ಹುಬ್ಬಳ್ಳಿ: ರಾಯನಾಳ ಗ್ರಾ.ಪಂ ಸದಸ್ಯ ಗಂಗಿವಾಳದ ದೀಪಕ ಪಟದಾರಿ ಹತ್ಯೆ ಪ್ರಕರಣದಲ್ಲಿ ಹಳೇ ಹುಬ್ಬಳ್ಳಿ ಪೊಲೀಸರು ಆರು ಜನರನ್ನು ಬಂದಿಸಿದ್ದಾರೆಂದು ತಿಳಿದುಬಂದಿದೆ.
ಕೌಟುಂಬಿಕ, ಹಳೇಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದು ಖಚಿತ ಪಟ್ಟಿದ್ದು ಆರು ಜನರನ್ನು ಬಂಧಿಸಿರುವ ಪೊಲೀಸರು ಇನ್ನೂ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸೋಮವಾರ ರಾತ್ರಿ ರಾಯನಾಳದಲ್ಲಿ 10.30ರ ಸುಮಾರಿಗೆ 6 ರಿಂದ 8 ಜನರ ಗುಂಪು ಮಾರಕಾಸ್ತ್ರಗಳಿಂದ ಪಟದಾರಿಯನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು.
ದೀಪಕನು ರಾಯನಾಳದ ಮೇಟಿ ಕುಟುಂಬದ ಯುವತಿಯನ್ನು ಐದು ವರ್ಷದ ಹಿಂದೆ ಕುಟುಂಬದವರ ಕಟು ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದನಲ್ಲದೇ ಈಗ ಹೆಣ್ಣುಮಕ್ಕಳ ಪಾಲು ಪಡೆಯುವಂತೆ ಪತ್ನಿ ಮೂಲಕ ಹೊಸ ವರಸೆ ನಡೆಸಿದ್ದನಲ್ಲದೇ ಕೊಲೆ ಮಾಡಿದ ಮೇಟಿ ಕುಟುಂಬದವರ ಮೇಲೆ ಸೇಡಿನ ಮನೋಭಾವದಿಂದ ನೋಡುತ್ತಿದ್ದ ಎನ್ನಲಾಗಿದೆ.
ದೀಪಕ ಪಠದಾರಿ ಹೆಸರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ರೌಡಿ ಶೀಟರ್‌ಗಳ ಪಟ್ಟಿಯಲ್ಲೂ ಇದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಕ್ಷಿಣ ಎಸಿಪಿ ಆರ್.ಕೆ.ಪಾಟೀಲ, ಹಳೇ ಹುಬ್ಬಳ್ಳಿ ಠಾಣಾ ಇನ್ಸಪೆಕ್ಟರ್ ಚವ್ಹಾಣ ಹಾಗೂ ಸಿಬ್ಬಂದಿಗಳು ವಿಚಾರಣೆ ಮುಂದುವರಿಸಿದ್ದು, 6 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯನ್ನು ಮೂರೇ ಜನ ಮಾಡಿದ್ದಾರೆಂದೂ ಹೇಳಲಾಗುತ್ತಿದೆ.
ರಾಯನಾಳ ಗ್ರಾ.ಪಂ.ಸದಸ್ಯನ ಕೊಲೆ: ಆರು ಜನ ಅಂದರ್
administrator