ಹುಬ್ಬಳ್ಳಿ-ಧಾರವಾಡ ಸುದ್ದಿ

ಉ.ಪ್ರ.ಸರ್ಕಾರ ಮಾದರಿ ಕ್ರಮಕ್ಕೆ ಮುಂದಾಗಿ ಗಲಭೆಕೋರರ ಮೇಲೆ ಕೋಕಾ ಹಾಕಿ

 

ಹುಬ್ಬಳ್ಳಿ: ಇಲ್ಲಿ ನಡೆದ ಗಲಭೆಯಲ್ಲಿ ಎಐಎಂಐಎಂ ಸೇರಿದಂತೆ ಕಾಂಗ್ರೆಸ್ ಕೈವಾಡ ಸಹ ಇದೆ. ಬಿಜೆಪಿ ಸರ್ಕಾರ ಉತ್ತರಪ್ರದೇಶ ಮಾದರಿಯಲ್ಲಿ ಕ್ರಮಕ್ಕೆ ಮುಂದಾಗಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.


ಗಲಭೆಯಲ್ಲಿ ಕಲ್ಲು ತೂರಾಟ ನಡೆದ ದಿಡ್ಡಿ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೊಮ್ಮಾಯಿಯವರೆ ನೀವು ಕೂಡ ಯೋಗಿ ಆದಿತ್ಯನಾಥರಂತಾಗಿ
ಗಲಭೆಕೋರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ.ಹಾಗಾದ್ರೆ ಮಾತ್ರ 200 ಸೀಟು ಬರೋಕೆ ಸಾಧ್ಯ ಎಂದರು.
ಇಲ್ಲಿ ಪಾಕಿಸ್ತಾನ, ಅಪಘಾನಿಸ್ತಾನ ಮಾದರಿ ಮಾಡಲು ಅವರು ಹೊರಟಿದ್ದಾರೆ. ಕೆಜಿ ಹಳ್ಳಿ, ಡಿಜೆ ಹಳ್ಳಿಯ ರೀತಿಯಲ್ಲೇ ಈ ಗಲಭೆ
ಸ್ಟೇಟಸ್ ಹಾಕಿದ್ದ ಯುವಕನ ಮನೆ ಎದುರು ಗಲಾಟೆ ಮಾಡುತ್ತಿದ್ದಾರೆ. ಆತನ ಮನೆ ಎದುರು ಮಾಂಸ ಹಾಕುತ್ತಾರೆ. ಹೀಗಾಗಿ ಅಂತವರನ್ನ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು. ಹಿಂದೂಗಳನ್ನು ಭಯಬೀತಿ ಗೊಳಿಸುವ ಉದ್ದೇಶದಿಂದ ಗಲಭೆ ರೂಪಿಸಲಾಗಿದೆ ಎಂದರು.


ಪೊಲೀಸರ ಸಕಾಲಿಕ ಕ್ರಮ ಶ್ಲ್ಯಾಘಿಸಿದ ಅವರು, ನಗರದ ಎಲ್ಲಾ ಭಾಗ ಗಳಿಂದ ಜನರು ಗಲಭೆಗೆ ಬಂದಿದ್ದಾರೆ. ಅಲ್ತಾಫ್ ಹಳ್ಳೂರು, ಕಿತ್ತೂರರನ್ನು ಬಂಧಿಸಬೇಕು, ಇವರಿಬ್ಬರು ಕುಮ್ಮಕ್ಕು ನೀಡಿ ಇಲ್ಲಿ ನಾಟಕ ಮಾಡುತ್ತಿದ್ದಾರೆ. ಸರಕಾರ ಗಲಭೆಕೋರರ ವಿರುದ್ಧ ಕೋಕಾ ಕಾಯ್ದೆ ಹಾಕಬೇಕು ಎಂದರು.


ಘಟನೆಗೆ ರಝಾ ಅಕಾಡೆಮಿ ಸಂಘಟನೆ ಕೈಜೋಡಿಸಿದೆ. ಸರ್ಕಾರ ಗಂಡಸ್ತನ ತೋರಿಸಬೇಕು ಕಠಿಣವಾದ ಕ್ರಮ ಜರುಗಿಸದಿದ್ದರೆ ಹಿಂದೂಗಳು ಸುಮ್ಮನೆ ಕೂಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಖಾಕಿ ಭದ್ರತೆಯಲ್ಲಿ ಪರೀಕ್ಷೆಗೆ
ವಿವಾದಿತ ಪೋಸ್ಟ್ ಆರೋಪಿ


ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿ ಬಂಧಿತನಾಗಿರುವ ವಿದ್ಯಾರ್ಥಿ ಅಭಿಷೇಕ ನ್ಯಾಯಾಲಯ ನಿರ್ದೇಶನ ಮೇರೆಗೆ ಇಂದು ದ್ವಿತೀಯ ಪಿಯುಸಿ ಪರೀಕ್ಷೆಗೆ ಗೋಕುಲ ರಸ್ತೆಯ ಡಾ.ಆರ್.ಬಿ.ಪಾಟೀಲ ಮಹೇಶ ಪಿಯು ಕಾಲೇಜಿನ ಕೇಂದ್ರಕ್ಕೆ ಹಾಜರಾಗಿದ್ದಾನೆ.
ಗಲಭೆಯ ಪ್ರಮುಖ ಆರೋಪಿಯಾಗಿರುವ ಅಭಿಷೇಕ್ ಏಪ್ರಿಲ್ ೩೦ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದು, ಪರೀಕ್ಷೆ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆದಿದ್ದಾನೆ.
ಹಿರೇಮಠನನ್ನು ಪೊಲೀಸರು ಇಲ್ಲಿನ ಉಪ ಕಾರಾಗೃಹದಿಂದ ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ಭದ್ರತೆಯಲ್ಲಿ ಕರೆತಂದರು.

ವಸೀಮ್ ನ್ಯಾಯಾಂಗ ವಶಕ್ಕೆ


ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್‌ಮೈಂಡ್ ಎನ್ನಲಾಗುತ್ತಿರುವ ವಸೀಂ ಪಠಾಣ್‌ನನ್ನ ಪೊಲೀಸರು ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಸಬ್ ಜೈಲಗೆ ಕಳುಹಿಸಿದ್ದಾರೆ.
ವಿಚಾರಣೆ ವೇಳೆ ವಸೀಂ ತಾನೇ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ ಅಲ್ಲಿ ಜನರು ಸೇರುವಂತೆ ಮಾಡಿದ್ದೇನೆ. ಪ್ರತಿಭಟನೆ ವೇಳೆ ಪೊಲೀಸರು ಬಗ್ಗದೇ ಹೋದರೆ ಪ್ರತಿಭಟನೆ ಮಾಡೋಣ ಎಂಬ ಸತ್ಯ ಬಾಯಿ ಬಿಟ್ಟಿದ್ದಾನೆನ್ನ ಲಾಗಿದೆ.
ನಿನ್ನೆ ಬೆಳಿಗ್ಗೆಯಷ್ಟೇ 4 ನಿಮಿಷದ ವಿಡಿಯೋ ಬಿಡುಗಡೆ ಮಾಡಿದ್ದ ವಸೀಂ ಪಠಾಣ್, ನನ್ನದೇನು ತಪ್ಪಿಲ್ಲ. ನಾನು ಗಲಭೆಯನ್ನ ನಿಲ್ಲಿಸಲು ಪ್ರಯತ್ನಿಸು ತ್ತಿದ್ದೆ. ಶಾಂತಿ ಕಾಪಾಡಿ ಎನ್ನುತ್ತಿದ್ದೆ ಎಂದಿದ್ದ. ವಿಡಿಯೋ ಬಿಡುಗಡೆ ಮಾಡಿದ 4 ಗಂಟೆಯಲ್ಲೇ ವಸೀಂನನ್ನು ವಶಕ್ಕೆ ಪಡೆಯಲಾಗಿತ್ತು.

 

administrator

Related Articles

Leave a Reply

Your email address will not be published. Required fields are marked *