ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ವತಿಯಿಂದ ಹುಬ್ಬಳ್ಳಿಯ ಕರ್ನಾಟಕ ಜಿಮಖಾನಾ ಅಸೋಷಿಯೇಶನ್‌ನಲ್ಲಿ ನಡೆದ ಸಂಘದ ಬ್ಯಾಡ್‌ಮಿಂಟನ್ ಲೀಗ್‌ನಲ್ಲಿ, ಸುಗ್ಗಿ ಸುಧಾಕರ ಶೆಟ್ಟಿ ಮಾಲೀಕತ್ವದ ’ಸುಗ್ಗಿ ಎಸಸ್’ ತಂಡವು, ರವಿಕಾಂತ ಶೆಟ್ಟಿ ಮಾಲೀಕತ್ವದ ಲೀಲಾವತಿ ಲಯನ್ಸ್ ತಂಡವನ್ನು 3-2 ರಿಂದ ಸೋಲಿಸಿ ಚಾಂಪಿಯನ್‌ಯಾಗಿ ಹೊರಹೊಮ್ಮಿತು.
ಲೀಗ್ ಪಂದ್ಯದಲ್ಲಿ 6 ತಂಡಗಳಾದ ರವಿಕಾಂತ ಶೆಟ್ಟಿ ಮಾಲೀಕತ್ವದ ’ಲೀಲಾವತಿ ಲಯನ್ಸ್’, ಸುಗ್ಗಿ ಸುಧಾಕರ ಶೆಟ್ಟಿ ಮಾಲೀಕತ್ವದ ’ಸುಗ್ಗಿ ಎಸಸ್’, ರವೀಂದ್ರ ಶೆಟ್ಟಿ ಮಾಲೀಕತ್ವದ ’ಡಿಯರ್‌ಕಾನ್’ ಸುಭಾಶ್ಚಂದ್ರ ಶೆಟ್ಟಿ ಮಾಲೀಕತ್ವದ ’ಜೀವನ್ ವಾರಿಯರ್‍ಸ್’, ಪ್ರದೀಪ ಪಕ್ಕಳ ಮಾಲೀಕತ್ವದ ’ಮಂದಾರ ಮಿರ್‍ಯಾಕಲ್ಸ್’, ’ಸುಧೀರ್ ಜೆ. ಶೆಟ್ಟಿ ಮಾಲೀಕತ್ವದ ’ಮೆಟ್‌ಕಟ್’ ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಮತ್ತು ಸಬ್-ಅರ್ಬನ್ ಪೊಲೀಸ್ ಠಾಣೆಯ ಸಿಪಿಐ ರವಿಚಂದ್ರ ಡಿ.ಬಿ. ವಿಜೇತರಿಗೆ ಹಾಗೂ ರನ್ನರ್ ತಂಡಗಳಿಗೆ ಬಹುಮಾನ ವಿತರಿಸಿದರು.
ನಂತರ ಮಾತನಾಡಿದ ಲೋಚನೇಶ ಹೂಗಾರ, ಬಂಟರು ಯಾವಾಗಲು ಸಾಹಸಿಗಳು. ಜನ್ಮಭೂಮಿ ಬಿಟ್ಟು ಕರ್ಮ ಭೂಮಿಯಲ್ಲಿ ಬಂದು ಸಂಘ ಕಟ್ಟಿ ಮಾದರಿ ಕಾರ್ಯ ಮಾಡುತ್ತಿದ್ದಾರೆಂದರು. ಒತ್ತಡದ ಜೀವನದ ಮಧ್ಯೆಯೂ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ತಿಳಿಸಿದರು.
ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ರವಿಚಂದ್ರ ಡಿ.ಬಿ.ಯವರು ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ, ನಿಮ್ಮ ಒತ್ತಡದ ಜೀವನದಲ್ಲೂ ಈ ರೀತಿ ಕ್ರೀಡೆಯನ್ನು ಅಯೋಜಿಸಿದ್ದು ಒಳ್ಳೆಯ ಕಾರ್ಯ ಎಂದು ನುಡಿದರು.
ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಸತೀಶ ಶೆಟ್ಟಿ, ಕ್ರೀಡಾ ಸಂಚಾಲಕ ಪುರಂದರ ರೈ, ಜತೆ ಕಾರ್ಯದರ್ಶಿ ರಾಜೇಂದ್ರ ವಿ. ಶೆಟ್ಟಿ ಮತ್ತು ಉಪಾಧ್ಯಕ್ಷರಾದ ಶಾಂತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಸದಸ್ಯರೂ ಇದ್ದರು.