ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಬ್ಬಳ್ಳಿಯಲ್ಲೂ ಕಾಂಗ್ರೆಸ್ ಆಕ್ರೋಶ – ಮುಖಂಡರು ಖಾಕಿ ವಶಕ್ಕೆ

ಹುಬ್ಬಳ್ಳಿಯಲ್ಲೂ ಕಾಂಗ್ರೆಸ್ ಆಕ್ರೋಶ – ಮುಖಂಡರು ಖಾಕಿ ವಶಕ್ಕೆ

ಹುಬ್ಬಳ್ಳಿಯಲ್ಲೂ ಕಾಂಗ್ರೆಸ್ ಆಕ್ರೋಶ – ಮುಖಂಡರು ಖಾಕಿ ವಶಕ್ಕೆ


ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಇಡಿ ವಿಚಾರಣೆ ವಿರೋಧಿಸಿ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.


ಇಲ್ಲಿನ ನವನಗರ ಬಳಿಯ ಹನುಮಂತ ದೇವರ ಗುಡಿಯಿಂದ ಆದಾಯ ಕಚೇರಿಗೆ ನೂರಾರು ಕಾಂಗ್ರೆಸ್ ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.


ಪ್ರತಿಭಟನಾ ನಿರತರು ಕೇಂದ್ರ ಸರ್ಕಾರ ವಿರುದ್ಧ ಘೊಷಣೆ ಕೂಗಿ ಆದಾಯ ಕಚೇರಿಗೆ ತೆರಳುವ ವೇಳೆಯೇ ಪೊಲೀಸ್ ಆಯುಕ್ತರ ಕಚೇರಿ ಎದುರು ಪೊಲೀಸರು ಪ್ರತಿಭಟನಾ ನಿರತರನ್ನು ತಡೆದು ವಶಕ್ಕೆ ಪಡೆದರು.ಪೊಲೀಸ್ ವಾಹನದಲ್ಲಿ ವಶಕ್ಕೆ ಪಡೆದ ಮುಖಂಡರನ್ನು ಕೆಲವರನ್ನು ಸಿಎಆರ್ ಮೈದಾನದಲ್ಲಿ, ಇನ್ನೂ ಕೆಲವರನ್ನು ಗೋಕುಲ ರಸ್ತೆಯಲ್ಲಿ, ಮತ್ತಷ್ಟು ಜನರನ್ನು ಧಾರವಾಡದಲ್ಲಿ ಬಿಡುಗಡೆ ಮಾಡಿದರು.


ಉಭಯ ಘಟಕದ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ಶಾಸಕಿ ಕುಸುಮಾವತಿ ಶಿವಳ್ಳಿ, ಕೆಪಿಸಿಸಿ ಕಾರ್ಯದರ್ಶಿ ಸದಾನಂದ ಡಂಗನವರ, ಬ್ಲಾಕ್ ಅಧ್ಯಕ್ಷರುಗಳಾದ ನಾಗರಾಜ ಗೌರಿ, ಬಸವರಾಜ ಕಿತ್ತೂರ, ರಜತ ಉಳ್ಳಾಗಡ್ಡಿಮಠ, ಮುಖಂಡರುಗಳಾದ ದೀಪಕ ಚಿಂಚೋರೆ, ದೀಪಾ ಗೌರಿ, ಸುನೀತಾ ಹುರಕಡ್ಲಿ, ಸರೋಜಾ ಹೂಗಾರ, ಬಾಬಾಜಾನ ಮುಧೋಳ, ಹೂವಪ್ಪ ದಾಯಗೋಡಿ, ಪ್ರಕಾಶ ಕ್ಯಾರಕಟ್ಟಿ, ಶಾಜಮಾನ್ ಮುಜಾಹಿದ, ವಿನೋದ ಅಸೂಟಿ, ಬಂಗಾರೇಶ ಹಿರೇಮಠ, ಸುನೀಲ ಮಠಪತಿ, ಅಶೋಕ ಕಲಾದಗಿ, ಕಿರಣ ಹಿರೇಮಠ ಸೇರಿದಂತೆ ನೂರಾರು ಕಾರ್ಯಕರ್ತರು ಬಂಧನಕ್ಕೆ ಒಳಗಾದರು.

administrator

Related Articles

Leave a Reply

Your email address will not be published. Required fields are marked *