ಹುಬ್ಬಳ್ಳಿ-ಧಾರವಾಡ ಸುದ್ದಿ
ಜೆಡಿಎಸ್ ಮಗಿಸಲು ಯಾರಿಂದಲೂ ಆಗಲ್ಲ

ಜೆಡಿಎಸ್ ಮಗಿಸಲು ಯಾರಿಂದಲೂ ಆಗಲ್ಲ

10ರಂದು ಎ ಟೀಮ್, ಬಿ ಟೀಮ್ ಬಹಿರಂಗ

ಹುಬ್ಬಳ್ಳಿ: ಯಾರಿಂದಲೂ ಜೆಡಿಎಸ್ ಮುಗಿಸೋದಕ್ಕೆ ಸಾಧ್ಯವಿಲ್ಲ. ನೂರು ಜನ್ಮವೆತ್ತಿ ಬಂದ್ರು ಜೆಡಿಎಸ್ ಮುಗಿಸೋದಕ್ಕೆ ಆಗೋದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.


ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ಧರಾಮಯ್ಯ ಅವರ ಜೆಡಿಎಸ್ ಮುಳುಗಿಸುವ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರಲ್ಲದೇ ಒಂದೇ ಕಲ್ಲಿನಿಂದ 2 ಹಕ್ಕಿ ಹೊಡೆದಿದ್ದಾರೆ ಎಂಬುದಾಗಿ ಭಾವಿಸಿರಬಹುದು. ಆದರೆ ಅದು ಸಾಧ್ಯವಾಗಿಲ್ಲ. ಅವರ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಿದ್ದಾರೆ ಎಂದರು.
ಬಿಜೆಪಿಯ ಬಿ-ಟೀಮ್ ಯಾವುದು, ಎ-ಟೀಮ್ ಯಾವುದು ಎನ್ನುವ ಬಗ್ಗೆ ದಿ. 10ನೇ ತಾರೀಖಿನಂದು ಬಹಿರಂಗಗೊಳ್ಳಲಿದೆ. ನಮಗೆ ರಾಜ್ಯಸಭೆ ಚುನಾವಣೆಗಿಂತ ವಿಧಾನಸಭೆ ಚುನಾವಣೆ ಮುಖ್ಯವಾಗಿದೆ ಎಂದರು.


ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೆಡಿಎಸ್ ಮುಳುಗುತ್ತಿರುವ ಹಡಗು ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಮುಳುಗುತ್ತಿರೋ ಹಡಗಲ್ಲ. ಬಿಜೆಪಿಯೇ ಮುಳುಗುತ್ತಿದೆ ಎಂದು ತಿರುಗೇಟು ನೀಡಿದರು.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗೆಲ್ಲಲಿದೆ. ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ ಎಂದರಲ್ಲದೇ,
ರಾಜ್ಯಸಭೆ ಚುನಾವಣೆ ಸಂಬಂಧ ನಾನು ಯಾವುದೇ ಕಾಂಗ್ರೆಸ್ ನಾಯಕರ ಜೊತೆಗೆ ಚರ್ಚೆ ನಡೆಸಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಗಳನ್ನು ಗಮನಿಸಿದ್ದೇನೆ ಎಂದರು.
ನಮ್ಮಲ್ಲಿ ಯಾವುದೇ ಅಸಮಾಧಾನವಿದ್ದರೂ ಜೆಡಿಎಸ್ ವಿರುದ್ಧ ಮತಹಾಕಲ್ಲ. ಈ ಹಿಂದೆ ಅಡ್ಡ ಮತದಾನ ಮಾಡಿದಂತೆ ಈ ಬಾರಿ ಅಂತಹ ಪ್ರಯತ್ನ ನಡೆಯಲ್ಲ. ಬಿಜೆಪಿ 2, ಕಾಂಗ್ರೆಸ್ ಓರ್ವ ಅಭ್ಯರ್ಥಿ ನಿರಾಸಯವಾಗಿ ಗೆಲ್ಲಲಿದ್ದಾರೆ. ಬಿಜೆಪಿ 2 ಅಭ್ಯರ್ಥಿಗಳು ಆಯ್ಕೆಯಾದರೆ 32 ಮತಗಳು ಉಳಿಯುತ್ತವೆ. ನಮ್ಮಲ್ಲೂ 32 ಮತಗಳು ಉಳಿಯುತ್ತವೆ. 2 ನೇ ಪ್ರಾಶ್ಯಸ್ತದ ಮತಗಳಲ್ಲಿ ಜೆಡಿಎಸ್ ಗೆಲ್ಲಲಿದೆ ಎಂದು ಹೇಳಿದ್ದಾರೆ.
ಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಶಮ್ಸ್ ತಬ್ರೇಜ್ ಸಮ್ಶಿ, ಮಹಾನಗರ ಅಧ್ಯಕ್ಷ ಗುರುರಾಜ ಹುಣಸಿಮರದ, ಅಭ್ಯರ್ಥಿ ಶ್ರೀಶೈಲ ಗಡದಿನ್ನಿ, ಗಜಾನನ ಅಣವೇಕರ ಸಹಿತ ಅನೇಕರಿದ್ದರು.

ಹೊರಟ್ಟಿ ಸಾಧನೆ ನನ್ನ ಕಾಲದಲ್ಲಿ ಮಾಡಿದ್ದು

ಕುಮಾರಸ್ವಾಮಿ ಶಕ್ತಿ ಬಲಪಡಿಸಲು ಹೊಸ ಅಭ್ಯರ್ಥಿ ನೀಡಿದ್ದೇನೆ.ಈ ಚುನಾವಣೆ, ಮುಂದಿನ ಚುನಾವಣೆಗೆ ದಿಕ್ಸೂಚಿ ಆಗಲಿದೆ
ನಮ್ಮ ಪಕ್ಷದ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಆಯ್ಕೆ ಮಾಡಿ ಎಂದು ಶಿಕ್ಷಕ ಮತದಾರರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರು.
ಬಿಜೆಪಿ ಪಕ್ಷದ ಅಭ್ಯರ್ಥಿಗಳ ಸಾಧನೆಯ ಬಗ್ಗೆ ಮಾತನಾಡಲ್ಲ ಎಂದು ಬಸವರಾಜ ಹೊರಟ್ಟಿ ವಿರುದ್ಧ ವಾಗ್ದಾಳಿ ನಡೆಸಿದ ಎಚ್.ಡಿಕೆ. ಅವರು ಮಾಡಿರುವ ಸಾಧನೆಗಳೆಲ್ಲ
ನಾನು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ದು ತಾವು ಸ್ವೀಕರ್ ಆಗಿದ್ದಾಗ ಯಾಕೆ ಮಾಡಲು ಆಗಲಿಲ್ಲ ಎಂದು ಸವಾಲು ಹಾಕಿದರು.
ಬಿಜೆಪಿ ಅಭ್ಯರ್ಥಿ ಮೂವತ್ತು ಭರವಸೆಯ ವಿಷಯವನ್ನ ಇಟ್ಟಿದ್ದಾರೆ. ಹೊರಟ್ಟಿಯ ನಿನ್ನೆಯ ಭಾಷಣ, ಇಂದಿನ ಜಾಹೀರಾತನ್ನು ನಾನು ಗಮನಿಸಿದ್ದೇನೆ.ನಾನು ಮತ್ತೆ ಗೆದ್ದು ಬಂದ ಮೇಲೆ ನ್ಯೂ ಪೆನ್ಷನ್ ಜಾರಿಗೆ ತರುತ್ತೇನೆ ಎಂದಿದ್ದಾರೆ.ಸ್ಪೀಕರ್ ಆಗಿದ್ದಾಗ ನ್ಯೂ ಪೆನ್ಷನ್ ಜಾರಿಗೆ ತರಲು ಏನಾಗಿತ್ತು ಎಂದು ಟಾಂಗ್ ನೀಡಿದರು.

