Skip to content
Home
E-Paper
ಹುಬ್ಬಳ್ಳಿ-ಧಾರವಾಡ
ಸುತ್ತಮುತ್ತ
ರಾಜ್ಯ
ಕ್ರೈಮ್
ರಾಜಕೀಯ
ಚಿತ್ರ ಚಿತ್ತಾರ
ಕ್ರೀಡೆ
ಕತೆ-ಕವನ
ಲೇಖನ
ಫ್ಲ್ಯಾಶ್ ನ್ಯೂಸ್
Home
E-Paper
ಹುಬ್ಬಳ್ಳಿ-ಧಾರವಾಡ
ಸುತ್ತಮುತ್ತ
ರಾಜ್ಯ
ಕ್ರೈಮ್
ರಾಜಕೀಯ
ಚಿತ್ರ ಚಿತ್ತಾರ
ಕ್ರೀಡೆ
ಕತೆ-ಕವನ
ಲೇಖನ
ಫ್ಲ್ಯಾಶ್ ನ್ಯೂಸ್
Home
E-Paper
ಹುಬ್ಬಳ್ಳಿ-ಧಾರವಾಡ
ಸುತ್ತಮುತ್ತ
ರಾಜ್ಯ
ಕ್ರೈಮ್
ರಾಜಕೀಯ
ಚಿತ್ರ ಚಿತ್ತಾರ
ಕ್ರೀಡೆ
ಕತೆ-ಕವನ
ಲೇಖನ
ಫ್ಲ್ಯಾಶ್ ನ್ಯೂಸ್
Home
-
Hubli–Dharwad
-
ಸಡಗರ ಸಂಭ್ರಮದ ಬಸವೇಶ್ವರ ಜಯಂತಿ ಆಚರಣೆ
ಸಡಗರ ಸಂಭ್ರಮದ ಬಸವೇಶ್ವರ ಜಯಂತಿ ಆಚರಣೆ
Hubli–Dharwad
May 3, 2022
By
prasanna
-
3 years ago
0
1,548
Less than a minute
ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಉಪಾಧ್ಯಕ್ಷ ವಿನಯ ಕುಲಕರ್ಣಿ ಅವರು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಧಾರವಾಡ ಜಿಲ್ಲಾ ಘಟಕದ ಆಶ್ರಯದಲ್ಲಿ ಬಸವವನದಲ್ಲಿರುವ ವಿಶ್ವಗುರು ಬಸವೇಶ್ವರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ, ಜಿಲ್ಲಾಧ್ಯಕ್ಷ ಕಲ್ಲಪ್ಪ ಯಲಿವಾಳ, ಮುಖಂಡರಾದ ರಾಜಶೇಖರ್ ಮೆಣಸಿನಕಾಯಿ, ಎನ್.ಎಸ್.ಬಿರಾದಾರ್, ಡಾ.ನುಚ್ಚಿ, ಮುತ್ತಣ್ಣ ಶಿವಳ್ಳಿ, ಸುರೇಶ ಸವಣೂರ, ಆರ್.ಕೆ.ಪಾಟೀಲ್, ಬಂಗಾರೇಶ್ ಹಿರೇಮಠ್, ಸದಾನಂದ್ ಡಂಗನವರ್, ಮೈಲಾರಿ ಧಾರವಾಡ, ಕುಮಾರ್ ಕುಂದನಹಳ್ಳಿ, ವಿನಯ್ ಭಾವಿಕಟ್ಟಿ, ಶ್ರೀಮತಿ ಉಮಚಗಿ, ಸರೋಜಾ ಹೂಗಾರ್, ಅಂದಾನಪ್ಪ ಹರದಾರಿ, ನಂದಕುಮಾರ್ ಪಾಟೀಲ್, ಪಿ.ಸಿ.ಕಮ್ಮಾರ್ ಸೇರಿದಂತೆ ಇನ್ನಿತರರಿದ್ದರು.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾಮಾನವತಾವಾದಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಪಾಲಿಕೆ ಸದಸ್ಯ ಪ್ರಕಾಶ ಕುರಹಟ್ಟಿ, ಮುಖಂಡರಾದ ಸಂತೋಷ ಚಲವಾದಿ, ಪ್ರಭು ಸವದತ್ತಿ ಇನ್ನಿತರರಿದ್ದರು.
ಧಾರವಾಡದಲ್ಲಿ ಬಸವೇಶ್ವರ ಪುತ್ಥಳಿಗೆ ಶಾಸಕ ಅಮೃತ ದೇಸಾಯಿ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ, ಮುಖಂಡರಾದ ಸುನೀಲ ಮೋರೆ, ಶ್ರೀನಿವಾಸ ಕೋಟ್ಯಾನ, ಸಿದ್ದು ಕಲ್ಯಾಣಶೆಟ್ಟಿ, ಮೈಲಾರ ಉಪ್ಪಿನ, ಸುರೇಶ ಬೆದರೆ, ಮಂಜು ನೀರಲಕಟ್ಟಿ, ಸಂಗಮೇಶ ಬೂದಿಹಾಳ ಇನ್ನಿತರರು ಜೊತೆಗಿದ್ದರು.
ಬಸವ ಜಯಂತಿ ಅಂಗವಾಗಿ ಧಾರವಾಡದ ಹೆಗಡೆ ಮೆಡಿಕಲ್‌ನವರು ಬಿದಿ ಬದಿಯ ವ್ಯಾಪರಸ್ಥರಿಗೆ ಬಸವಣ್ಣನ ಚಿತ್ರ ಇರುವ ಟೊಪಿಗಳನ್ನು ಉಚಿತವಾಗಿ ವಿತರಿಸಿದರು. ಪರಿಸರ ಪ್ರೇಮಿ ಅಜಯ ಉಡಕೇರಿ, ಪರುಶರಾಮ ಕುಂಬಾರ, ಉಳವಪ್ಪ, ದೀಪಕ ಕುಳೇನವರ, ರಾಜು, ಅದಿತಿ, ಅನಗಾ ಸೇರಿದಂತೆ ಇತರರಿದ್ದರು.
ಬಸವ ಜಯಂತಿ ನಿಮಿತ್ತ ಬಸವೇಶ್ವರ ಪುತ್ಥಳಿಗೆ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ನೇತೃತವದಲ್ಲಿ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಲಾಯಿತು. ಸದಾನಂದ ಡಂಗನವರ, ವಿಜನಗೌಡ ಪಾಟೀಲ, ಮಲ್ಲೇಶಪ್ಪ ಶಿರಗಣ್ಣವರ, ಪ್ರಕಾಶ ಬುರಬುರೆ, ಸರೋಜಾ ಹೂಗಾರ, ರವಿ ಬಡ್ನಿ, ಶಿವಾ ಬೆಂಡಿಗೇರಿ, ವಾದಿರಾಜ ಕುಲಕರ್ಣಿ, ಶಂಕರ ಮಲಕಣ್ಣವರ, ಸೇರಿದಂತೆ ಅನೇಕರಿದ್ದರು.
ಧಾರವಾಡದಲ್ಲಿ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಚಾಲನೆ ನೀಡಿದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಅಮೃತ ದೇಸಾಯಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಜಿಪಂ ಸಿಇಓ ಡಾ.ಸುರೇಶ ಇಟ್ನಾಳ, ಉಳವಿ ಚೆನ್ನಬಸವೇಶ್ವರ ದೇವಸ್ಥಾನ ಧರ್ಮಫಂಡ್ ಸಂಸ್ಥೆಯ ಅಧ್ಯಕ್ಷ ಟಿ.ಎಸ್.ಪಾಟೀಲ, ಮುಖಂಡರಾದ ಗುರುರಾಜ ಹುಣಸಿಮರದ, ಶಿವಶಂಕರ ಹಂಪಣ್ಣವರ, ನಾಗರಾಜ ಗೌರಿ ಮತ್ತಿತರರು ಇದ್ದರು.
ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಇಂದು ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಹಾಗೂ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿ ಮಹಾ ಮಾನವತಾವಾದಿಗೆ ಗೌರವ ಸಲ್ಲಿಸಲಾಯಿತು. ವಿವಿಧ ದಲಿತ ಸಂಘಟನೆಗಳ ಮಹಾಮಂಡಳದ ಪ್ರಮುಖರು, ಮಾಜಿ ಮೇಯರ ವೆಂಕಟೇಶ ಮೇಸ್ತ್ರಿ ಸಹಿತ ಅನೇಕರಿದ್ದರು.
ಧಾರವಾಡ ಗಾಂಧಿನಗರ ಯುವಜನ ಸಂಘದ ವತಿಯಿಂದ ಮಂಗಳವಾರ ಬಸವ ಜಯಂತಿ ಆಚರಿಸಲಾಯಿತು. ಮನೋಜ ಸಂಗೋಳ್ಳಿ, ವಿಶಾಲ ಮರಡಿ, ಸಂತೋಷ ಪಟ್ಟಣಶೆಟ್ಟಿ, ಅರವಿಂದ ಹುಣಸಿಮರದ, ಪ್ರಕಾಶ ಪಾಟೀಲ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.
ಬಸವ ಜಯಂತಿ ನಿಮಿತ್ತ ವಿಎಸ್‌ಆರ್ ಆರೋಗ್ಯ ಧಾಮದ ವತಿಯಿಂದ ವಿಶ್ವಮಾನ್ಯ ಪುರಸ್ಕೃತ ಸಂತೋಷ್ ಆರ್. ಶೆಟ್ಟಿ ನೇತೃತ್ವದಲ್ಲಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ರಾಧಾ ನಂದೋಳ್ಳಿಮಠ, ಶಕ್ತಿರಾಜ್ ದಾಂಡೇಲಿ, ಡಾ. ಮಂಜುನಾಥ ಮುರಡಿ, ಅನಿಲಕುಮಾರ್ ಮಿಸ್ಕಿನ್, ರಾಹುಲ್ ಶರಣ್, ಶಿವರಾಜ್ ಅರಕೇರಿ, ಪ್ರವೀಣ್ ಬಾಕಳೆ ಇತರರಿದ್ದರು.
ಬಸವ ಜಯಂತಿ ಅಂಗವಾಗಿ ಹಾನಗಲ್‌ನ ಕುಮಾರೇಶ್ವರ ವಿರಕ್ತಮಠದ ಎದುರಿನ ಬಸವೇಶ್ವರರ ಕಂಚಿನ ಪುತ್ಥಳಿಗೆ ಶಾಸಕ ಶ್ರೀನಿವಾಸ್ ಮಾನೆ ಗೌರವ ನಮನ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಗನಗೌಡ ಪಾಟೀಲ, ಪುಟ್ಟಪ್ಪ ನರೇಗಲ್, ಹಾನಗಲ್ ಪುರಸಭೆ ಅಧ್ಯಕ್ಷ ನಾಗಪ್ಪ ಸವದತ್ತಿ, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಮುಖಂಡರಾದ ಉಮೇಶ ಗೌಳಿ, ರಾಮೂ ಯಳ್ಳೂರ, ಭರಮಣ್ಣ ಶಿವೂರ, ರಾಜಕುಮಾರ ಶಿರಪಂತಿ, ಪರಶುರಾಮ್ ಖಂಡೂನವರ, ಶ್ರೀನಿವಾಸ್ ಭದ್ರಾವತಿ, ಶಿವಕುಮಾರ ಭದ್ರಾವತಿ, ತಮ್ಮಣ್ಣ ಆರೆಗೊಪ್ಪ, ಮೋಹನ್, ಮೇಕಾಜಿ ಕಲಾಲ ಸೇರಿದಂತೆ ಹಲವರಿದ್ದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಆಯುಕ್ತ ಡಾ.ಗೋಪಾಲಕೃಷ್ಣ ಅವರು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಪಾಲಿಕೆ ಸಿಬ್ಬಂದಿ ಇದ್ದರು.
