ಕ್ರಮ ಕೈಗೊಳ್ಳದಿದ್ದರೆ ಹೋರಾಟ : ಎಚ್ಚರಿಕೆ
ಧಾರವಾಡ: ಶಾಸಕ ಅರವಿಂದ ಬೆಲ್ಲದ ಅವರು ಕೆರೆ, ಬಾವಿ ಇನ್ನಿತರ ಸಾರ್ವಜನಿಕ ಜಾಗೆಗಳನ್ನು ಕಬಳಿಸಿ ವಂಚನೆ ಎಸಗಿದ್ದಾರೆ ಎಂದು ರಾಣಿ ಚೆನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗೌರಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಮಹಾನಗರ ಪಾಲಿಕೆ ಮತ್ತು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಕಾನೂನು ಕ್ರಮ ಜರುಗಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಚ್ಚರಿಸಿದರು.
ಬೆಲ್ಲದ ಅವರ ಅಮರಗೋಳ, ರಾಯಾಪೂರ ಇನ್ನಿತರ ಶೋ ರೂಂಗಳ ಕೆಳೆಗ ರಾಜ ಕಾಲುವೆ, ಮಲಪ್ರಭಾ ನೀರು ಪುರೈಸುವ ಕೊಳವೆಗಳಿವೆ. ಅಲ್ಲದೇ ಧಾರವಾಡದ ಮರಾಠಾ ಕಾಲನಿ ರಸ್ತೆಯಲ್ಲಿರುವ ತಮ್ಮ ಮನೆಯ ವಾಸ್ತು ಸರಿಪಡಿಸಿಕೊಳ್ಳಲು ಪಕ್ಕದಲ್ಲಿನ ಬಾವಿಯನ್ನು ಅತಿಕ್ರಮಿಸಿಕೊಂಡಿ ದ್ದಾರೆ. ಈ ಕುರಿತು ಮಹಾನಗರ ಪಾಲಿಕೆ ಮತ್ತು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಇಲ್ಲದ ಸಬೂಬು ಹೇಳುತ್ತಿದ್ದಾರೆ. ಶಾಸಕರ ಪ್ರಭಾವದಲ್ಲಿರುವ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಶಾಸಕ ಅರವಿಂದ ಬೆಲ್ಲದ ಅವರು ಅವಳಿ ನಗರದಲ್ಲಿ ತಮ್ಮ ಮತ್ತು ತಮ್ಮ ಸಂಬಂಧಿಕರ ಹೆಸರಿನಲ್ಲಿ ೬೦ ಕ್ಕೂ ಅಧಿಕ ನಾಗರಿಕ ಸೌಲಭ್ಯ (ಸಿಎ) ನಿವೇಶನಗಳನ್ನು ಹೊಂದಿದ್ದಾರೆ. ಇದರಿಂದ ಬೇಸತ್ತ ಅನೇಕರು ಶಾಸಕರ ವಿರುದ್ಧ ಸದ್ಯದಲ್ಲಿಯೇ ಬೀದಿಗಿಳಿಯಲಿದ್ದಾರೆ. ಶಾಸಕರ ಇಂತಹ ಕಬಳಿಕೆಯ ಹಂಬಲದಿಂದ ಜನರು ತಮ್ಮ ಬಳಿ ಬರುತ್ತಿದ್ದಾರೆ. ಶಾಸಕರ ಈ ಅಕ್ರಮಗಳ ಬಗ್ಗೆ ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಪಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ತಾವು ಹೋರಾಟ ನಡೆಸುವುದಾಗಿ ಹೇಳಿದರು.
ಕಾಂಗ್ರೆಸ್ ಮುಖಂಡರಾದ ದೀಪಾ ಗೌರಿ, ವಸಂತ ಅರ್ಕಾಚಾರ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.