ಹುಬ್ಬಳ್ಳಿ-ಧಾರವಾಡ ಸುದ್ದಿ

ಮುಂದುವರಿದ ಅತಿಥಿ ಉಪನ್ಯಾಸಕರ ಹೋರಾಟ

ಸ್ವಾತಂತ್ರ್ಯೋತ್ಸವ ದಿನದಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಧಾರವಾಡ: ವೇತನ ಹೆಚ್ಚಳ, ಪದನಾಮ ಬದಲಾವಣೆ, ಸೇವಾ ಭದ್ರತೆ ಒದಗಿಸುವಂತೆ ಮತ್ತು ಕೆಸಿಡಿ ಪಿಯು ಕಾಲೇಜಿನಲ್ಲಿ ಬೋಧನಾ ಅವಧಿ ಹೆಚ್ಚಳ ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರು ಮತ್ತೆ ಅನಿರ್ದಿಷ್ಟ ಹೋರಾಟ ಮುಂದುವರೆಸಿದ್ದಾರೆ.

ಎರಡನೇ ದಿನವಾದ ಇಂದು ಕರ್ನಾಟಕ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ ಉಪನ್ಯಾಸಕರು ಬೇಡಿಕೆ ಇಡೇರಿಸದಿದ್ದರೆ ಹೋರಾಟ ತೀವ್ರ ಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಬೇಡಿಕೆಗಳ ಬಗ್ಗೆ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಉಪನ್ಯಾಸಕರು, ಬೇಡಿಕೆ ಈಡೇರು ವವರೆಗೆ ಹಿಂದಕ್ಕೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆ. 15 ರಂದು ಸ್ವಾತಂತ್ರ್ಯೋತ್ಸವ ದಿನದಂದು ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.


ಡಾ. ವೆಂಕನಗೌಡ ಪಾಟೀಲ, ಡಾ. ಶಿವಸೊಮೊಣ್ಣ ನಿಟ್ಟೂರ, ಡಾ. ನಾಗಭೂಷಣ ಹರಿಹರ, ಡಾ. ಚಂದ್ರಶೇಖರ ಪಾಟೀಲ, ಅಂಬರೀಶ ಸಿಂದಗಿ, ರಾಜೇಂದ್ರಕುಮಾರ ಮಠ,ಡಾ. ಎನ್. ಬಸವರಾಜ , ಡಾ. ಬಸವರಾಜ ಕುರವತ್ತೆರ, ಡಾ. ಮಂಜುನಾಥ ಹುರಕಡ್ಲಿ. ಡಾ. ಮಲ್ಲಿಕಾರ್ಜುನ ಬ್ಯಾಲ್ಯಾಳ, ಗುರುಪ್ರಸಾದ್ ಹೆಗಡೆ, ಮಹಾಂತೇಶ, ಜಗದೀಶ ಅಸೊದೆ, ಸುಧಾ ಎಸ್, ಮೃತ್ಯುಂಜಯ, ರಾಜು ರಾಠೋಡ, ಮಹಾದೇವಪ್ಪ ಗುಂಡ್ಲೂರು, ಚಂದ್ರಶೇಖರ ಹೀರೆಮಠ, ಮಹಾದೇವ ಬಿಡಿನಾಳ, ರಮಾಬಾಯಿ ಗುಡದೂರ, ಸಾವಿತ್ರಿಭಾಯಿ ಎನ್, ನಾಗಪ್ಪ ಎಚ್, ಸುಜಾತ ಗುರವ ಸೇರಿದಂತೆ ಅನೇಕ ಉಪನ್ಯಾಸಕರು ಪ್ರತಿಭಟನೆಯಲ್ಲಿದ್ದರು.

 

administrator

Related Articles

Leave a Reply

Your email address will not be published. Required fields are marked *