ಹುಬ್ಬಳ್ಳಿ-ಧಾರವಾಡ ಸುದ್ದಿ
ಸತ್ತೂರ ಬಳಿಯ ಅನಧೀಕೃತ ಡಬ್ಬಾ ಅಂಗಡಿ ತೆರವು

ಸತ್ತೂರ ಬಳಿಯ ಅನಧೀಕೃತ ಡಬ್ಬಾ ಅಂಗಡಿ ತೆರವು

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ರಸ್ತೆ ಬದಿಯಲ್ಲಿನ ಅನಧೀಕೃತ ಡಬ್ಬಾ ಅಂಗಡಿಗಳ ತೆರವು ಕಾರ್ಯವನ್ನು ಇಲ್ಲಿನ ಸತ್ತೂರ ಬಳಿ ಇಂದು ಬೆಳಗ್ಗೆ ಕೈಕೊಳ್ಳಲಾಯಿತು.
ಹುಬಳ್ಳಿ-ಧಾರವಾಡ ಮುಖ್ಯ ರಸ್ತೆಯಿಂದ ಸತ್ತೂರ ಬಳಿಯ ರಾಜಾಜಿನಗರ ಇನ್ನಿತರ ಬಡಾವಣೆಗಳಿಗೆ ತೆರಳುವ ರಸ್ತೆ ಬದಿಯಲ್ಲಿನ ಅಂಗಡಿಗಳನ್ನು ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿ ನೆರವಿನೊಂದಿಗೆ ತೆರವುಗೊಳಿಸಿದರು.


ಹುಬಳ್ಳಿ-ಧಾರವಾಡ ಮುಖ್ಯ ರಸ್ತೆಯಿಂದ ವಿವಿಧ ಬಡಾವಣೆಗಳಿಗೆ ತೆರಳುವ ರಸ್ತೆಗಳು ಕೆಟ್ಟು ಹೋಗಿದ್ದವು. ಹದಗೆಟ್ಟ ರಸ್ತೆಗಳಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿತ್ತು. ಮಳೆಗಾಲದಲ್ಲಿ ತಗ್ಗುಗಳಲ್ಲಿ ನೀರು ನಿಂತು ವಾಹನಗಳ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತಿತ್ತು.
ಇನ್ನು ರಸ್ತೆ ಬದಿಯಲ್ಲಿ ಅನೇಕರು ಅನಧೀಕೃತ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡಿದ್ದರು. ಈ ಅಂಗಡಿಗಳಲ್ಲಿ ಕೆಲವು ಲಿಡ್ಕರ್ ಚರ್ಮಗಾರಿಕೆ ಕುಟೀರಗಳಿದ್ದವು. ಆದರೆ, ಈ ಕುಟೀರಗಳಲ್ಲಿ ಕಿರಾಣಿ/ಹೊಟೆಲ್ ವ್ಯಾಪಾರ ನಡೆಸಲಾಗುತ್ತಿತ್ತು. ಇನ್ನು ಈ ಅಂಗಡಿಗಳು ಮುಂದೆ ಮನಬಂದಂತೆ ವಾಹನಗಳನ್ನು ನಿಲ್ಲಿಸುವುದರಿಂದ ರಸ್ತೆಗಳಲ್ಲಿ ವಾಹನಗಳು ಮತ್ತು ಮತ್ತು ಸಾರ್ವಜನಿಕರು ಸಂಚರಿಸಲು ತೊಂದರೆ ಆಗುತ್ತಿತ್ತು. ಇನ್ನೊಂದೆಡೆ ಈ ಅಂಗಡಿಗಳ ಬಳಿ ನಿಂತ ಬೀದಿ ಕಾಮಣ್ಣರ ಕಾಟದಿಂದ ಮಹಿಳೆಯರು ಮತ್ತು ಯುವತಿಯರು ರೋಸಿ ಹೋಗಿದ್ದರು.


ಕಾರಣ ರಸ್ತೆ ಬದಿಯಲ್ಲಿನ ಅನಧೀಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಸಮತಾ ಸಂಘರ್ಷ ಸೇನಾದ ಅಧ್ಯಕ್ಷ ಮಾರುತಿ ಮಾಕಡವಾಲೆ ಅವರು ಅನೇಕ ಸಲ ಪಾಲಿಕೆ ಆಯುಕ್ತರಿಗೆ ಮನವಿ ಕೂಡ ಸಲ್ಲಿಸಿದ್ದರು.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪಾಲಿಕೆ ಆಯುಕ್ತರಾದ ಡಾ.ಗೋಪಾಲಕೃಷ್ಣ ಬಿ. ಅವರು ಅನಧೀಕೃತ ಅಂಗಡಿಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಿದ್ದರು. ಆಯುಕ್ತರ ನಿರ್ದೇಶನದಂತೆ ಇದೀಗ ಪಾಲಿಕೆಯ ಅಧಿಕಾರಿಗಳು ನಗರದ ವಿವಿಧೆಡೆಗಳಲ್ಲಿನ ಅನಧೀಕೃತ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಈ ಕಾರ್ಯ ಇನ್ನೂ ಬಹಳಷ್ಟು ಕಡೆಗಳಲ್ಲಿ ನಡೆಯಬೇಕು ಎಂದು ಸಾರ್ವಜನಿಕರು ಬಯಸುತ್ತಿದ್ದು, ಇದಕ್ಕೆ ಪಾಲಿಕೆ ಅಧಿಕಾರಿಗಳು ಯಾವ ರೀತಿ ಕಾರ್ಯೋನ್ಮುಖ ಆಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

administrator

Related Articles

Leave a Reply

Your email address will not be published. Required fields are marked *