ಆರ್.ಟಿ.ಐ. ಕಾರ್ಯಕರ್ತ ಪುತ್ರನ ಬರ್ತಡೇ ಪಾರ್ಟಿ
ಹುಬ್ಬಳ್ಳಿ: ತಾಲೂಕಿನ ಕುಸಗಲ್ ಗ್ರಾಮದಲ್ಲಿರುವ ಕಲಬುರಗಿ ಎಂಬುವರ ಫಾರ್ಮ್ ಹೌಸ್ನಲ್ಲಿ ಸುಮಾರು ಜನ ರೌಡಿಗಳು ಒಂದೆಡೆ ಸೇರಿ ಆರ್.ಟಿ.ಐ. ಕಾರ್ಯಕರ್ತ ಪುತ್ರನ ಬರ್ತಡೇ ಪಾರ್ಟಿ ಮಾಡಿದ ಸಂದರ್ಭದಲ್ಲಿ ಗುಂಡಿನ ಸದ್ದು ಮಾಡಿದೆ.
ಕೇಶ್ವಾಪುರದ ಫಿಲೋಮಿನಾ ಪೌಲ್ ಪುತ್ರ ಸುಂದರ ಪೌಲ್ ಹುಟ್ಟುಹಬ್ಬದ. ರಾತ್ರಿ ಫಾರ್ಮ್ ಹೌಸ್ನಲ್ಲಿ ಗುಂಡು-ತುಂಡಿನ ಪಾರ್ಟಿ ಆಯೋಜನೆ ಮಾಡಲಾಗಿತ್ತು.
ಹೊಸೂರು, ಸೆಟ್ಲಮೆಂಟ್ ಸೇರಿದಂತೆ ನಗರದ ವಿವಿಧ ಪ್ರದೇಶದ ರೌಡಿಗಳು ಒಂದಡೇ ಸೇರಿ ಆರ್ಟಿಐ ಕಾರ್ಯಕರ್ತ ಫಿಲೋಮಿನ ಪೌಲ್ನ ಪಾರ್ಟಿ ನಡೆದಿತ್ತು.
ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದ ತಂಡ ಫಾರ್ಮ್ ಹೌಸ್ ತಲಾಷ್ ಕೂಡಾ ಮಾಡಿದೆ.
ಸುಂದರ ಪೌಲ್ ಉಪಟಳ ಇದೇ ಮೊದಲಲ್ಲ. ಈ ಹಿಂದೇ ಕಾಲೇಜು ಕ್ಯಾಂಪಸ್ನಲ್ಲಿ ಪಿಸ್ತೂಲ್ ತೋರಿಸಿ ಸುದ್ದಿಯಾಗಿದ್ದ. ಬಳಿಕ ಕಾಲೇಜು ಕ್ಯಾಂಟೀನ್ನಲ್ಲಿ ಪಿಸ್ತೂಲ್ ತೋರಿಸಿ ಸುದ್ದಿಯಾಗಿದ್ದನು.
ಸಧ್ಯ ಅಪ್ಪ ಮಗನ ವಿಚಾರಣೆ ನಡೆದಿದೆ. ಫಿಲೋಮಿನ್ ಬಳಿ ಇದ್ದ ಪಿಸ್ತೂಲ್ ಸಹ ವಶಕ್ಕೆ ಪಡೆಯಲಾಗಿದ್ದು ತನಿಖೆ ನಡೆಸಲಾಗುತ್ತದೆ ಎಂದು ಸಿಪಿಐ ಗೋಕಾಕ ತಿಳಿಸಿದ್ದಾರೆ.