ಹುಬ್ಬಳ್ಳಿ-ಧಾರವಾಡ ಸುದ್ದಿ
ಆರ್ಥಿಕ ನೆರವು ನೀಡಿ ಪ್ರಿಯಾಂಕ ಸಾಧನೆಗೆ ಬೆನ್ನು ತಟ್ಟಿ

ಆರ್ಥಿಕ ನೆರವು ನೀಡಿ ಪ್ರಿಯಾಂಕ ಸಾಧನೆಗೆ ಬೆನ್ನು ತಟ್ಟಿ

ಧಾರವಾಡ: ಜಿಲ್ಲೆಯ ಮುಗಳಿ ಗ್ರಾಮದ ಪ್ರಿಯಾಂಕ ಮುಗಳಿ ಕ್ರೀಡೆ ಹಲವು ಸಾಧನೆ ಗೈದಿದ್ದಾರೆ. ಈಗ ಇವಳು 19ನೇ ಐಎಸ್‌ಎಫ್ ವರ್ಲ್ಡ್ ಸ್ಕೂಲ್ ಜಿಮ್ನಾಸೈಡ್ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.


ಮೇ 14ರಿಂದ 22ರವರೆಗೆ ಪ್ರಾನ್ಸ್‌ನಲ್ಲಿ ನಡೆಯಲಿರುವ ಸ್ಪರ್ಧೆಗೆ ತೆರಳಬೇಕಾಗಿದೆ. ಆದರೆ ಇವಳಿಗೆ ಅಲ್ಲಿಗೆ ತೆರಳಲು ಆರ್ಥಿಕ ತೊಂದರೆ ಯಂಟಾಗಿದೆ. ಪ್ರಿಯಾಂಕ ತಂದೆ ಚಿಗರಿ ಬಸ್ ಚಾಲಕರಾಗಿದ್ದಾರೆ. ಮಗಳ ಸಾಧನೆಗೆ ಆರ್ಥಿಕ ತೊಂದರೆ ಆಗಿದೆ. ಇವಳು ಇಲ್ಲಿ ಭಾಗವಹಿಸಲು ಸುಮಾರು 2.5ಲಕ್ಷ ಹಣ ಬೇಕಾಗಿದೆ. ಅಷ್ಟು ಹಣ ನನ್ನಲ್ಲಿ ಇಲ್ಲ ಅದಕ್ಕೆ ದಾನಿಗಳು ನನಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ದಾನಿಗಳು ಈ ಕ್ರೀಡಾ ಪಟುವಿಗೆ ಸಹಾಯ ಮಾಡಬಯಸುವವರು ಎಸ್‌ಬಿಐ ಖಾತೆ ನಂಬರ್ 38967679626, ಐಎಫ್‌ಎಸ್‌ಸಿ ಕೋಡ್ SBIN0000833ಗೆ ಹಣ ಪಾವತಿಸಬೇಕು ಎಂದು ಮನವಿ ಮಾಡಿದ್ದಾರೆ.


ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ನಮ್ಮ ಕುಟುಂಬಕ್ಕೆ ಸಾಧ್ಯವಿರುವುದಿಲ್ಲ. ಆದ್ದರಿಂದ ತಾವುಗಳು ದಯಮಾಡಿ ಆರ್ಥಿಕ ಸಹಾಯ ಮಾಡಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿ ಕೊಡಬೇಕಾಗಿ ವಿನಂತಿ. ನಾನು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಹೆಸರು ತರಲು ಪ್ರಯತ್ನಿಸುತ್ತೇನೆ ಎಂದು ಪ್ರಿಯಾಂಕ ಆತ್ಮವಿಶ್ವಾಸದಿಂದ ಹೇಳುವಾಗ ಅವಳ ಕಣ್ಣುಗಳು ಒದ್ದೆಯಾಗಿದ್ದವು.
ಕ್ರೀಡೆಗೆ ಪ್ರೋತ್ಸಾಹ ನೀಡಬೇಕೆಂದು ಹೇಳುವ ಜನಪ್ರತಿನಿಧಿಗಳು ಪ್ರಿಯಾಂಕಗೆ ಸಹಾಯ ಮಾಡಲು ಮುಂದೆ ಬರಬೇಕು.

administrator

Related Articles

Leave a Reply

Your email address will not be published. Required fields are marked *