ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಬ್ಬಳ್ಳಿ ಚೇತನ ಸ್ಕೂಲ ಹುಡುಗನಿಗೆ 625ಕ್ಕೆ 625

ಹುಬ್ಬಳ್ಳಿ ಚೇತನ ಸ್ಕೂಲ ಹುಡುಗನಿಗೆ 625ಕ್ಕೆ 625

ಎಸ್ಸೆಸ್ಸೆಲ್ಸಿ: ಈ ಬಾರಿಯೂ ಹುಡುಗಿಯರೆ ಮೇಲುಗೈ

ಹುಬ್ಬಳ್ಳಿ : ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು ಮಧ್ಯಾಹ್ನ 12.30 ಕ್ಕೆ ಹೊರ ಬಿದ್ದಿದ್ದು, ಶೇ 85.63 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟೂ 7,30,881 ಮಂದಿ ಪಾಸ್ ಆಗಿದ್ದು, ಈ ಪೈಕಿ 3,58,602 (ಶೇ 81.30)ಹುಡುಗರು ಉತ್ತೀರ್ಣರಾಗಿದ್ದಾರೆ.


145ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದ ಸಾಧನೆ ಮಾಡಿದ್ದು ಇದರಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಪ್ರದೇಶದ ಚೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಶಿವಾನಂದ ಬಸನಗೌಡ ಪಾಟೀಲ ಸೇರಿದ್ದಾನೆ.
ಗೋಕಾಕ ತಾಲೂಕಿನ ಘೋಡಗೇರಿಯ ಮೂಲದ ವಿದ್ಯಾರ್ಥಿ ಎಲ್ಲ ವಿಷಯಗಳಲ್ಲೂ ಪೂರ್ಣ ಅಂಕಗಳನ್ನು ಪಡೆದಿದ್ದು ಈತ ಹಾಸ್ಟೇಲ್‌ನಲ್ಲಿ ಇದ್ದು ಓದುತ್ತಿದ್ದ ಎಂದು ಸಂಸ್ಥೆಯ ಮುಖ್ಯಸ್ಥರಾದ ಮಹೇಶ ದ್ಯಾವಪ್ಪನವರ ಸಂಜೆ ದರ್ಪಣಕ್ಕೆ ತಿಳಿಸಿದರು.


ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರೂ ಶಿವಾನಂದ ಪಾಟೀಲ 625 ಕ್ಕೆ 625 ಅಂಕಗಳನ್ನು ಪಡೆದಿದ್ದಾರೆಂದು ಹೇಳಿದ್ದಾರೆ.
ರಾಜ್ಯದಾದ್ಯಂತ 329 ವಿದ್ಯಾರ್ಥಿಗಳು 624 ಅಂಕ ಪಡೆದಿದ್ದರೆ, 472 ವಿದ್ಯಾರ್ಥಿಗಳು 623 ಅಂಕ ಪಡೆದಿದ್ದಾರೆ.

administrator

Related Articles

Leave a Reply

Your email address will not be published. Required fields are marked *