ಧಾರವಾಡ: ಹು-ಧಾ ಮಹಾನಗರ ಪಾಲಿಕೆ ಸಹಯೋಗದಲ್ಲಿ ಜಿಲ್ಲಾ ಒಲಂಪಿಕ್ ಅಸೋಸಿಯೇಶನ್ ವತಿಯಿಂದ ಪುರುಷ ಮತ್ತು ಮಹಿಳೆಯರ ರಾಜ್ಯಮಟ್ಟದ ೧೦ ಕಿ.ಮೀ ಗುಡ್ಡಗಾಡು ಓಟದ ಸ್ಪರ್ಧೆಯು ಶನಿವಾರ ಜರುಗಿತು.
ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಿಂದ ಆರಂಭದ ಈ ಓಟವು ಕೆಸಿಡಿ ಮಾರ್ಗವಾಗಿ ಕೆಲಗೇರಿ ಗುಡ್ಡದಮಠ ಕಲ್ಯಾಣ ಮಂಟಪ ತಲುಪಿ ಪುನರ್ ಕ್ರೀಡಾಂಗಣಕ್ಕೆ ಬಂದು ಮುಕ್ತಾಯಗೊಂಡಿತು. 75 ಪುರುಷ ಹಾಗೂ 13 ಮಹಿಳಾ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಈ ಪೈಕಿ ಪುರುಷರಲ್ಲಿ ನವೀನ್ ಪಾಟೀಲ್, ಬೆಳಗಾವಿಯ ಅರುಣ್ ಹಾಗೂ ಹುಬ್ಬಳ್ಳಿಯ ನಾಗರಾಜ ದಿವಟೆ ಹಾಗೂ ಮಹಿಳೆಯರಲ್ಲಿ ಅನಿತಾ ಓಲೆಕಾರ , ಕಾವ್ಯ, ಶಿಲ್ಪಾ ಹೊಸಮನಿ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.
ನಂತರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ನಗದು ಬಹುಮಾನ ದೊಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅತಿಥಿಯಾಗಿ ಪಾಲ್ಗೊಂಡ ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಜಿಲ್ಲಾ ಒಲಂಪಿಕ್ ಅಸೋಸಿ ಯೇಶನ್ ಅಧ್ಯಕ್ಷ ಶಿವು ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಈರೇಶ ಅಂಚಟಗೇರಿ, ದೀಪಕ್ ಚಿಂಚೋರೆ, ಪಿ.ಎಚ್.ನೀರಲಕೇರಿ, ಮಹೇಶ್ ಶೆಟ್ಟಿ, ವಿಲಾಸ ನೀಲಗುಂದ, ಪಟದಾರೆ, ಬಸವರಾಜ ತಾಳಿಕೋಟಿ, ಗುರುರಾಜ ಪುರಾಣಿಕ, ಕೆ.ಎಸ್.ಭೀಮಣ್ಣವರ ಇದ್ದರು.