ಭಗತಸಿಂಗ್ ಸೇವಾ ಸಮಿತಿ ಆಶ್ರಯದಲ್ಲಿ ಹುಬ್ಬಳ್ಳಿ ವಿದ್ಯಾನಗರದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ತಾಯಿ ವಿಜಯಲಕ್ಷಿ ಡಂಗನವರ ಕೇಸರಿ ಧ್ವಜಾರೋಹಣ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಸಮಿತಿಯ ಅಧ್ಯಕ್ಷ ಶಶಿಶೇಖರ್ ವಿ. ಡಂಗನವರ, ಸದಸ್ಯರಾದ ಬಸವರಾಜ ಸಗರದ, ವೀರೇಶ್ ಕೆಸರಪ್ಪನವರ, ಬಸವರಾಜ್ ಹಿತ್ತಲಮನಿ, ಪುನೀತ್ ಅಡಗಲ್, ಇಂದಿರಾ ಚವಾಣ್, ಸಮರ್ಥ್ ಶೆಟ್ಟಿ, ನಾಗರಾಜ ಫತ್ತೆಪುರ, ಬಸನಗೌಡ ಸಾಲಮನಿ, ಮಂಜುನಾಥ್ ನಾಯಕ, ಅನುಪ ನವಲಿ, ಮಂಜುಸಿಂಗ್ ಹಜೇರಿ ಮುಂತಾದವರಿದ್ದರು.
ನವಲಗುಂದ ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮ ತಹಶೀಲ್ದಾರ ಅನೀಲ ಬಡಿಗೇರ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ನೆರೆವೇರಿ ಸಿದರು. ಇಓ ಎಸ್ ಎಮ್ ಕಾಂಬಳೆ, ಬಿಇಒ ಬಿ.ಎಸ್ . ಮಾಯಾಚಾರಿ, ವೀರಶೈವ ಮಹಾಸಭಾ ಅಧ್ಯಕ್ಷ ಪಿ.ಎನ್.ಹಕ್ಕರಕಿ, ಮುಖಂಡರಾದ ಬಿ ಎಲ್ ಪಾಟೀಲ, ದೇವರಾಜ ಕರಿಯಪ್ಪನವರ, ಬಸವರಾಜ ಚಕ್ರಸಾಲಿ, ಚಂದ್ರಗೌಡ ಪಾಟೀಲ, ಗುಜಮಾಡಿ, ಅಡಿವೆಪ್ಪ ಶಿರಸಂಗಿ, ಅಬಕಾರಿ ಅಧಿಕಾರಿ ಗೀತಾ ತೆಗ್ಗಿ, ಮಲ್ಲಪ್ಪ ಕಿರೇಸೂರ ಉಪಸ್ಥಿತರಿದ್ದರು.
ಧಾರವಾಡದಲ್ಲಿ ಬಸವ ಜಯಂತಿ ನಿಮಿತ್ತ ಗಂಗಾಮತಸ್ಥ ಸಮಾಜದ ವತಿಯಿಂದ ಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಹಿರಿಯರಾದ ಯಲ್ಲಪ್ಪ ಸುಣಗಾರ, ಎಸ್.ಕೆ.ಪೂಜಾರ, ಮನೋಜಕುಮಾರ ಕರ್ಜಗಿ, ಅರವಿಂದ ಏಗನಗೌಡರ ಇನ್ನಿತರರಿದ್ದರು.
Previous article
ರಂಜಾನ್ ಸಡಗರ: ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ
Next article
ಸಮಾನತೆ ಬೋಧಿಸಿದ ದೇವಮಾನವ
prasanna
administrator
Related Articles
Hubli–Dharwad
’ಐಟಿ’ ಮಗಳ ’ಐಐಟಿ’ ಸಾಧನೆ
November 14, 2024
Hubli–Dharwad
ಬಿಜೆಪಿ ಗ್ರಾಮಾಂತರ ಮಂಡಳಗಳಿಗೆ ಅಧ್ಯಕ್ಷರ ನೇಮಕ
October 10, 2024
Hubli–Dharwad
ಧಾರವಾಡ : ಬಡ್ಡಿ ಕಿರುಕುಳಕ್ಕೆ ವಿಷ ಸೇವಿಸಿದ ವ್ಯಕ್ತಿ!
September 26, 2024
Hubli–Dharwad
ಧಾರವಾಡ ಗ್ರಾಮೀಣ : ಬಿಜೆಪಿ ಮಂಡಲ ಅಧ್ಯಕ್ಷರ ಆಯ್ಕೆ ಕಗ್ಗಂಟು!
September 26, 2024
Leave a Reply
Cancel reply
Your email address will not be published.
Required fields are marked
*