ಹುಬ್ಬಳ್ಳಿ-ಧಾರವಾಡ ಸುದ್ದಿ

’ಅಮೃತ ಅಪಾರ್ಟ್‌ಮೆಂಟ್ಸ್’ಗೆ ಮೆಚ್ಚುಗೆಯ ಮಹಾಪೂರ

ಧಾರವಾಡ: ಚಿತ್ರಾ ಫಿಲಂ ಸೊಸೈಟಿ ಹಾಗೂ ಡಿಎಎಸ್‌ಎ ಟ್ರಸ್ಟ್ ಆಶ್ರಯದಲ್ಲಿ ಗುರುರಾಜ ಕುಲಕರ್ಣಿ(ನಾಡಗೌಡ) ನಿರ್ಮಾಣದ, ಬಿ.ಎಸ್.ಕೆಂಪರಾಜು ನಿರ್ದೇಶನದ ಅಮೃತ ಅಪಾರ್ಟ್‌ಮೆಂಟ್ಸ್ ಚಿತ್ರ ಪ್ರದರ್ಶನ ಶನಿವಾರ ಕರ್ನಾಟಕ ಕಾಲೇಜ್ ಕ್ಯಾಂಪಸ್‌ನಲ್ಲಿರುವ ಸೃಜನಾ ರಂಗಮಂದಿರದಲ್ಲಿ ಪ್ರದರ್ಶನಗೊಂಡಿತು.


ಚಿತ್ರ ಪ್ರದರ್ಶನದ ನಂತರ ಗುರುರಾಜ ಕುಲಕರ್ಣಿ(ನಾಡಗೌಡ) ಮಾತನಾಡಿ, ತಾವುಗಳು ಸಿನಿಮಾ ನೋಡಿ ಆಡಿದ ಪ್ರೋತ್ಸಾಹದ ಮಾತುಗಳೇ ಚಿತ್ರದ ಮೇಲೆ ಮತ್ತಷ್ಟು ಭರವಸೆ ಮೂಡಿಸಿವೆ. ಇದು ನಗರ ಜೀವನ ಕುರಿತು ಇರುವ ಕತೆ. ಸಂಬಂಧಗಳು, ಭಾವನೆಗಳು, ಅಧುನಿಕ ಜೀವನದ ಸಂಕೀರ್ಣತೆಗಳನ್ನು ತೊರಿಸುವ ಪ್ರಯತ್ನ ಮಾಡಿದ್ದೇನೆ ಎಂದರು.


ಒಟ್ಟಿಗೆ ಜೀವನ ಮಾಡುವುದಕ್ಕಿಂತ ಬೇರೆ ಬೇರೆ ಆಗಿಯೇ ಬದುಕುವುದೇ ಲೇಸು ಎನ್ನುವ ಈಗಿನ ಜನರೇಷನ್ ಕತೆಯನ್ನು ಹೇಳಲು ಪ್ರಯತ್ನ ಮಾಡಿದ್ದೇನೆ. ಚಿತ್ರದಲ್ಲಿ ರಂಗಭೂಮಿ, ಸಿನಿಮಾ ಹೀಗೆ ಎರಡೂ ಕ್ಷೇತ್ರದವರು ನಟಿಸಿರುವುದು ಚಿತ್ರದ ವಿಶೇಷ ಎಂದು ತಿಳಿಸಿದರು.


ತಾವು ಇದೇ ಕೆಸಿಡಿ ಕಾಲೇಜಿನಲ್ಲಿ 39 ವರ್ಷಗಳ ಹಿಂದೆ ಓದಿದ್ದೇನೆ. ಅದೇ ಕಾಲೇಜಿನ ಕ್ಯಾಂಪಸ್‌ನಲ್ಲಿ ಈ ಚಿತ್ರ ಪ್ರದರ್ಶನಗೊಂಡಿದ್ದಕ್ಕೆ ನನಗೆ ಅತಿ ಸಂತೋಷವಾಗಿದೆ ಎಂದರು.
ನಾನು ಸುಮಾರು 19 ವರ್ಷ 16 ದೇಶಗಳಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನಾನು ಹೋದ 16  ದೇಶದಲ್ಲಿ ಗುರುರಾಜ ಕುಲಕರ್ಣಿ ಅಷ್ಟೇ ಅಲ್ಲ ನಾನು ಕಲಿತ ಕೆಸಿಡಿ, ಕಿಟಲ್ ಕಾಲೇಜು ಹಾಗೂ ನಮ್ಮ ಈಡಿ ಧಾರವಾಡ ಪರಿಚಯ ಮಾಡಿಸಿದ್ದೇನೆ ಎಂದು ಹೇಳುವಾಗ ಭಾವುಕರಾದರು.


ಡಿಎಎಸ್‌ಎ ಟ್ರಸ್ಟ್‌ನ ರಾಜಶೇಖರ ಜಾಡರ, ಕಲಾವಿದರಾದ ಮಧು ದೇಸಾಯಿ, ಗಾಯತ್ರಿ ದೇಸಾಯಿ, ಚಿತ್ರಾ ಫಿಲಂ ಸೊಸೈಟಿ ಸದಸ್ಯರಾದ ಬಿ.ಎನ್.ಪುಜಾರಿ, ಖಾನ್, ಸಾಹಿತಿ ಶ್ಯಾಮ್‌ಸುಂದರ ಬಿದರಕುಂದಿ, ಡಾ.ಪ್ರಯಾಗ ಮೆಳವಂಕಿ, ಶಶಿಧರ ನರೇಂದ್ರ, ಪ್ರೊ.ದುರ್ಗದಾಸ, ನಾಗರಾಜ ಯಲಿಗಾರ, ಕುಮಾರ ಚಿನಿವಾಲ, ವಿರೇಶ ಕೆಲಗೇರಿ, ವಿ.ಆರ್.ಪಾಟೀಲ, ಸುರ್ಯನ್ ತಂಬುಲಿ ಸೇರಿದಂತೆ ಇತರರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಂಚಿಕೊಂಡರು.

 

administrator

Related Articles

Leave a Reply

Your email address will not be published. Required fields are marked *