ಹುಬ್ಬಳ್ಳಿ-ಧಾರವಾಡ ಸುದ್ದಿ
ಮತಕ್ಷೇತ್ರ 71ರಲ್ಲಿ 13ರಂದು ಬೃಹತ್ ತಿರಂಗಾ ಯಾತ್ರೆ

ಮತಕ್ಷೇತ್ರ 71ರಲ್ಲಿ 13ರಂದು ಬೃಹತ್ ತಿರಂಗಾ ಯಾತ್ರೆ

9ವಾರ್ಡ್‌ಗಳಲ್ಲಿ ಏಕತೆಗಾಗಿ ನಡಿಗೆ: ಇಸ್ಮಾಯಿಲ್ ತಮಟಗಾರ

ಧಾರವಾಡ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.13 ರಂದು ಧಾರವಾಡ-71 ಕ್ಷೇತ್ರದ 9 ವಾರ್ಡ್‌ಗಳಲ್ಲಿ ಏಕತೆಗಾಗಿ ನಡಿಗೆ ಹಾಗೂ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಕೆಪಿಸಿಸಿ ಆದೇಶದ ಮೇರೆಗೆ ಈ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಸಂದಿವೆ. ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಡಾ.ಮೌಲಾನಾ ಅಬ್ದುಲ್ ಕಲಾಂ ಆಝಾದ್ ಮುಂತಾದವರ ತ್ಯಾಗ, ಬಲಿದಾನ ಗಳಿಂದ ನಮಗೆ ಸ್ವತಂತ್ರ ಸಿಕ್ಕಿದೆ. ಜವಾಹರಲಾಲ್ ನೆಹರು, ಲಾಲಬಹದ್ದೂರ ಶಾಸ್ತ್ರೀ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಅಟಲ ಬಿಹಾರಿ ವಾಜಪೇಯಿ ಮತ್ತಿತರರು ಪ್ರಧಾನ ಮಂತ್ರಿಗಳಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ವಿಶ್ವದಲ್ಲೇ ಭಾರತ ಅಭಿವೃದ್ಧಿ ಹೊಂದಿದ ದೇಶ ಎಂಬ ಹೆಗ್ಗಳಿಕೆ ಹೊಂದಲು ಕಾರಣರಾದವರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ವಿಭಿನ್ನವಾಗಿ ಅಮೃತ ಮಹೋತ್ಸವ ಆಚರಿಸಲು ತೀರ್ಮಾನಿಸಿದೆ.


ಅಂದು ಬೆಳಿಗ್ಗೆ ನಗರೇಶ್ವರ ದೇವಸ್ಥಾನ, ಹೆಬ್ಬಳ್ಳಿ ಅಗಸಿ, ಮದಿಹಾಳ, ಮುರುಘಾಮಠದ, ಕಮಲಾಪೂರ, ಮಾಳಾಪೂರ, ಮೆಹಬೂಬ ನಗರ ಮೂಲಕ ಸಾಯಿ ಕೊಪ್ಪದಕೇರಿ ಶಿವಾಲಯದ ಬಳಿ ಮುಕ್ತಯವಾಗಲಿದೆ ಎಂದು ತಿಳಿಸಿದರು.
ಅದ್ದರಿಂದ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಆನಂದ ಜಾಧವ, ಸತೀಶ ತುರಮರಿ, ಹೇಮಂತ ಗುರ್ಲಹೊಸೂರ, ತುಳಸಪ್ಪ ಪೂಜಾರ, ಅಜಗರ ಮುಲ್ಲಾ, ಯಾಸೀನ್ ಹಾವೇರಿಪೇಟೆ, ಸತೀಶ ತುರಮರಿ ಸೇರಿದಂತೆ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *