ಮನೆ ಬಾಗಿಲು ತೆರೆಯದ ಮುಂದಲಮನೆ
ಮುಂಡಗೋಡ: ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಉದ್ಯೋಗ ಪಡೆದಿದ್ದಾರೆಂಬ ದೂರಿನ ಹಿನ್ನಲೆಯಲ್ಲಿ ಇಲ್ಲಿನ ತಹಶೀಲ್ದಾರ್ ಶ್ರೀಧರ ಮುಂದಲಮನೆ ಅವರ ಬಂಧನಕ್ಕೆ ಕಲಬುರಗಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್.ಪಿ. ರಶ್ಮಿ ಅವರು ಮುಂಡಗೋಡಕ್ಕೆ ಆಗಮಿಸಿದ್ದಾರೆ.
2014 ನೇ ಬ್ಯಾಚ್‌ನಲ್ಲಿ ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದ ಕೊಪ್ಪಳ ಜಿಲ್ಲೆ ಯಲಬುರ್ಗಾ ಸನಿಹದ ಕುಕನೂರು ಗ್ರಾಮದ ಶ್ರೀಧರ ಮುಂದಲಮನೆ ಪ್ರಸಕ್ತ ಮುಂಡಗೋಡ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಸರ್ಕಾರಿ ನೌಕರಿ ಪಡೆದಿದ್ದಾರೆ ಎಂಬ ದೂರು ದಾಖಲಾಗಿದ್ದು, ತಹಶೀಲ್ದಾರ್ ಬಂಧನಕ್ಕೆ ರಶ್ಮಿ ಸೇರಿ ನಾಲ್ವರು ಶುಕ್ರವಾರ ಬೆಳಗಿನ ಜಾವ ಆಗಮಿಸಿದ್ದಾರೆ. ತಹಸೀಲ್ದಾರ್ ಮನೆ ಮುಂದೆ ಹಾಗೂ ಹಿಂದೆ ಕಾಯುತ್ತಾ ಕುಳಿತ್ತಿದ್ದಾರೆ. ಮಧ್ಯಾಹ್ನ 1 ಗಂಟೆಯಾದರೂ ತಹಶೀಲ್ದಾರ್‌ರ ಮನೆ ಬಾಗಿಲು ತೆರೆದಿಲ್ಲ.
ಶ್ರೀಧರ ಮುಂದಲಮನೆ ಅವರು ತಾನು ವಾಲ್ಮೀಕಿ ಎಂದು ನಕಲಿ ಜಾತಿ ಪ್ರಮಾಣಪತ್ರ ನೀಡಿ ಕೆಲಸಕ್ಕೆ ಸೇರಿದ್ದಾರೆ ಎಂದು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ 2022ರ ಫೆಬ್ರವರಿ 12 ರಂದು ಗೀರೀಶ ರೊಡಕರ ಎಂಬುವರು ಪ್ರಕರಣ ದಾಖಲಿಸಿದ್ದಾರೆ.