ಹುಬ್ಬಳ್ಳಿ-ಧಾರವಾಡ ಸುದ್ದಿ
ಸೋಲನ್ನೇ ಗದರಿಸಿದ ’ಶಿಕ್ಷಕರ ಕಣ್ಮಣಿ’ಯ ಜು.6ಕ್ಕೆ ಪ್ರಮಾಣವಚನ

ಸೋಲನ್ನೇ ಗದರಿಸಿದ ’ಶಿಕ್ಷಕರ ಕಣ್ಮಣಿ’ಯ ಜು.6ಕ್ಕೆ ಪ್ರಮಾಣವಚನ

ಹುಬ್ಬಳ್ಳಿ : 1980 ರಿಂದ ವಿಧಾನಪರಿಷತ್ತಿಗೆ ಸತತ ೮ನೇ ಬಾರಿಗೆ ಆಯ್ಕೆಯಾಗುವ ಮೂಲಕ ವಿಶ್ವದಾಖಲೆಗೆ ಭಾಜನರಾಗಿ ನಾಡಿನ ಸಮಸ್ತ ಶಿಕ್ಷಕರ ಪ್ರೀತಿ ವಿಶ್ವಾಸಗಳಿಸಿ ಸೋಲನ್ನೇ ಗದರಿಸಿದ ಬಸವರಾಜ ಹೊರಟ್ಟಿಯವರು 8ನೇ ಬಾರಿ ವಿಧಾನಪರಿಷತ್ ಸದಸ್ಯರಾಗಿ 8ನೇ ಬಾರಿ ಆಯ್ಕೆಯಾಗುವ ಮೂಲಕ ವಿಶ್ವ ದಾಖಲೆಯ ಕೀರ್ತಿಯೊಂದಿಗೆ ಜು.6ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನಸೌಧದ 3ನೇ ಮಹಡಿ ಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ (ಕೊಠಡಿ ಸಂಖ್ಯೆ 334) ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಶಿಕ್ಷಕರ ನಂಬುಗೆಯ ನಾಯಕರಾಗಿ, ನಾಡಿನ ಶಿಕ್ಷಕ ಸಮುದಾಯದ ಜೀವಧ್ವನಿಯಾಗಿ ಹೋರಾಟದ ಮೂಲಕ ಗುರುತಿಸಿಕೊಂಡ ಹೊರಟ್ಟಿ ಯವರು ನಾಡಿಗೆ ಪರಿಚಿತರಾಗಿದ್ದೇ ಹೋರಾಟದ ಹೊರಟ್ಟಿ ಎಂದು. ಸತತ 45 ವರ್ಷಗಳ ಹೋರಾಟದ ಫಲದಿಂದ ಶಿಕ್ಷಕರ ಮನದಲ್ಲಿ, ಮನೆಯಲ್ಲಿ, ಅಂತರಾಳದಲ್ಲಿ ಬೇರೂರಿದ ಹೊರಟ್ಟಿ ಹಾಗೂ ಶಿಕ್ಷಕರ ಸಂಬಂಧವನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂಬುದನ್ನು 8ನೇ ಬಾರಿ ಹೊರಟ್ಟಿಯವರನ್ನುಗೆಲ್ಲಿಸುವ ಮೂಲಕ ಶಿಕ್ಷಕ ಸಮುದಾಯ ನಾಡಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಹೋರಾಟದ ಹೊರಟ್ಟಿಯವರು ಎಂದೇ ಶಿಕ್ಷಣ ಕ್ಷೇತ್ರದಲ್ಲಿಜನಪ್ರಿಯರಾಗಿದ್ದ ಬಸವರಾಜ ಹೊರಟ್ಟಿಯವರು ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ಎಂಬ ಪುಟ್ಟಗ್ರಾಮದಲ್ಲಿ. ಹಡೆದ ಪುಣ್ಯಜೀವಿಗಳು ತಂದೆ ಶಾಲಾ ಮಾಸ್ತರರಾಗಿದ್ದ ಶಿವಲಿಂಗಪ್ಪನವರು ತಾಯಿ ಗುರವ್ವನವರು. ಬಸವರಾಜ ಹೊರಟ್ಟಿಯವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ನತದೃಷ್ಟರು. ತಂದೆಯ ಪ್ರೀತಿ, ವಾತ್ಸಲ್ಯ ಮಮತೆಯಿಂದ ವಂಚಿತರಾದವರು. ತಂದೆಯ ನೆನಪಿನಲ್ಲಿಯೇ ಬಾಲ್ಯವನ್ನು ಕಳೆದರು. ತಾಯಿಯೇ ಪ್ರೀತಿಯ ಆರೈಕೆ ಮಾಡುತ್ತಾ ತಂದೆಯಿಲ್ಲದ ಕೊರಗನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಪುಟ್ಟದಾದ ಯಡಹಳ್ಳಿಯಿಂದ ಹುಬ್ಬಳ್ಳಿಗೆ ಬಂದು ಶಿಕ್ಷಕರ ಸಹಕಾರದಿಂದ ಬೆಟ್ಟದಂತೆ ಬೆಳೆದು ನಿಂತವರೇ ಬಸವರಾಜ ಹೊರಟ್ಟಿಯವರು.

