ಹುಬ್ಬಳ್ಳಿ-ಧಾರವಾಡ ಸುದ್ದಿ

13ರಂದು ಧಾರವಾಡದಲ್ಲಿ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಸ್ಪರ್ಧೆ

ಸ್ವಾತಂತ್ರೋತ್ಸವದ ಅಮೃತ್ ಮಹೋತ್ಸವ ಅಂಗವಾಗಿ ದಿ.ಕಲ್ಲವ್ವ ಸಿಂಧೋಗಿ ಸ್ಮರಣಾರ್ಥ ಸ್ಪರ್ಧೆ

ಧಾರವಾಡ: ಧಾರವಾಡ ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಮೃತ್ ಮಹೋತ್ಸವ ಅಂಗವಾಗಿ ರಾಷ್ಟ್ರಮಟ್ಟದ ಓಟಗಾರ್ತಿ ದಿ. ಕಲ್ಲವ್ವ ಸಿಂಧೋಗಿ ಸ್ಮರಣಾರ್ಥ ೧೦ ಕಿ.ಮೀ. ಕ್ರಾಸ್ ಕಂಟ್ರಿ ಸ್ಪರ್ಧೆಯನ್ನು ಮಹಿಳೆಯರಿಗೆ ಮತ್ತು ಪುರುಷರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷರು ಹಾಗೂ ಪಾಲಿಕೆ ಸದಸ್ಯ ಶಿವು ಹಿರೇಮಠ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಸ್ಪರ್ಧೆಯಲ್ಲಿ ರಾಜ್ಯದ ಆಸಕ್ತ ಕ್ರೀಡಾಪಟುಗಳು ಭಾಗವಹಿಸಬಹುದು. ಮೊದಲ ಆರು ಸ್ಥಾನಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಕೊಡಲಾಗುವುದು ಎಂದರು.
ಮೊದಲ ಬಹುಮಾನ 7000 ರೂ, ದ್ವಿತೀಯ 5000 ರೂ, ತೃತೀಯ 4000 ರೂ, ನಾಲ್ಕನೇ ಸ್ಥಾನಕ್ಕೆ 3000ರೂ, 5ನೇ ಸ್ಥಾನಕ್ಕೆ 2000ರೂ, 6ನೇ ಸ್ಥಾನಕ್ಕೆ 1000ರೂ ಮೆಡಲ್ಸ್ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದರು.


ಆ. 13ರಂದು ಬೆಳಿಗ್ಗೆ 7 ಗಂಟೆಗೆ ಕ್ರಾಸ್ ಕಂಟ್ರಿ ಸ್ಪರ್ಧೆ ಪ್ರಾರಂಭವಾಗಲಿದೆ. ಭಾಗವಹಿಸುವ ಸ್ಪರ್ಧಿಗಳು ದಿ. 13ರಂದು ಬೆಳಗ್ಗೆ 6ಗಂಟೆಗೆ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ವರದಿ ಮಾಡಿಕೊಳ್ಳಬೇಕು. ತಡವಾಗಿ ಬಂದವರಿಗೆ ಅವಕಾಶವಿಲ್ಲ. ಭಾಗವಹಿಸುವ ಸ್ಪರ್ಧಾಳುಗಳಿಗೆ ಯಾವುದೇ ರೀತಿಯ ಪ್ರವಾಸ ಭತ್ತ ಕೊಡುವುದಿಲ್ಲ. ಕ್ರೀಡಾಪಟುಗಳು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.


ಕ್ರಾಸ್ ಕಂಟ್ರಿ ಸ್ಪರ್ಧೆ ಮುಗಿದ ಮೇಲೆ ಬೆಳಿಗ್ಗೆ 10ಗಂಟೆಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸ್ಪರ್ಧಿಗಳಿಗೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ. ಆಸಕ್ತರು ಮಾಹಿತಿಗಾಗಿ ಶಿವು ಹಿರೇಮಠ (9740024123),  ಕೆ.ಎಸ್.ಭೀಮಣ್ಣವರ (9448590704), ಬಿ.ಎಸ್.ತಾಳಕೋಟಿ (9448923124), ಡಿ.ಬಿ. ಗೋವಿಂದಪ್ಪ (9902675705), ಇವರನ್ನು ಸಂಪರ್ಕಿಸಬಹುದು ಎಂದರು.
ಉದ್ಯಮಿ ಮಹೇಶ ಶೆಟ್ಟಿ, ಉಪಾಧ್ಯಕ್ಷ ಕೆ.ಎಸ್. ಭೀಮಣ್ಣವರ, ಪ್ರಧಾನ ಕಾರ್ಯದರ್ಶಿ ಬಸವರಾಜ ತಾಳಿಕೋಟಿ, ಜಿ.ಎಸ್. ಜಾಧವ್ ಗೋಷ್ಠಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *