ಹುಬ್ಬಳ್ಳಿ: ಶಾಲಾ ಸಮವಸ್ತ್ರ ಧರಿಸದೆ ಬುರ್ಖಾಕಾಧಾರಿಯಾಗಿ ಬಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಮೇಲ್ವಿಚಾರಕರ ಮನವಿ ಮೇರೆಗೆ ವಾಪಸ್ ಮನೆಗೆ ತೆರಳಿ ಸಮವಸ್ತ್ರ ಧರಿಸಿಕೊಂಡು ವಾಪಸ್ ಬಂದ ಘಟನೆ ಹುಬ್ಬಳ್ಳಿಯ ಶಾಂತಿನಿಕೇತನ ಪರೀಕ್ಷಾ ಕೇಂದ್ರದಲ್ಲಿ ಸಂಭವಿಸಿದೆ.
ವಿದ್ಯಾರ್ಥಿನಿ ಸರ್ದಾರ್ ಮೆಹಬೂಬ್ ಅಲಿಖಾನ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಬುರ್ಕಾ ಧರಿಸಿ ಪರೀಕ್ಷೆ ಬರೆಯಲು ಬಂದಿದ್ದರು. ತಪಾಸಣೆ ವೇಳೆ ವಿದ್ಯಾರ್ಥಿನಿ ಸಮವಸ್ತ್ರ ಧರಿಸದೇ ಇರುವುದು ಕಂಡು ಬಂದ ಹಿನ್ನೆಲೆ, ಸಮವಸ್ತ್ರ ಧರಿಸಿಕೊಂಡು ಬರುವಂತೆ ಅಧಿಕಾರಿಗಳು ತಿಳಿ ಹೇಳಿದರು.
ತದನಂತರ ಪಾಲಕರ ಜತೆ ಮನೆಗೆ ವಾಪಸ್ ಹೋದ ವಿದ್ಯಾರ್ಥಿನಿ, ಕೆಲವೇ ನಿಮಿಷದಲ್ಲಿ ಸಮವಸ್ತ್ರ ಧರಿಸಿಕೊಂಡು ಬಂದು ಪರೀಕ್ಷಾ ಕೊಠಡಿಗೆ ಬಂದು ಪರೀಕ್ಷೆ ಬರೆದಳು.
ಎಸ್ಸೆಸ್ಸೆಲ್ಸಿ ಧಾರವಾಡ ಜಿಲ್ಲೆಯಲ್ಲೂ ಬಿಗಿ ಬಂದೋಬಸ್ತ
ಧಾರವಾಡ: ಜಿಲ್ಲೆಯಲ್ಲಿ ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂS ಗೊಳ್ಳಲಿದ್ದು, 116 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 28,291ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಕುಸುಗಲ್ ಕೇಂದ್ರದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ವಿದ್ಯಾರ್ಥಿಗಳಿಗೆ ಶುಭ ಕೋರಿದರೆ, ಧಾರವಾಡದಲ್ಲಿ ಸ್ವತಃ ಜಿಲ್ಲಾಧಿಕಾರಿ ನಿತೇಶ ಪಾಟೀಲ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕೋವಿಡ್-19 ಮುನ್ನೆಚ್ಚರಿಕಾ ಕ್ರಮ ಕೈಗೊಂಡು, ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಗಳನ್ನು ಬರೆದು, ಅದರ ಮಾಹಿತಿವುಳ್ಳ ಫಲಕಗಳನ್ನು ಹೊರಗಡೆ ಪ್ರದರ್ಶಿಸಲಾಗಿದ್ದು,ಅವಳಿನಗರದಲ್ಲಿ ಒಟ್ಟು 46 ಪರೀಕ್ಷಾ ಕೇಂದ್ರಗಳಿದ್ದರೆ, ಗ್ರಾಮೀಣ ಭಾಗದಲ್ಲಿ ಒಟ್ಟು 52 ಕೇಂದ್ರಗಳನ್ನು ತೆರೆಯಲಾಗಿದೆ.
ಯಾವುದೇ ಭಯವಿಲ್ಲದೇ ಮಕ್ಕಳನ್ನು ಪರೀಕ್ಷೆಗೆ ಮುಕ್ತವಾಗಿ ಕಳುಹಿಸಿಕೊಡ ಬೇಕು. ಇದಲ್ಲದೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸಹಾಯಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಹಾಯವಾಣಿ ಪ್ರಾರಂಭಿಸಲಾಗಿದೆ.