುಕಳಿಸುತ್ತಿದ್ದು, ಹಿಂದೂ ಯುವತಿಯರ ಮಾನಭಂಗ, ಬಲವಂತ, ವಂಚನೆ, ಮೋಸದ ಮದುವೆಯ ಮೂಲಕ ಸಮಾಜದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ಅಪೂರ್ವಳ ಪ್ರಕರಣದಲ್ಲಿ ಲವ್ ಜಿಹಾದ್‌ಗೆ ಪ್ರಚೋದಿಸಿದ ಎಲ್ಲ ಸಂಘಟನೆ ಮತ್ತು ಅಪೂರ್ವಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ ಮೌಲ್ವಿಗಳ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸ ಬೇಕು ಎಂದು ಒತ್ತಾಯಿಸಲಾಯಿತು.
ಸಂಯೋಜಕ ಶಿವಾನಂದ ಸತ್ತಿಗೇರಿ, ಮಹಾನಗರ ಕಾರ್ಯದರ್ಶಿ ರಮೇಶ ಕದಂ, ಹುಡಾ ಸದಸ್ಯ ಚಂದ್ರಶೇಖರ ಗೋಕಾಕ, ವಸಂತ ನಾಡಜೋಶಿ, ದತ್ತಮೂರ್ತಿ ಕುಲಕರ್ಣಿ,ವಿಜಯ ನಾಡಜೋಶಿ, ಡಿ.ಪಿ.ಪಾಟೀಲ, ಶಂಕರ ಪಾಟೀಲ, ಎನ್.ಎಚ್.ನಿಡಗುಂದಿ, ನರಸಿಂಹ ಕೊತವಾಲ, ಸುನೀಲ ಗುಮಾಸ್ತೆ, ಮನೋಹರ ಪರ್ವತಿ, ಗೋಪಾಲ ವೇದಾ ನಾಡಜೋಶಿ, ಸಂದ್ಯಾ ದೀಕ್ಷೀತ್, ಭಾರತಿ ನರಗುಂದ, ಪಾಲಿಕೆ ಸದಸ್ಯ ರೂಪಾ ಶೆಟ್ಟಿ, ವಿಜಯ ಕ್ಷೀರಸಾಗರ,ವಿಲಾಸ ಕುಲಕರ್ಣಿ.ಸೇರಿದಂತೆ ಬ್ರಾಹ್ಮಣ ಸಂಘಟನೆಗಳು ವಿವಿಧ ಸಮುದಾಯಗಳ ಪ್ರಮುಖರು ಪಾಲ್ಗೊಂಡಿದ್ದರು.