ಧಾರವಾಡ: ತೈಲ ಮತ್ತು ಇತರ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇಲ್ಲಿನ ಜಯನಗರ ಫುಡ್ ಪ್ಲಾಜಾ ಹತ್ತಿರ ರಾಣಿ ಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಅಡುಗೆ ಅನಿಲ ಸಿಲಿಂಡರ್ ಇನ್ನಿತರ ವಸ್ತುಗಳನ್ನು ಪ್ರದರ್ಶಿಸಿದ ಮುಖಂಡರು, ಜನತೆಯ ಹಿತ ಕಾಯದ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮುಖಂಡರು, ಜನಸಾಮಾನ್ಯರು ದಿನನಿತ್ಯ ಬಳಸುವ ಆಹಾರ ಪದಾರ್ಥ, ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ವಿದ್ಯುತ ಮುಂತಾದವುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಜನರು ಜೀವನ ಸಾಗಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಣವಾಗಿದೆ. ಆದರೆ, ದೇಶದಲ್ಲಿ ಅಭಿವೃದ್ಧಿ ಬದಲು ಭಾವನಾತ್ಮಕ ವಿಷಯಗಳತ್ತ ಜನರನ್ನು ತಿರುಗಿಸಲು ಆಡಳಿತಾರೂಢ ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದರು.
ರಾಣಿ ಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗೌರಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ, ಮುಖಂಡರಾದ ಮುತ್ತುರಾಜ ಮಾಕಡವಾಲೆ, ದೀಪಾ ಗೌರಿ, ಆನಂದ ಸಿಂಗನಾಥ, ವಸಂತ ಅರ್ಕಾಚಾರ, ಪ್ರಭೂ ತಾಂವಸಿ, ಇಮ್ರಾನ ಕಳ್ಳಿಮನಿ, ಜೆಮ್ಸ ಯೆಮಾ, ನಾಗರಾಜ ಅಪ್ಪಣ್ಣವರ, ರೊಹಿತ ಕಲಾಲ, ಸೌರಭ ಮಾಸೆಕರ, ಮಂಜು ಕಟ್ಟಿ, ಶಂಕರ ಮುಗಳಿ, ಸತೀಶ ಗಿರಿಯಣ್ಣವರ, ಜಯಂತ ಸಾಗರ, ಪ್ರಭು ತಂಶಿ, ಮನೋಜ ಕರ್ಜಗಿ ಮತ್ತಿತರು ಪ್ರತಿಭಟನೆಯಲ್ಲಿದ್ದರು.