ಎಚ್‌ಡಿಕೆ ಎದುರೇ ಪಿಎಸ್‌ಐ
ಅಭ್ಯರ್ಥಿಗಳ ಮಾತಿನ ಚಕಮಕಿ

ಧಾರವಾಡ: ಪಿಎಸ್‌ಐ ಪರೀಕ್ಷೆ ಪಾಸಾಗಿರುವ ಹಾಗೂ ಪಾಸಾಗದ ಅಭ್ಯರ್ಥಿಗಳು ಇಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭೇಟಿಗೆ ಬಂದ ಸಂದರ್ಭದಲ್ಲಿ ಎರಡೂ ಬಣಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.


ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಬಂದ ವೇಳೆ ಮನವಿ ಮಾಡಿ, ಪಾಸಾಗಿರುವವರು ಮರು ಪರೀಕ್ಷೆ ನಡೆಸದಂತೆ ವಿನಂತಿಸಿದರಲ್ಲದೇ ತಾವೆಲ್ಲ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವುದಾಗಿ ತಮ್ಮ ಅಳಲು ತೋಡಿಕೊಂಡರು. ಈ ಹಂತದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಅಭ್ಯರ್ಥಿಗಳು ಆಗಮಿಸಿ ಮರುಪರೀಕ್ಷೆ ನಡೆಯಲೇಬೇಕು ಅಂತಾ ಆಗ್ರಹಿಸಿದಾಗ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
545 ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಎಚ್ಚಿಕೆ ಹೇಳಿದಾಗ ನಮಗೆ ಅನ್ಯಾಯವಾಗಿಲ್ಲವೇ ಅಂತಾ ತೇರ್ಗಡೆಯಾಗದ ಅಭ್ಯರ್ಥಿಗಳ ಪ್ರಶ್ನಿಸಿದರು. ಆಗ ಮರು ಪರೀಕ್ಷೆಗೆ ನೀವು ಬೆಂಬಲ ಸೂಚಿಸಿದ್ದೀರಿ ಈಗ ಅದಕ್ಕೇಕೆ ಆಕ್ಷೇಪ ವ್ಯಕ್ತಪಡಿ ಸುತ್ತೀರಿ ಅಂತಾ ಅಭ್ಯರ್ಥಿಗಳ ಪ್ರಶ್ನಿಸಿದರು.

 

ಕರ್ನಾಟಕ ವಿವಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ದ ಆಡಳಿತ ಕಚೇರಿಯ ಎದುರು ಅತಿಥಿ ಉಪನ್ಯಾಸಕರ ಧರಣಿ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡರಾದ ಕುಮಾರಸ್ವಾಮಿ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು.


ಕಳೆದ 6 ದಿನಗಳಿಂದ ಧರಣಿ ಕುಳಿತಿರುವ ಅತಿಥಿ ಉಪನ್ಯಾಸಕರು ಸೇವಾ ಭದ್ರತೆ ಹಾಗೂ ವಿವಿಧ ಬೇಡಿಕೆಗೆ ಆಗ್ರಹಿಸಿ ಧರಣಿ ಕುಳಿತಿರುವ ಅತಿಥಿ ಉಪನ್ಯಾಸಕರು ನಡೆಸುತ್ತಿದ್ದಾರೆ.
ಅತಿಥಿ ಉಪನ್ಯಾಸಕರ ಮುಖಂಡರಾದ ವೆಂಕನಗೌಡ ಪಾಟೀಲ ಉಪನ್ಯಾಸಕ ರ ಬೇಡಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷರಾದ ಗುರುರಾಜ ಹುಣಸಿಮರದ, ಎಮ್.ಎಫ್.ಹಿರೇಮಠ, ಶಾಂತವೀರ ಬೆಟಗೇರಿ, ದೇವರಾಜ ಕಂಬಳಿ ಇನ್ನಿತರರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *