ಹುಬ್ಬಳ್ಳಿ-ಧಾರವಾಡ ಸುದ್ದಿ
ಮತ್ತೆ ಪುರಸಭೆ ಗದ್ದುಗೆ ಹಿಡಿದ ಕಾಂಗ್ರೆಸ್

ಮತ್ತೆ ಪುರಸಭೆ ಗದ್ದುಗೆ ಹಿಡಿದ ಕಾಂಗ್ರೆಸ್

ಹಳ್ಳದ ಅಧ್ಯಕ್ಷ, ಉಪಾಧ್ಯಕ್ಷೆಯಾಗಿ ಪದ್ಮಾವತಿ ಆಯ್ಕೆ

ನವಲಗುಂದ: ತೀವ್ರ ಕುತೂಹಲ ಮೂಡಿಸಿದ ಇಲ್ಲಿನ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ಅಚ್ಚರಿ ನಡೆಯದೇ ಕಾಂಗ್ರೆಸ್‌ನ ಅಪ್ಪಣ್ಣ ಹಳ್ಳದ ಹಾಗೂ ಪದ್ಮಾವತಿ ಪೂಜಾರ ಆಯ್ಕೆಯಾಗಿದ್ದಾರೆ.

ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಅಪ್ಪಣ್ಣ ಹಳ್ಳದ, ಉಪಾಧ್ಯಕ್ಷ ಸ್ಥಾನಕ್ಕೆ ಪದ್ಮಾವತಿ ಪೂಜಾರ. ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮಹಾಂತೇಶ ಕಲಾಲ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಗೊಲ್ಲರ ನಾಮ ಪತ್ರ ಸಲ್ಲಿಸಿದ್ದರು.
ನಿರೀಕ್ಷೆಯಂತೆಯೆ ಕೈ ಹುರಿಯಾಳು ಅಪ್ಪಣ್ಣ ಹಳ್ಳದ ಮತ್ತು ಪದ್ಮಾವತಿ ತಲಾ 13 ಮತಗಳನ್ನು ಪಡೆದು ಆಯ್ಕೆಯಾದರು.


ಬಿಜೆಪಿಯಿಂದ ಸ್ಪರ್ಧಿಸಿದ್ದ ಇಬ್ಬರೂ ತಲಾ 6 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ ಅನೀಲ ಬಡಿಗೇರ ಕಾರ್ಯನಿರ್ವಹಿಸಿದರು. ಸಿ.ಪಿ.ಐ ಸಿ.ಜಿ.ಮಠಪತಿ ನೇತ್ರತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ ಏರ್ಪಡಿಸ ಲಾಗಿತ್ತು.
ಮತ್ತೇ ಪುರಸಭೆ ಗದ್ದುಗೆ ಹಿಡಿದ ಕಾಂಗ್ರೆಸ್ ಕಾರ್ಯಕರ್ತರು ಬಣ್ಣ ಏರಚುವ ಮೂಲಕ ವಿಜಯೋತ್ಸವ ಆಚರಿಸಿದರು.

ನೂತನ ಅಧ್ಯಕ್ಷ ಅಪ್ಪಣ್ಣ ಹಳ್ಳದ ಮಾತನಾಡಿ, ನಗರ ಸರ್ವಾಂಗೀಣ ಅಭಿವೃದ್ದಿಗಾಗಿ ಜನ ಪ್ರತಿನಿಧಿಗಳ ವಿಶ್ವಾಸ ಪಡೆದುಕೊಂಡು ಮಾದರಿ ನಗರವನ್ನು ಮಾಡುವುದಾಗಿ ಹೇಳಿದರು.
ಚುನಾವಣಾ ಪ್ರಕ್ರಿಯಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳಾದ ಪ್ರಕಾಶ ಶಿಗ್ಲಿ, ಹುಸೇನಬಿ ಧಾರವಾಡ, ಹನಮಂತ ವಾಲ್ಮೀಕಿ, ಬಾಬಾಜಾನ ಮಕಾನದಾರ ಗೈರು ಹಾಜರಾಗಿದ್ದರು.

 

administrator

Related Articles

Leave a Reply

Your email address will not be published. Required fields are marked *