ಹುಬ್ಬಳ್ಳಿ-ಧಾರವಾಡ ಸುದ್ದಿ

ಎಲ್ಲ ಔಷಧಿ ಪದ್ಧತಿಗಳು ಒಂದು ಕುಟುಂಬ

ವೈದ್ಯ ಗೋಷ್ಠಿಯಲ್ಲಿ ತಜ್ಞರ ಅಭಿಪ್ರಾಯ

ಹುಬ್ಬಳ್ಳಿ (ವಿಶ್ವೇಶ ತೀರ್ಥ ವೇದಿಕೆ) ; ಜಗತ್ತಿನ ಔಷಧ ಪದ್ಧತಿಗಳಲ್ಲಿ ಆಯುವೇದವು ಪತಿಯಾದರೆ, ಅಲೋಪತಿ ಪತ್ನಿ ಇತರ ಔಷಧಗಳು ಮಕ್ಕಳು ಎಲ್ಲ ಸೇರಿ ಒಂದು ಕುಟುಂಬ ಎಂದು ಇಲ್ಲಿನ ಶ್ರೀನಿವಾಸ ಗಾರ್ಡನ್‌ನಲ್ಲಿ ನಡೆದಿರುವ ಅಖಿಲ ಭಾರತ 29ನೇ ಮಾಧ್ವ ತತ್ವಜ್ಞಾನ ಸಮ್ಮೇಳನದಲ್ಲಿ ಏರ್ಪಡಿಸಲಾಗಿದ್ದ ವೈದ್ಯಗೋಷ್ಠಿಯಲ್ಲಿ ಭಾಗವಹಿಸಿದ್ದ ಹಿರಿಯ ವೈದ್ಯರು ಪ್ರತಿಪಾದಿಸಿದರು.


ಪ್ರಾಚೀನ ಹಾಗೂ ಆಧುನಿಕ ವೈದ್ಯ ಪದ್ಧತಿ ಕುರಿತು ನಡೆದ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ವಿ.ಜಿ.ನಾಡಗೌಡ ಈ ಎಲ್ಲ ವೈದ್ಯ ಪದ್ಧತಿಗಳನ್ನು ಬಳಸಿಕೊಂಡು ದೇಶದ ಎಲ್ಲ ಜನರು ಆರೋಗ್ಯವಂತ ಬದುಕು ನಡೆಸುವಂತೆ ಮಾಡುವುದು ಎಲ್ಲ ವೈದ್ಯರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಅಲೋಪತಿ ಔಷಧ ಪದ್ಧತಿ ಬಳಸಿ ಎಂಥಹ ರೋಗಗಳನ್ನೂ ಕೂಡ ಕಡಿಮೆ ಅವಧಿಯಲ್ಲಿ ಕಡಿಮೆ ಮಾಡಬಹುದು ಡಾ. ಅಮಿತ ವಿಕ್ರಮ ಹೇಳಿದರಲ್ಲದೇ ಮೊದಲಿನ ಹಾಗೆ ಈಗ ಶಸ್ತ್ರಕ್ರಿಯೆ ಎಲ್ಲ ರೋಗಗಳಿಗೂ ಅನಿವಾರ್ಯವಾಗಿಲ್ಲ. ಟ್ಯೂಬ್ ಬಳಸಿ ಹೃದಯ ರಕ್ತನಾಳದಲ್ಲಿದ್ದ ಅಡಚಣೆಗಳನ್ನು ತೆಗೆದುಹಾಕಬಹುದು. ಹೀಗೆ ಆಧುನಿಕ ವಿಜ್ಞಾನವು ಬಹಳ ಮುಂದುವರೆದಿದೆ ಎಂದರು.


ಒಬ್ಬ ವ್ಯಕ್ತಿ ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿದ್ದರೆ ಮಾತ್ರ ಅದು ಉತ್ತಮ ಆರೋಗ್ಯದ ಲಕ್ಷಣ ಎಂದು ಡಾ. ಅನಿರುದ್ಧ ಕುಲಕರ್ಣಿ ಅಭಿಪ್ರಾಯಪಟ್ಟರು. ಆರೋಗ್ಯವು ಉತ್ತಮವಾಗಿದ್ದರೆ ಉತ್ತಮ ಸಮಾಜ ಹಾಗೂ ಶಕ್ತಿಶಾಲಿ ದೇಶ ನಿರ್ಮಾಣ ಸಾಧ್ಯ ಎಂದರು
ಆಯುರ್ವೇದ ಔಷಧಿ ಪದ್ಧತಿ ಯಾವ ಕಾಲದಲ್ಲಿ ಯಾವ ಆಹಾರ ಸೇವಸಬೇಕು ಮತ್ತು ಬರುವ ರೋಗಗಳನ್ನು ಹೇಗೆ ಬರದಂತೆ ತಡೆಯಬೇಕು ಎಂಬುದರ ಮಾರ್ಗದರ್ಶನ ಮಾಡುವುದು ಎಂದು ಡಾ.ಗಿರಿಧರ ಕಜೆ ಹೇಳಿದರು. ಬೇಸಿಗೆಯಲ್ಲಿ ಬಜ್ಜಿ ಬೋಂಡ ತಿಂದರೆ ಅದು ಬಾಧಕವಾಗುವುದು. ಅವುಗಳನ್ನು ಚಳಿಗಾಲದಲ್ಲಿ ಸೇವಿಸಿದರೆ ಆರೋಗ್ಯ ಕೆಡುವುದಿಲ್ಲ. ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ನೋಡಲು ಬರುವ ಸಂಬಂಧಿಕರು ಸೇಬು ಹಣ್ಣು ಕೊಡುತ್ತಾರೆ. ಆದರೆ ಸಂದಿನೋವು, ಅಪಚನವಿದ್ದವರಿಗೆ ಕೊಡಬಾರದು, ಅವರು ಸೇಬು ತಿಂದರೆ ರೋಗ ಉಲ್ಬಣವಾಗುವ ಸಾಧ್ಯತೆ ಹೆಚ್ಚು ಎಂದರು.

ಅಲೋಪತಿ ವೈದ್ಯರು ರೋಗಿಗೆ ಔಷಧ ಕೊಟ್ಟ ಮೇಲೆ ಸೂಚಿಸುವ ಆಹಾರ ಪಥ್ಯೆ ಎಂಬುದು ಆಯುರ್ವೇದದಿಂದ ತೆಗೆದುಕೊಂಡಿದ್ದಾಗಿದೆ ಎಂದು ಡಾ. ಜಿ.ಬಿ.ಸತ್ತೂರ ಹೇಳಿದರು. ಜಂಕ್ ಫುಡ್ ಸೇವನೆಯಂಥ ಆಧುನಿಕ ಜೀವನ ಶೈಲಿಯು ಜನರ ಆರೋಗ್ಯವನ್ನು ಹಾಳುಗೆಡವಿದೆ ಎಂದರು. ರೋಗ ಚಿಕಿತ್ಸೆ ಗೆ ಆಯುರ್ವೇದ ಮತ್ತು ಅಲೋಪತಿ ಔಷಧಿಗಳನ್ನು ಬಳಕೆ ಮಾಡಬೇಕು ವ್ಯಾಪಾರಿ ದೃಷ್ಟಿ ಬೇಡ ಎಂದರು.

ಸಮನ್ವಯದ ಬದುಕಿಗೆ
ಮಧ್ವ ತತ್ವ ಮಾರ್ಗದರ್ಶಿ

ಹುಬ್ಬಳ್ಳಿ: ಆಶಾವಾದದ ಜಗತ್ತಿನಲ್ಲಿ ಬದುಕಲೇಬೇಕಾದ ಸದವಕಾಶದ ಸರಳವಾದ ಪಥ ತೋರಿದವರೇ ಮಧ್ವರು ಎಂದು ಸುಬ್ರಮಣ್ಯಮಠದ ವಿದ್ಯಾಪ್ರಸನ್ನತೀರ್ಥರು ಹೇಳಿದರು.
ಅವರು ನಗರದ ಕುಸುಗಲ್ಲ ರಸ್ತೆಯ ಶ್ರೀನಿವಾಸ ಗಾರ್ಡನ್‌ನ ವಿಶ್ವೇಶತೀರ್ಥವೇದಿಕೆಯಲ್ಲಿ ನಡೆದ ದಾಸ ಸಾಹಿತ್ಯ ಗೋಷ್ಠಿಯಲ್ಲಿ ಆಶೀರ್ವಚನ ನೀಡಿದರು.


ಮುಂದುವರಿಸಿ ಮಾತನಾಡಿದ ಅವರು ಪ್ರಪಂಚದ ಜೀವ-ಜಡವಸ್ತುವಿಗೆ ಸೃಷ್ಟಿ ಸ್ಥಿತಿ ಮತ್ತು ಲಯ ಇದ್ದೇ ಇದೆ. ಆದರೆ ಜಡವಸ್ತುವಿಗೆ ಜ್ಞಾನವಿಲ್ಲ. ಚೈತನ್ಯಕ್ಕೆ ಜ್ಞಾನಾಜ್ಞಾನದ ಅಸಾಧಾರಣ ಗುಣವಿದೆ. ಪ್ರಪಂಚದಲ್ಲಿ ಚಾರ್ವಾಕ ಸಿದ್ಧಾಂತ ಮೇಲ್ನೋಟಕ್ಕೆ ಗ್ರಾಹ್ಯವೆನಿಸಿದರೂ ಅದನ್ನು ಸಂಪೂರ್ಣವಾಗಿ ಯಾರೂ ಒಪ್ಪಿಕೊಂಡಿಲ್ಲ. ಅದು ಕ್ಷೇಮಕರವಲ್ಲವೆಂದು ಎಲ್ಲರಿಗೂ ಗೊತ್ತು.
ಚಾರ್ವಾಕ ಸಿದ್ಧಾಂತದಿಂದ ಬಲ ಇದ್ದವರು ದುರ್ಬಲರನ್ನು ಬಲಿ ತೆಗೆದುಕೊಳ್ಳಬಾರದು ಎಂದಾದರೆ ಸಮನ್ವಯದಿಂದ ಬದುಕಬೇಕಾದರೆ ಮಧ್ವ ತತ್ವವೇ ಅತ್ಯಂತ ಸರಿಯಾದ ಮಾರ್ಗವಾಗಿದೆ. ಎಂದು ಪ್ರತಿಪಾದಿದರು.
ದೈವಿಕ ಅಸ್ಥಿತ್ವದ ಬಗ್ಗೆ ಓದಬೇಕಾದರೆ ಮಧ್ವಶಾಸ್ತ್ರದ ಜ್ಞಾನ ಅಗತ್ಯವಾಗಿ ಬೇಕು ಎಂದರು.

ಜಾತಿ ಮೂಲಕ ಜ್ಞಾನದ ವಿರೋಧ ಬೇಡ

ಹುಬ್ಬಳ್ಳಿ(ಶ್ರೀ ವಿಶ್ವೇಶತೀರ್ಥ ವೇದಿಕೆ): ಆಯಾ ಕಾಲಕ್ಕೆ ತಕ್ಕಂತೆ ಆಚಾರ್ಯ ಪುರುಷರು ಹುಟ್ಟಿ ಸಮಾಜವನ್ನು ಮೇಲೆತ್ತುವ ಕೆಲಸ ಮಾಡುತ್ತಲೇ ಬಂದಿ ದ್ದಾರೆ. ಒಂದು ಸಮಾಜ ಮುಂದೆ ನಿಂತು ದೇಶಕ್ಕೆ ಇಂಥಹ ಸಮ್ಮೇಳನದ ಮೂಲಕ ಉತ್ತಮ ವಿಚಾರಗಳನ್ನು ನೀಡುತ್ತಿರುವದು ಹೆಮ್ಮೆಯ ವಿಷಯ ವಾಗಿದೆ ಎಂದು ಪರಿಷತ್ ಮಾಜಿ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದರು.


೨೯ ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಮಹಾಸಮ್ಮೇಳನದ ಮೊದಲನೆ ದಿನ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಞಾನಕ್ಕೆ ಮತ್ಸರ ಬೇಡ. ಜಾತಿ ಮೂಲಕ ವಿರೋಧಿಸುವದು ಸರಿಯಲ್ಲ. ಶಿಕ್ಷಣ ಎಲ್ಲರೂ ಕೊಡಬಹುದು ಆದರೆ ಏನೇ ಆದರು ಕೂಡ ಸಂಸ್ಕಾರವನ್ನು ರೂಪಿಸುವ ವಿಚಾರ ಬಂದಾಗ ಮಧ್ವ ಸಮಾಜ ಮುಂದೆ ಇದೆ. ಸಮ್ಮೇಳನದ ಉತ್ತಮಾಂಶಗಳು ಕೃತಿ ರೂಪದಲ್ಲಿ ಬರಲಿ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಈ ಮಹಾಸಮ್ಮೇಳನ ಒಂದು ಸಮುದಾಯದ ಸಮ್ಮೇಳನ ಮಾತ್ರವಲ್ಲ ಇದು ಇಡೀ ನಮ್ಮ ಸಂಸ್ಕೃತಿ ಮತ್ತು ಸದಾಚಾರ ರಾಷ್ಟ್ರಭಕ್ತಿ ಬೆಳೆಸುವ ಸಮಸ್ತ ಜನರ ಸಮ್ಮೇಳನ ವಾಗಿದೆ ಎಂದರು.


ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮನುಷ್ಯನ ಬದುಕು ಯಾವ ರೀತಿ ಇರಬೇಕು. ನಮ್ಮ ನಡೆ ಜೀವನ ಆಚಾರ ವಿಚಾರ ಯಾವ ರೀತಿ ಇರಬೇಕು. ಎಂಬ ದಾರ್ಶನಿಕರ ಬೋಧನೆ ಮಾಡಿದ್ದಾರೆ. ಆಚಾರ್ಯ ಮಧ್ವರ ಸಮದರ್ಶಿತ್ವ ಸಾರುವ ಈ ಸಮ್ಮೇಳನ ಚರಿತ್ರಾರ್ಹ ಎಂದರು.
ಈ ವೇಳೆ ಬ್ರಾಹ್ಮಣ ಶಿಕಾರಿ ಪುಸ್ತಕವನ್ನು ಬಾಳಗಾರು ಅಕ್ಷೆಭ್ಯ ತೀರ್ಥ ಮಠದ ರಘುಭೂಷಣ ತೀರ್ಥರು ಲೋಕಾರ್ಪಣೆ ಮಾಡಿದರು.ಸಾನಿಧ್ಯ ವಹಿಸಿದ್ದ ಸಮ್ಮೇಳನದ ರೂವಾರಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಆಶೀರ್ವಚನ ನೀಡಿದರು.


ಉದ್ಯಮಿ ಡಾ ಚಿಗರುಪಾಟಿ ವಿಎಸ್‌ವಿ ಪ್ರಸಾದ, ಅನಂತರಾಜ ಭಟ್, ಕೃಷ್ಣರಾಜ ಕೆಮ್ತೂರು, ಎನ್.ಎಚ್.ಕುಲಕರ್ಣಿ, ಶ್ರೀಪಾದ ಸಿಂಗನಮಲ್ಲಿ ಉಪಸ್ಥಿತರಿದ್ದರು. ಗೋಪಾಲಕೃಷ್ಣ ನಾಯಕ ಗುಜ್ಜಾಡಿ ಸ್ವಾಗತಿಸಿದರು. ಎ.ಸಿ.ಗೋಪಾಲ ವಂದಿಸಿದರು. ಶ್ರೀಕಾಂತ ಕೆಮ್ತೂರು, ಮದನ ಕುಲಕರ್ಣಿ, ಗೋಪಾಲ ಕುಲಕುರ್ಣಿ,ಗುರುರಾಜ ಕೌಜಲಗಿ, ಎ.ಪಿ.ಐತಾಳ, ಸುನೀಲ ಗುಮಾಸ್ತೆ, ಶಂಕರ ಸಿ.ಪಾಟೀಲ,ಜಯತೀರ್ಥ ಕಟ್ಟಿ,ಮನೋಹರ ಪರ್ವತಿ,ಅಭಿಷೇಕ ಕೌಜಲಗಿ,ಸುಶೀಲೇಂದ್ರ ಕುಂದರಗಿ, ಜನಮೇಜಯ ಉಮರ್ಜಿ,ವಾದಿರಾಜ ಕುಲಕರ್ಣಿ ಸೇರಿದಂತೆ ಅನೇಕರಿದ್ದರು.

administrator

Related Articles

Leave a Reply

Your email address will not be published. Required fields are marked *