ಹುಬ್ಬಳ್ಳಿ-ಧಾರವಾಡ ಸುದ್ದಿ

ಕಿಲಿಮಂಜಾರೋ ಪರ್ವತದ ಮೇಲೆ ತಿರಂಗಾ ಹಾರಿಸಿದ ’ಹುಬ್ಬಳ್ಳಿಯಂವ’

ಹುಬ್ಬಳ್ಳಿ: ದಕ್ಷಿಣ ಆಫ್ರಿಕಾದ ಅತಿ ಎತ್ತರದ ಕಿಲಿಮಂಜಾರೋ ಪರ್ವತವನ್ನು ಏಳು ದಿನಗಳಲ್ಲಿ ಆರೋಹಣ ಮಾಡಿ, ಅಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹುಬ್ಬಳ್ಳಿಯವರೊಬ್ಬರು ಹಾರಿಸಿ ದೇಶದ ಹಿರಿಮೆ ಮೆರೆದಿದ್ದಾರೆ.


ಹೌದು, ಈ ಸಂತಸವನ್ನು ಪತ್ರಕರ್ತರ ಭವನದಲ್ಲಿ ಮಾಧ್ಯಮದವರೆದುರು ಹಂಚಿಕೊಂಡವರು ನಗರದ ಗಿರೀಶ ಹುಲ್ಲೂರ .
ತಾಂಜೇನಿಯಾದ ಮಳೆ ಕಾಡಿನಿಂದ ಆ. 13ರಿಂದ ಪರ್ವತಾರೋಹಣ ಆರಂಭವಾಗಿದ್ದು, ಆ. 19ರ ಬೆಳಿಗ್ಗೆ 7.45ಕ್ಕೆ ಪರ್ವತದ ತುತ್ತ ತುದಿಗೆ ತಲುಪಿದೆವು. ಪರ್ವತ ಏರುತ್ತಿದ್ದಂತೆ ಗಾಳಿಯ ರಭಸ, ಆಮ್ಲಜನಕದ ಕೊರತೆ ಹೆಚ್ಚುತ್ತಾ ಹೋಗುತ್ತಿತ್ತು. ದೈಹಿಕ ಹಾಗೂ ಮಾನಸಿಕವಾಗಿ ಪೂರ್ವಸಿದ್ಧತೆ ಮಾಡಿಕೊಂಡ ಕಾರಣ ತಾವು ಈ ಸವಾಲನ್ನು ಎದುರಿಸಿ ಯಶಸ್ವಿಯಾದುದನ್ನು ವಿವರಿಸಿದರು.


ವಿವಿಧ ದೇಶಗಳಿಂದ 300ಕ್ಕೂ ಅಧಿಕ ಪರ್ವತಾರೋಹಿಗಳು ಭಾಗವಹಿಸಿ ದ್ದರು. ಶೇ 60ರಷ್ಟು ಮಂದಿ ಮಾತ್ರ ಶಿಖರದ ತುತ್ತತುದಿ ತಲುಪಿದ್ದು, ಅವರಲ್ಲಿ ರಾಜ್ಯದ ಆರು ಜನರು ಇದ್ದರು. ಸಮುದ್ರ ಮಟ್ಟದಿಂದ 5895 ಮೀಟರ್ ಎತ್ತರದ ಪರ್ವತ ಏರಲು ಸ್ಥಳೀಯ ಸಹಕಾರ ಅಗತ್ಯವಾಗಿದೆ. ಮಳೆಗಾಲ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಪರ್ವತಾರೋಹಣ ಮಾಡಬಹುದು ಎಂದರು.


ಯಾವುದೇ ಸಾಧನೆಗೂ ವಯಸ್ಸು ಮುಖ್ಯವಲ್ಲ. ಅದನ್ನು ಸಾಧಿಸಬೇಕು ಎನ್ನುವ ಹಂಬಲ ಮತ್ತು ಆ ದಿಶೆಯಲ್ಲಿ ಪ್ರಯತ್ನ ಇರಬೇಕು ಎನ್ನುವ 49 ವರ್ಷದ ಗಿರೀಶ ಅವರು, ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಪರ್ವತಾ ರೋಹಣ ಮಾಡಿದ್ದೇನೆ. ಮಕ್ಕಳಲ್ಲಿ ಪರಿಸರದ ಪ್ರೀತಿ ಬೆಳೆಸಿಕೊಳ್ಳಲು ಪಾಲಕರು ಪ್ರೇರೇಪಿಸಲು ವಿನಂತಿಸಿದರು.ಗೋಷ್ಠಿಯಲ್ಲಿ ಸುಹಾಸಿನಿ ದೇಸಾಯಿ, ಮೋಹನ ದೇಸಾಯಿ, ವಿನಯ ಹುಲ್ಲೂರ ಇದ್ದರು.

 

administrator

Related Articles

Leave a Reply

Your email address will not be published. Required fields are marked *