ಅರ್ಧ ಶತಮಾನದ ಹತ್ತಿರ ಹತ್ತಿರಶಿಕ್ಷಕರ ಪರ ಹೋರಾಡುತ್ತಿರುವ, ಬರೆಯುವಂತೆ ಬದುಕಿಇತಿಹಾಸ ಪುಟಗಳಲ್ಲಿ ದಾಖಲಾದಇಡೀ ಬದುಕನ್ನು ಶಿಕ್ಷಕರಿಗೆ, ಶಿಕ್ಷಣಕ್ಕೆ ಸಮಾಜಕ್ಕೆಅರ್ಪಿಸುತ್ತಿರುವ ಶಿಕ್ಷಕರ ಜೀವನಾಡಿ, ಶಿಕ್ಷಕರ ಜೀವಧ್ವನಿಯಾದ ಬಸವರಾಜ ಹೊರಟ್ಟಿಯವರ ಐದು ದಶಕಗಳ ಹೋರಾಟದ ಹಾದಿಗಳಲ್ಲಿ ಸಾಧಿಸಿದ ಮೈಲುಗಲ್ಲುಗಳನ್ನು ಕೆಲವೇ ಪುಟಗಳಲ್ಲಿ ದಾಖಲಿಸುವುದೇ ಕಷ್ಟ ಸಾಧ್ಯ.

ಶಿಕ್ಷಕರ ಹಿತೈಷಿ, ಶಿಕ್ಷಕರ ಅಪದ್ಭಾಂದವ, ವಿವಿಧ ಹೋರಾಟಗಳ ವಿಭಿನ್ನ ನೆಲೆಗಳ ಬಸವರಾಜ ಹೊರಟ್ಟಿಯವರು ಜನಮಾನಸದಲ್ಲಿ ಹೋರಾಟದ ಹೊರಟ್ಟಿಯವರೆಂದೇ ಚಿರಪರಿಚಿತರಾದವರು. ಹೊರಟ್ಟಿಯವರು ಸಮಸ್ಯೆ ಯೊಂದನ್ನು ಎತ್ತಿಕೊಂಡು ಹೋರಾಟಕ್ಕಿಳಿದರೆ ತಾರ್ಕಿಕ ಅಂತ್ಯ, ಯಶಸ್ಸು ನಿಶ್ಚಿತ ಎಂಬ ಮನೋಭಾವ ಸಮಸ್ತ ನಾಡಿನ ಶಿಕ್ಷಕ ಬಳಗದಲ್ಲಿ ಇಂದಿಗೂ ಇದೆ. ಅನೇಕ ಸಂಘಟನೆಗಳೊಂದಿಗೆ ಜನಪರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಹೊರಟ್ಟಿಯವರು.

ಶಿಕ್ಷಕರೊಬ್ಬರು ಶಿಕ್ಷಣ ಸಚಿವರಾಗಿ ಎರಡು ಬಾರಿ ಸಭಾಪತಿಯಾಗಿ ಆಯ್ಕೆಯಾಗಿದ್ದು ದೇಶದಲ್ಲಿಯೇ ಇತಿಹಾಸ. ಇಂತಹ ಬಹುಮುಖ ಸಾಧನೆಯ ವ್ಯಕ್ತಿತ್ವ ಹೊಂದಿರುವ ಬಸವರಾಜ ಹೊರಟ್ಟಿಅಂಥವರು ಶಿಕ್ಷಕ ವಲಯಕ್ಕೆ ಸಿಕ್ಕಿದ್ದು ನಮ್ಮೆಲ್ಲರ ಭಾಗ್ಯವೆಂದೇ ಸಮಸ್ತ ನಾಡಿನ ಶಿಕ್ಷಕ ಬಳಗ ಅತ್ಯಂತ ಹೃದಯತುಂಬಿ ಅಭಿಮಾನದಿಂದಸ್ಮರಿಸಿಕೊಳ್ಳುತ್ತಾರೆ. ಹೊರಟ್ಟಿಯವರು

administrator

Related Articles

Leave a Reply

Your email address will not be published. Required fields are marked *