ಹುಬ್ಬಳ್ಳಿ-ಧಾರವಾಡ ಸುದ್ದಿ
ಶಿರಹಟ್ಟಿ ಫಕ್ಕಿರೇಶ್ವರರ ಜನ್ಮದಿನ ಭಾವೈಕ್ಯ ದಿನವಾಗಲಿ

ಶಿರಹಟ್ಟಿ ಫಕ್ಕಿರೇಶ್ವರರ ಜನ್ಮದಿನ ಭಾವೈಕ್ಯ ದಿನವಾಗಲಿ

ಸಿಎಂ ಹೇಳಿಕೆಗೆ ಫಕ್ಕಿರ ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ

ಹುಬ್ಬಳ್ಳಿ: ಗದುಗಿನ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಜನ್ಮದಿನವಾದ ಫೆ.21ನ್ನು ರಾಜ್ಯ ಸರ್ಕಾರದಿಂದ ಭಾವೈಕ್ಯ ದಿನವನ್ನಾಘಿ ಆಚರಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಶಿರಹಟ್ಟಿ ಫಕ್ಕಿರೇಶ್ವರ ಸಂಸ್ಥಾನಮಠದ ಫಕ್ಕಿರ ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಹಟ್ಟಿ ಫಕ್ಕಿರೇಶ್ವರರು ಜನಿಸಿರುವ ದಿನವಾದ (ಮೇ 16) ಆಗಿ ಹುಣ್ಣಿಮೆಯನ್ನು ಶಿರಹಟ್ಟಿ ಫಕ್ಕಿರೇಶ್ವರರ ಭಾವೈಕ್ಯ ದಿನವಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
೫೦೦ ವರ್ಷಗಳ ಕಾಲ ಭಾವೈಕ್ಯತೆಯನ್ನು ಜೀವಮತವಾಗಿಟ್ಟುಕೊಂಡು ಬಂದಿರುವ ಶಿರಹಟ್ಟಿ ಸಂಸ್ಥಾನಮಠದ ಪರಂಪರೆಯನ್ನು ತಿಳಿಯದೇ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಒಂದು ಐತಿಹಾಸಿಕ ಪ್ರಸಿದ್ಧ ಭಾವೈಕ್ಯತಾ ಪರಂಪರೆ ಮಠವನ್ನೇ ಸಮಾಧಿ ಮಾಡುವ ಕೆಲಸ ಮಾಡಿದ್ದಾರೆ. ಯಾವುದೋ ಒತ್ತಡಕ್ಕೆ ಮಣಿದು ಭಾವೈಕ್ಯ ದಿನ ಘೋಷಣೆ ಮಾಡಿರುವುದು ಅಧ್ಯಯನದ ಕೊರತೆಗೆ ಹಿಡಿದ ಸಾಕ್ಷಿಯಾಗಿದೆ ಎಂದು ಹೇಳಿದರು.


ಬಹಳ ವರ್ಷಗಳ ಹಿಂದೆ ಆ ಶ್ರೀಗಳಿಗೆ ಕೋಮು ಸೌಹಾರ್ಧ ಪ್ರಶಸ್ತಿ ನೀಡಲಾಯಿತು. ಆ ಪ್ರಶಸ್ತಿ ಶಿರಹಟ್ಟಿ ಫಕ್ಕಿರೇಶ್ವ ಮಠಕ್ಕೆ ಅಥವಾ ಮೂರುಸಾವಿರ ಮಠದ ಡಾ.ಮೂಜಗಂ ಅವರಿಗೆ ಸಲ್ಲಬೇಕಿತ್ತು. ಶಿರಹಟ್ಟಿ ಸಂಸ್ಥಾನಮಠದಲ್ಲಿ ಆಗಿ ಹುಣ್ಣಿಮೆಯಂದು ಜಾತ್ರೆ, ರಥೋತ್ಸವ ಜರಗುತ್ತದೆ. ಎಲ್ಲ ಧರ್ಮದವರು ಪಾಲ್ಗೊಳ್ಳುತ್ತಾರೆ. ಫಕ್ಕಿರೇಶ್ವರ ಮಠ ೬೦ ಶಾಖಾ ಮಠ ಹೊಂದಿದೆ. ಅದರಲ್ಲಿ ಐದು ಮಸೀದಿಗಳು ಕೂಡ ಮಠದ ಆಡಳಿತದಲ್ಲಿವೆ. ಐದು ಮಸೀದಿಗಳಲ್ಲಿ ಹಿಂದು-ಮುಸ್ಲಿಂ ಸಂಪ್ರದಾಯದ ಪ್ರಕಾರ ಪೂಜೆ ಮಾಡಲಾಗುತ್ತಿದೆ. ಅದನ್ನು ಮುಖ್ಯಮಂತ್ರಿಗಳು ಬಂದು ನೋಡಬೇಕು. ಇಲ್ಲವಾದರೆ ಅಧ್ಯಯನ ತಂಡವನ್ನಾದರೂ ಕಳುಹಿಸಬೇಕು ಎಂದರು.

administrator

Related Articles

Leave a Reply

Your email address will not be published. Required fields are marked *