ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಐದು ರಾಜ್ಯಗಳಲ್ಲಿ ಸೋತ ನಂತರ ಅವರಿಗೆ ನಿದ್ರಾಹೀನತೆ ಕಾಡುತ್ತಿದ್ದು, ಮೈ ಪರಚಿಕೊಳ್ಳುತ್ತಿದ್ದಾರೆ.ಸಿದ್ದರಾಮಯ್ಯ ಹಿಟ್ ಆಂಡ್ ರನ್ ಆರೋಪ ಮಾಡ್ತಿದ್ದಾರೆ. ಅವರ ಅವಧಿಯಲ್ಲಿ ಕೆ ಪಿ ಎಸ್ ಸಿ ಸಾಕಷ್ಟು ಹಗರಣ ಆಗಿವೆ. ಪ್ರಿಯಾಂಕ್ ಖರ್ಗೆ ಆರೋಪ ಮಾಡ್ತಾರೆ. ಆದರೆ ಸಿಐಡಿ ಮೂರು ನೋಟಿಸ್ ನೀಡಿದರೂ ಉತ್ತರ ನೀಡ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ವಾಗ್ದಾಳಿ ನಡೆಸಿದರು.
ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಖರ್ಗೆಯವರು ವಿಶೇಷ ಆಸಕ್ತಿ ತೋರಿಸಿದ್ದರು. ಸಾಲು ಸಾಲು ಹಗರಣ ಮಾಡಿರುವ ಕೈ ನಾಯಕ ರಿಂದ ಭ್ರಷ್ಟಾಚಾರ ಪಾಠ ಕಲಿಯುವ ಅಗತ್ಯ ಬಿಜೆಪಿಗಿಲ್ಲ ಎಂದರು.
ಅರ್ಕಾವತಿ ಡಿನೋಟಿಫಿಕೆಷನ್ ನಲ್ಲಿ 5 ಸಾವಿರ ಕೋಟಿ ಹಗರಣ ಆಗಿದೆ. ಎಸಿಬಿಗೆ ನಾವು ಸಿದ್ದರಾಮಯ್ಯ ವಿರುದ್ದ ೧೧೦ ಕೇಸ್ ನೀಡಿದ್ದರೂ ಅವೆಲ್ಲಾ ಏನ್ ಆಗಿವೆ ಎನ್ನೋದು ಗೊತ್ತಾಗಿದೆ ಎಂದು ಕಿಡಿ ಕಾರಿದರು.
ಶಾಸಕ ಬಸನಗೌಡ ಯತ್ನಾಳ್ ಪಾಟೀಲ ಹೇಳಿಕೆ ಕುರಿತು ಕೇಳಿದಾಗ ಅವರು, ಯತ್ನಾಳ ಕೇವಲ ಹೇಳಿಕೆ ನೀಡಿದ್ದಾರೆ ಎಂದರಲ್ಲದೇ
ಬಿಜೆಪಿ 40 ಪರ್ಸೆಂಟ್ ಕಮೀಷನ್ ಹಾಗೂ ಪಿಎಸ್ ಐ ಹಗರಣದ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತದೆ. ಈ ಬಗ್ಗೆ ಜನರರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಳ್ಳ ಲಾಗುತ್ತದೆ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಜಿಲ್ಲಾ ಕಾರ್ಯದರ್ಶಿಗಳಾದ ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ವಕ್ತಾರ ರವಿ ನಾಯಕ ಇನ್ನಿತರರಿ ದ್ದರು.