ಹುಬ್ಬಳ್ಳಿ-ಧಾರವಾಡ ಸುದ್ದಿ
’ಪಕ್ಷದ ನಿರ್ಧಾರಕ್ಕೆ ತಲೆಬಾಗುವೆ’

’ಪಕ್ಷದ ನಿರ್ಧಾರಕ್ಕೆ ತಲೆಬಾಗುವೆ’

ಎಲ್ಲ ಕುತೂಹಲಗಳಿಗೆ ಲಿಂಬಿಕಾಯಿ ಪೂರ್ಣವಿರಾಮ

ಹುಬ್ಬಳ್ಳಿ : ’ಪಕ್ಷದ ನಿರ್ಧಾರಕ್ಕೆ ನಾನು ತಲೆ ಬಾಗುತ್ತೇನೆ’ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೆಂದು ಬಿಂಬಿಸಲ್ಪಟ್ಟ ಅವರು ಅವಿಭಜಿತ ಧಾರವಾಡ ಹಾಗೂ ನೆರೆಯ ಕ್ಷೇತ್ರಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದ ಹಂತದಲ್ಲಿ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಲಿಂಬಿಕಾಯಿ ಅವರ ನಡೆ ವ್ಯಾಪಕ ಕುತೂಹಲ ಕೆರಳಿಸಿತ್ತು. ಅಲ್ಲದೇ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳೂ ಇವರ ಸೆಳೆಯಲು ಕಸರತ್ತು ನಡೆಸಿದ್ದವು.
ಕಮಲ ಪಡೆಯ ಅಧಿಕೃತ ಅಭ್ಯರ್ಥಿಯಾಗಿ ನಿನ್ನೆ ನಾಮಪತ್ರವನ್ನು ಹೊರಟ್ಟಿಯವರು ಸಲ್ಲಿಸಿದ್ದು,ನಾಳೆ ಬೃಹತ್ ಮೆರವಣಿಗೆಯಲ್ಲಿ ಬಿಜೆಪಿ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಇಂದು ’ಸಂಜೆ ದರ್ಪಣ’ದೊಂದಿಗೆ ಮಾತನಾಡಿದ ಲಿಂಬಿಕಾಯಿ ತಮ್ಮ ಮೌನ ಮುರಿದಿದ್ದಾರೆ.
ತಮಗೆ ಪಕ್ಷದ ಟಿಕೆಟ್ ನಿರಾಕರಣೆ ಖಚಿತ ಎಂಬ ಹಂತದಲ್ಲಿ ಇತರ ಪಕ್ಷಗಳು ಸಂಪರ್ಕಿಸಿದರೂ ತಾವು ಒಲವು ತೋರಲಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ವರಿಷ್ಠರು ತೆಗೆದುಕೊಂಡ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ. ಪಕ್ಷದ ಕೆಲಸ ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.
ಪಕ್ಷದ ವರಿಷ್ಠರ ಅಂಗಳಕ್ಕೆ ತಮ್ಮ ಒಂದೇ ಹೆಸರೆ ಶಿಫಾರಸು ಆದ ನಂತರ ತಾವು ಧಾರವಾಡ, ಗದಗ,ಹಾವೇರಿ ಮತ್ತು ಉತ್ತರ ಕನ್ನಡಗಳಲ್ಲಿ ಪ್ರವಾಸ ಕೈಗೊಂಡು ಶಿಕ್ಷಕರ ಸಂಘಟನೆಗಳ ಪ್ರಮುಖರನ್ನೆಲ್ಲಾ ಭೇಟಿ ಮಾಡಿ ಅವರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದೆ.ಅವರ ಹುಮ್ಮಸ್ಸು , ಭರವಸೆಗಳು ಈ ಬಾರಿ ಗೆಲುವನ್ನು ಬಿಜೆಪಿಗೆ ತಂದುಕೊಡುವ ನಿಟ್ಟಿನಲ್ಲಿದ್ದೆ.ಆದರೆ ತದನಂತರ ಚಿತ್ರಣ ಬದಲಾಯಿತು ಎಂದರು.
ನನ್ನ ಯತ್ನಕ್ಕೆ ಕೈ ಜೋಡಿಸಿ ಈ ಬಾರಿ ಪಶ್ಚಿಮದಲ್ಲಿ ಕೇಸರಿ ಬಾವುಟ ಹಾರಿಸುವ ಸಂಕಲ್ಪಕ್ಕೆ ಸಹಕರಿಸಿ ಬೆಂಬಲಿಸಿದ ಎಲ್ಲ ಶಿಕ್ಷಕ ಮತದಾರರನ್ನು, ಬೆಂಬಲಿಗರು,ಹಿತೈಷಿಗಳಿಗೂ ಸದಾ ಋಣಿಯಾಗಿರುವೆ ಎಂದರು.

administrator

Related Articles

Leave a Reply

Your email address will not be published. Required fields are marked *