ಹುಬ್ಬಳ್ಳಿ-ಧಾರವಾಡ ಸುದ್ದಿ
ಶ್ರವಣದೋಷ ಉಳ್ಳವರ ಒಲಿಂಪಿಕ್‌ಗೆ ಧಾರವಾಡದ ನಿಧಿ ಆಯ್ಕೆ

ಶ್ರವಣದೋಷ ಉಳ್ಳವರ ಒಲಿಂಪಿಕ್‌ಗೆ ಧಾರವಾಡದ ನಿಧಿ ಆಯ್ಕೆ

ತಂದೆಯ ಕನಸು ನನಸಾಗಿಸಿದ ಪುತ್ರಿ

ಹುಬ್ಬಳ್ಳಿ: ಬ್ರೆಜಿಲ್‌ನಲ್ಲಿ ನಡೆದ ಶ್ರವಣ ದೋಷ ಉಳ್ಳವರ ಒಲಿಂಪಿಕ್ ನ ಟೆಕ್ವಾಂಡೋದಲ್ಲಿ ಧಾರವಾಡದ ವಿದ್ಯಾರ್ಥುನಿ ನಿಧಿ ಸುಲಾಖೆ ಭಾರತವನ್ನು ಪ್ರತಿನಿಧಿಸಿದ್ದರು.
ಧಾರವಾಡದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ನಿಧಿ 67 ಕೆ.ಜಿ.ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈ ಒಲಿಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ ಮಹಿಳಾ ಕ್ರೀಡಾಪಟು ಎಂಬ ಸಾಧನೆ ನಿಧಿ ಅವರದ್ದು.


ಫೆ.26 ರಂದು ಲಖನೌನಲ್ಲಿ ಅಖಿಲ ಭಾರತ ಕ್ರೀಡಾ ಪರಿಷತ್ತು ಆಯೋಜಿಸಿದ್ದ ಮುಕ್ತ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್ ನಲ್ಲಿ ನಿಧಿ ಆಯ್ಕೆಯಾಗಿದ್ದರು.
ನನ್ನ ಪಾಲಕರು, ತರಬೇತುದಾರರ ಪ್ರೋತ್ಸಾಹದಿಂದ ಈ ಒಲಿಂಪಿಕ್‌ಗೆ ಆಯ್ಕಯಾಗಿದ್ದೆ. ಪದಕ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸುತ್ತೇನೆ ಎಂದು ನಿಧಿ ಹೇಳುತ್ತಾರೆ.
ನಿಧಿ ತಂದೆ ಶಿವರಾಮ್ ಸುಲಾಖೆ ಅವತು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ತಾಯಿ ಸೌಮ್ಯಾ ಗೃಹಿಣಿಯಾಗಿದ್ದಾರೆ. ನಿಧಿ ಒಲಿಂಪಿಕ್ ನಲ್ಲಿ ಭಾಗವಹಿಸಬೇಕು ಎನ್ನುವ ಶಿವರಾಮ್ ಸುಲಾಖೆಯವರ ಕನಸು ಈಗ ನನಸಾಗಿದೆ.
ಹಲವಾರು ರಾಜ್ಯಮತ್ತು ರಾಷ್ಟ್ರೀಯ ಟೆಕ್ವಾಂಡೋ ಟೂರ್ನಿಯಲ್ಲಿ ಭಾಗವಹಿಸಿರುವ ನಿಧಿ ೮೦ ಕ್ಕೂ ಅಧಿಕ ಪದಕ ಪಡೆದಿದ್ದಾರೆ. ಅಂತರರಾಷ್ಟ್ರೀಯ ಕ್ರೀಡೆಗಳಲ್ಲೂ ಪಾಲ್ಗೊಂಡಿದ್ದಾರೆ.


ನಿಧಿಗೆ ಶ್ರವಣದೋಷ ಇರುವುದರಿಂದ ಆರಂಭದಲ್ಲಿ ಸ್ವಲ್ಪ ಕಠಿಣವಾಗಿತ್ತು. ನಮ್ಮ ತಂಡದಪ್ರಯತ್ನದಿಂದಾಗಿ ನಿಧಿಗೆ ತರಬೇತಿ ನೀಡಲು ಸಾಧ್ಯವಾಯಿತು ಎಂದು ಮುಖ್ಯ ತರಬೇತುದಾರ್ತಿ ಅಂಜಲಿ ಪಿ. ಕ್ಷತ್ರತೇಜ್ ತಿಳಿಸಿದ್ದಾರೆ.
ಲಖನೌನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ನಿಧಿಗೆ ಕಠಿಣ ತರಬೇತಿ ನೀಡಲಾಗುತ್ತಿದೆ. ನಿಧಿ ಪದಕ ಗೆದ್ದಲ್ಲಿ ಇನ್ನಷ್ಟು ಖುಷಿಯಾಗುತ್ತದೆ ಎನ್ನುತ್ತಾರೆ ಅಂಜಲಿ.
ಈ ಕ್ರೀಡೆಯಲ್ಲಿ ಎಲೆಕ್ಟ್ರಾನಿಕ್ ಸ್ಕೋರಿಂಗ್ ಸಿಸ್ಟಂ ಬಳಸಲಾಗುತ್ತಿದ್ದು, ಹೋರಾಟಗಾರರು ಎಲೆಕ್ಟ್ರಾನಿಕ್ ಸಾಕ್ಸ್ ಧರಿಸುತ್ತಾರೆ. ಎದುರಾಳಿಯ ಸೊಂಟಕ್ಕೆ ಅಳವಡಿಸಿರುವ ಸೆನ್ಸಾರ್‌ಗೆ ಹೊಡೆದಲ್ಲಿ ವಯರ್ ಲೆಸ್ ಸಿಗ್ನಲ್ ಬರುತ್ತದೆ. ನಮ್ಮ ಅಕಾಡೆಮಿಯಲ್ಲಿ ಈ ವ್ಯವಸ್ಥೆ ಲಭ್ಯವಿಲ್ಲ. ದಾನಿಗಳು ಮುಂದೆ ಬಂದಲ್ಲಿ ಕ್ರೀಡಾಪಟುಗಳು ಪದಕ ಗೆಲ್ಲಲು ಸಹಕಾರಿ ಆಗಲಿದೆ ಎಂದು ಅಂಜಲಿ ಹೇಳುತ್ತಾರೆ.


ಒಲಿಂಪಿಕ್ ನಲ್ಲಿ ಭಾಗವಹಿಸುವ ಮೂಲಕ ನಿಧಿ ನನ್ನ ಆಸೆ ಈಡೇರಿಸಿದ್ದಾಳೆ. ಪದಕ ಗೆಲ್ಲುವ ಭರವಸೆಇದೆ ಎಂದು ಶಿವರಾಮ್ ಸುಲಾಖೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *