ಹುಬ್ಬಳ್ಳಿ-ಧಾರವಾಡ ಸುದ್ದಿ
ಕವಿವಿ ಸಿಬ್ಬಂದಿ ಪದೋನ್ನತಿಗೆ ಕಿರುಕುಳ  ಸಿಂಡಿಕೇಟ್ ಸದಸ್ಯಗೆ ಸಿಆರ್‌ಇ ನೋಟಿಸ್

ಕವಿವಿ ಸಿಬ್ಬಂದಿ ಪದೋನ್ನತಿಗೆ ಕಿರುಕುಳ ಸಿಂಡಿಕೇಟ್ ಸದಸ್ಯಗೆ ಸಿಆರ್‌ಇ ನೋಟಿಸ್

 

ಹುಬ್ಬಳ್ಳಿ : ಕರ್ನಾಟಕ ವಿಶ್ವವಿದ್ಯಾಲಯದ ಸಿಬ್ಬಂದಿಯೊಬ್ಬರಿಗೆ ಕಿರುಕುಳ ನೀಡಿ ದೌರ್ಜನ್ಯ ನಡೆಸಿದ ಸಿಂಡಿಕೇಟ್ ಸದಸ್ಯರೊಬ್ಬರಿಗೆ ಬೆಳಗಾವಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಸಿಆರ್‌ಇ ಸೆಲ್) ಪೊಲೀಸ್ ಅಧೀಕ್ಷಕರ ಕಚೇರಿಯಿಂದ ನೋಟಿಸ್ ಜಾರಿಯಾಗಿದೆ.


ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಸಿಂಡಿಕೇಟ್ ಸದಸ್ಯರಾಗಿರುವ ರವಿಕುಮಾರ ಮಾಳಿಗೇರ ಎಂಬುವವರಿಗೆ ದಿ.21 ರಂದು ನೋಟಿಸ್ ಜಾರಿಯಾಗಿದೆ.
ವಿಶ್ವವಿದ್ಯಾಲಯದ ವೈಜ್ಞಾನಿಕ ಉಪಕರಣಗಳ ಕೇಂದ್ರದ ಟೆಕ್ನಿಷಿಯನ್ ಗಣೇಶ ಕುಂದರಗಿ ಇವರ ಪದೋನ್ನತಿ ವಿಷಯದಲ್ಲಿ ಸಿಂಡಿಕೇಟ್ ಸದಸ್ಯ ಮಾಳಿಗೇರ ಕಿರುಕುಳ ನೀಡುತ್ತಿದ್ದಾರೆಂದು ಹೇಳಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ನಿರ್ದೇಶಕರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸಿಆರ್‌ಸಿ ಬೆಳಗಾವಿಯ ಪೊಲೀಸ್ ಅಧೀಕ್ಷಕರ ಕಚೇರಿಯ ಪೊಲೀಸ್ ಉಪ ನಿರೀಕ್ಷಕರು ಹೇಳಿಕೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಮಾಳಿಗೇರ ಅವರು ನೇಮಕಗೊಂಡಂದಿನಿಂದ ಹಲವರಿಗೆ ಕಿರುಕುಳ ನೀಡುತ್ತಿದ್ದಾರೆಂಬ ಗುಸು ಗುಸು ಕರ್ನಾಟಕ ವಿ.ವಿ. ಕ್ಯಾಂಪಸ್‌ನಲ್ಲಿ ಇತ್ತಾದರೂ ಮೊದಲ ಬಾರಿ ಸಿಬ್ಬಂದಿಯೊಬ್ಬರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಕದ ತಟ್ಟಿದ್ದಾರೆ.


ಈ ಹಿಂದೆ ಮೌಲ್ಯಮಾಪನ ಕುಲಸಚಿವ ಎನ್.ಎಂ.ಸಾಲಿ ಅವರು ಹಗರಣವೊಂದರ ಪ್ರಕರಣದಲ್ಲಿ ಮಾಳಿಗೇರ ಅವರೇ ತನಿಖಾ ಸಮಿತಿಯ ಅಧ್ಯಕ್ಷರಾಗಿದ್ದರೂ ಇದುವರೆಗೂ ವರದಿಯನ್ನೇ ನೀಡಿಲ್ಲ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ನಿಯಮಗಳ ಅನ್ವಯ ತನಿಖೆ ನಡೆದಿರುವಾಗ ನಿರಪೇಕ್ಷಣಾ ಪತ್ರ ನೀಡಲು ಬರುವದಿಲ್ಲವಾದರೂ ಅವರು ಈಗ ಗೊಟಗೋಡಿಯ ಜಾನಪದ ವಿ.ವಿ.ಯ ಮೌಲ್ಯಮಾಪನ ಕುಲಸಚಿವರಾಗಿದ್ದು, ಬೇರೆಡೆ ವರ್ಗಾವಣೆಗೆ ಹೇಗೆ ನಿರಪೇಕ್ಷಣಾ ಪತ್ರ ಸಿಕ್ಕಿತು ಎಂಬುದು ಕುತೂಹಲ ಕೆರಳಿಸಿದೆ.
ಕರ್ನಾಟಕ ವಿ.ವಿ.ಕುಲಸಚಿವರಿಗೆ ಮೇಲ್ ಸಂದೇಶ ಕಳುಹಿಸಿದ್ದು,ಮಾಳಿಗೇರ ಅವರಿಗೆ ಕೂಡಲೇ ಹಾಜರಾಗುವಂತೆ ಸೂಚಿಸಿದ್ದಾರೆನ್ನಲಾಗಿದೆ.

 

 

administrator

Related Articles

Leave a Reply

Your email address will not be published. Required fields are marked *