ಹುಬ್ಬಳ್ಳಿ-ಧಾರವಾಡ ಸುದ್ದಿ
ಪರಿಷತ್‌ನ ನಾಲ್ಕೂ ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು

ಪರಿಷತ್‌ನ ನಾಲ್ಕೂ ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿಶ್ವಾಸ

ಹುಬ್ಬಳ್ಳಿ: ಕಾಂಗ್ರೆಸ್ ಪರವಾದ ಅಲೆ ರಾಜ್ಯಾದ್ಯಂತ ಇದ್ದು ವಿಧಾನಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ನಾಲ್ಕೂ ಸ್ಥಾನಗಳಲ್ಲಿ ಕೈ ಪಕ್ಷದ ಅಭ್ಯರ್ಥಿಗಳು ವಿಜೇತರಾಗಲಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರರು ಮತ್ತು ಶಿಕ್ಷಕರ ಮತದಾರರಿಗೆ ಈಗ ತಮ್ಮ ತಪ್ಪಿನ ಅರಿವಾಗಿದ್ದು, ಎಲ್ಲೆಡೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆಂದು ಹೇಳಿದರು.
ಹೊರಟ್ಟಿ ಅವರು ಕೋಮುವಾದಿ ಪಕ್ಷ ಸೇರಿದ್ದಕ್ಕೆ ಅವರಿಗೆ ಹಿನ್ನಡೆಯಾಗಲಿದ್ದು, ಅಭ್ಯರ್ಥಿ ಬಸವರಾಜ ಗುರಿಕಾರ ಅವರ ನಾಲ್ಕು ದಶಕಗಳ ಶಿಕ್ಷಕರ ಪರ ನಿಲುವು ಕೈ ಹಿಡಿಯಲಿದೆ ಎಂದರು.
ಪಠ್ಯ ಪುಸ್ತಕದಲ್ಲಿ ಸಾಕಷ್ಟು ಗೊಂದಲ ಮಾಡಲಾಗಿದೆ, ರೋಹಿತ ಚಕ್ರತೀರ್ಥ ಒಬ್ಬ ಟ್ಯೂಷನ್ ನಡೆಸುವ ವ್ಯಕ್ತಿ. ಇವರನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಮಾಡಿದ್ದು ದೊಡ್ಡ ತಪ್ಪ ಎಂದರು.


ದೇಶದಲ್ಲಿ ಪೆಟ್ರೋಲ್, ಡಿಸೇಲ್, ಅಡುಗೆ ಅನೀಲ, ತರಕಾರಿ ಸೇರಿದಂತೆ ಎಲ್ಲದರ ಬೆಲೆ ಏರಿಕೆ ಕಂಡಿವೆ. ಪೆಟ್ರೋಲ್ ಡಿಸೈಲ್ ದರವನ್ನು ದರವನ್ನು ಏರಿಕೆ ಮಾಡಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಿತು. ಇದನ್ನು ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ. 14 ಕೋಟಿ ಜನರು ಉದ್ಯೋಗ ವಿಲ್ಲದೆ ಬಳಲುತ್ತಿದ್ದಾರೆ. ಜನರ ಬದುಕು ಅಸಹನೀಯವಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಆದರೆ, ದೇಶದಲ್ಲಿ ಪ್ರಜಾ ಪ್ರಭುತ್ವದ ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ, ಉಭಯ ಅಧ್ಯಕ್ಷರುಗಳಾದ ಅಲ್ತಾಪ್ ಹಳ್ಳೂರು, ಅನೀಲ ಕುಮಾರ ಪಾಟೀಲ್, ಮುಖಂಡರಾದ ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಗಂಗಾಧರ ದೊಡ್ಡವಾಡ ಇನ್ನಿತರರಿದ್ದರು.

administrator

Related Articles

Leave a Reply

Your email address will not be published. Required fields are marked *