ಹುಬ್ಬಳ್ಳಿ-ಧಾರವಾಡ ಸುದ್ದಿ
ಉಣಕಲ್‌ನಲ್ಲಿ ಅಕ್ರಮ ಲೇಔಟ್ ತೆರವು ಕಾರ್ಯಾಚರಣೆ

ಉಣಕಲ್‌ನಲ್ಲಿ ಅಕ್ರಮ ಲೇಔಟ್ ತೆರವು ಕಾರ್ಯಾಚರಣೆ

ಸ್ಮಾರ್ಟ ಸಿಟಿಗಾಗಿ ಕಠಿಣ ಕ್ರಮ ಅನಿವಾರ್ಯ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನಧಿಕೃತ ಲೇಔಟ್‌ಗಳ ತೆರವು ಕಾರ್ಯಾಚರಣೆ ಇಂದು ಉಣಕಲ್‌ನಲ್ಲಿ ಆರಂಭಗೊಂಡಿದೆ.
ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಆಯುಕ್ತರಾದ ಎನ್.ಎಚ್.ಕುಮ್ಮಣ್ಣನವರ, ನಗರ ಯೋಜಕ ಸದಸ್ಯರಾದ ವಿವೇಕ ಕಾರೇಕರ, ಕಾರ್ಯನಿರ್ವಾಹಕ ಅಭಿಯಂತರರಾದ ಎಂ.ರಾಜಶೇಖರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ರಾಜೇಂದ್ರ ಕೊಕ್ಕಳಕಿ ಹಾಗೂ ಬಿ.ಎಸ್.ಪಾಟೀಲ, ಮುಕುಂದ ಜೋಶಿ, ಬಸವರಾಜ ದೇವಗಿರಿ, ಮೌನೇಶ ಬಡಿಗೇರ, ಆರ್.ಜಿ.ಪಾಟೀಲ ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ಸ್ಥಳದಲ್ಲಿ ಉಪಸ್ಥಿತರಿದ್ದು ನಾಲ್ಕು ಲೇಔಟ್‌ಗಳ ತೆರವು ಕಾರ್ಯಾಚರಣೆ ಆರಂಭಿಸಿದರು.


ಶೈನಾಜಬೇಗಂ ನೀಲಗುಂದ, ಕರಲಿಂಗಪ್ಪ ನಿಂಗಪ್ಪ, ಸಿದ್ದನಗೌಡ ಭರಮಗೌಡ್ರ, ಆದಿತ್ಯ ಪ್ರಕಾಶ ಪಾಟೀಲ ಇವರ ವಿನ್ಯಾಸದಲ್ಲಿನ ಅಕ್ರಮವಾಗಿ ಹಾಕಲಾಗಿದ್ದ ಕಲ್ಲುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗೇಶ ಯಾವದೇ ಪರಿಸ್ಥಿತಿಯಲ್ಲಿ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ ನಿಲ್ಲಿಸುವುದಿಲ್ಲ.ಯಾರಾದರೂ ಅಡ್ಡಿ ಪಡಿಸಿದರೆ ಕಾನೂನಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಹುಬ್ಬಳ್ಳಿಯಲ್ಲಿರುವ ಅನಧಿಕೃತ ಲೇಔಟ್ ತೆಗೆದ ನಂತರ ಧಾರವಾಡದಲ್ಲಿ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು.
ಮಹಾನಗರ ಒಂದು ಒಳ್ಳೆಯ ಸ್ಮಾರ್ಟ್ ಸಿಟಿ ಆಗುತ್ತಿದ್ದು ಈ ವೇಳೆ ಕಠಿಣ ನಿಲುವು ಕಠಿಣ ಕ್ರಮ ಕೈಗೊಳ್ಳದೆ ಸುಮ್ಮನಿದ್ದರೆ ಮಹಾನಗರ ಸ್ಮಾರ್ಟ್ ಸಿಟಿ ಆಗುವ ಬದಲು ಸ್ಲಂ ಸಿಟಿ ಪರಿವರ್ತನೆ ಆಗುತ್ತದೆ ಎಂದರು.

administrator

Related Articles

Leave a Reply

Your email address will not be published. Required fields are marked *