ಹುಬ್ಬಳ್ಳಿ-ಧಾರವಾಡ ಸುದ್ದಿ
ಲಂಚ ಪಡೆದವರು ರಶೀದಿ ಕೊಡುತ್ತಾರೆಯೇ! ಸಿಎಂ, ಸಚಿವರಿಗೆ ದಿಂಗಾಲೇಶ್ವರ ಶ್ರೀ ತಿರುಗೇಟು

ಲಂಚ ಪಡೆದವರು ರಶೀದಿ ಕೊಡುತ್ತಾರೆಯೇ! ಸಿಎಂ, ಸಚಿವರಿಗೆ ದಿಂಗಾಲೇಶ್ವರ ಶ್ರೀ ತಿರುಗೇಟು

ಸಿಎಂ, ಸಚಿವರಿಗೆ ದಿಂಗಾಲೇಶ್ವರ ಶ್ರೀ ತಿರುಗೇಟು


ಗದಗ: ಮಠ, ಮಂದಿರಗಳಿಗೆ ದೇಣಿಗೆ ನೀಡಿದರೆ ಅಲ್ಲಿ ರಶೀದಿ ಕೊಡುತ್ತಾರೆ. ಆದರೆ, ಲಂಚ ಪಡೆದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ದೇಣಿಗೆ ಪಾವತಿ ನೀಡುತ್ತಾರೆಯೇ ಎಂದು ಲಂಚದ ಬಗ್ಗೆ ದಾಖಲೆ ಕೇಳಿದ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಶಿರಹಟ್ಟಿ ಫಕ್ಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಶ್ರೀಗಳು ತಿರುಗೇಟು ನೀಡಿದ್ದಾರೆ.
ಮಠದಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಮಠಕ್ಕೆ ಮಂಜೂರಾದ 75 ಲಕ್ಷ ಅನುದಾನದಲ್ಲಿ ಅಧಿಕಾರಿಗಳು ೨೫ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕಿಂತ ಹೆಚ್ಚಿನ ದಾಖಲೆಯ ಅವಶ್ಯಕತೆ ಇದೆಯೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ಹೊರತುಪಡಿಸಿದರೆ ಎಲ್ಲಾ ಇಲಾಖೆಗಳಲ್ಲಿ ಅನುದಾನ ತೆಗೆದುಕೊಳ್ಳಲು ಎಲ್ಲ ಮಠಾಧೀಶರು ಕಮಿಷನ್ ನೀಡಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಮುಂದಾಗುತ್ತಿಲ್ಲ ಎಂದರು.
ಗದುಗಿನ ತೋಂಟದಾರ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಜನ್ಮದಿನವನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಸಿಎಂ ಘೋಷಿಸಿರುವುದು ಖಂಡನೀಯ. ಬ್ರಾಹ್ಮಣ ಸಮುದಾಯವನ್ನು ಸದಾ ದ್ವೇಷಿಸುತ್ತಿದ್ದ ಲಿಂಗೈಕ್ಯ ಶ್ರೀಗಳು, ಭಾವೈಕ್ಯತೆಯ ಕಡುವೈರಿಯಾಗಿದ್ದಾರೆ. ವಿರೋಧ ಪಕ್ಷದ ಬೆಂಬಲದಿಂದ ಲಿಂಗಾಯತ ಸಮುದಾಯವನ್ನು ಬೇರೆ ಮಾಡಿ ರಾಜ್ಯ ಹೊತ್ತಿ ಉರಿಯುವಂತಹ ಘಟನೆ ಹುಟ್ಟುಹಾಕಿರುವುದು ಅರಿವಿಲ್ಲವೇ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.
ಸಚಿವ ಸಿ.ಸಿ.ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿ.ಸಿ.ಪಾಟೀಲರಿಗೆ ರಾಜಕೀಯ ಮಾಡಲು ಮಠಗಳು ಸಾಲುತ್ತಿಲ್ಲ. ಅವರು ಅಧಿಕಾರದ ಆಸೆಗಾಗಿ ಊಸರವಳ್ಳಿ ಗುಣಗಳನ್ನು ಅಳವಡಿಸಿಕೊಂಡವರು ಯಾರು ಎಂದು ಮೊದಲು ಅರಿಯಬೇಕು. ರಾಜಕೀಯ ಗುಂಗಿನಲ್ಲಿ ಪ್ರಜ್ಞಾಹೀನರಾಗಬಾರದು ಎಂದರು.

 

administrator

Related Articles

Leave a Reply

Your email address will not be published. Required fields are marked *