ಹುಬ್ಬಳ್ಳಿ-ಧಾರವಾಡ ಸುದ್ದಿ

ಡಾ. ಭಾಗ್ಯಜ್ಯೋತಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ

ಧಾರವಾಡ ಪ್ರಿಮಿಯರ್ ಸಿಟಿಜನ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ

ಧಾರವಾಡ: ಇಲ್ಲಿಯ ಎಂಜಿನಿಯರ್ ಸಭಾಂಗಣದಲ್ಲಿ ಧಾರವಾಡ ಪ್ರಿಮಿಯರ್ ಸಿಟಿಜನ್ ಕ್ಲಬ್ ವತಿಯಿಂದ ಶಿಕ್ಷಕರ ದಿನ ಆಚರಿಸಲಾಯಿತು.


ನವಲಗುಂದ ತಾಲ್ಲೂಕಿನ ಶಿರೂರ ಗ್ರಾಮದ ಎನ್.ಜಿ.ಬಾಳನಗೌಡರ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಡಾ.ಭಾಗ್ಯಜ್ಯೋತಿ ಕೋಟಿಮಠ ಅವರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎಸ್.ಆರ್. ರಾಮನಗೌಡರ, ಡಾ.ವೇದವ್ಯಾಸ ದೇಶಪಾಂಡೆ ಅವರನ್ನು ಸನ್ಮಾನಿಸ ಲಾಯಿತು.


ಸನ್ಮಾನ ಸ್ವೀಕರಿಸಿದ ಡಾ.ಎಸ್.ಆರ್. ರಾಮನಗೌಡರ ಮಾತನಾಡಿ, ಆಲದ ಮರದ ಸಂಕೇತ ಹೊಂದಿದ ಈ ಕ್ಲಬ್ ಆಲದ ಮರದ ರೀತಿ ಇನ್ನು ವಿವಿಧೆಡೆ ಪಸರಿಸಿ ಒಳ್ಳೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಿ ಎಂದು ಹಾರೈಸಿದರು.
ಡಾ.ವೇದವ್ಯಾಸ ದೇಶಪಾಂಡೆ ಮಾತನಾಡಿ, ಬಡತನದಲ್ಲಿರುವ ಪರಿಸ್ಥಿತಿ ಯನ್ನು ಕಣ್ಣಾರೆ ಕಂಡ ತಮಗೆ ಹೆಬ್ಬಳ್ಳಿ ಗ್ರಾಮದಲ್ಲಿ ಉಳಿಯುವಂತೆ ಮಾಡಿತು ಎಂದರು.
ಡಾ.ಭಾಗ್ಯಜ್ಯೋತಿ ಮಾತನಾಡಿ, ಶಿಕ್ಷಕ ವೃತ್ತಿ ಎಂಬುದು ಉತ್ತಮವಾದ ಮತ್ತು ಗೌರವಯುತ ವೃತ್ತಿ ಎಂದರು.


ಕ್ಲಬ್ ಅಧ್ಯಕ್ಷ ಸಿ.ಎಚ್. ಶಿವಾನಂದ, ವಾಸು ಕುಲಕರ್ಣಿ, ಜಿ.ಎನ್. ಇನಾಮದಾರ, ಅಂಬೇಕರ್, ಗಿರೀಶ ವಾಜಪೇಯಿ, ಪಿ.ಎಸ್.ಕವಿ, ಜಿ.ಎಚ್.ಕುಲಕರ್ಣಿ, ಸರಸ್ವತಿ ಜೋಶಿ, ಸುನೀತಾ ಪುರೋಹಿತ, ಸಂಗೀತಾ ಮಿಶ್ರಿಕೋಟಿ, ಎಂ.ವಿ.ಹೊಂಡೆಪ್ಪನವರ, ಕೇಶವ ತಡಸ, ಆರ್.ಎಸ್.ದೊಡಮನಿ, ಹಳಕಟ್ಟಿ, ಡಾ.ಜೆ.ಎಚ್.ಕುಲಕರ್ಣಿ, ಶಿವಾನಂದ ನಾಗೂರ, ಬಸವರಾಜ ಕೌಜಲಗಿ, ಪೂರ್ಣಿಮಾ ಮುಕ್ಕುಂದಿ, ಪ್ರೀತಿ ನಾಯ್ಕ, ಶ್ರೀಕಾಂತಗೌಡ ಗೌಡರ, ಅನಂತ ತೀಟೆ, ಇದ್ದರು. ಸುನಿತಾ ಇನಾಮದಾರ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಜಿ.ಜಿ.ಭಾರಬರಿ ವಂದಿಸಿದರು.

 

administrator

Related Articles

Leave a Reply

Your email address will not be published. Required fields are marked *