ಹುಬ್ಬಳ್ಳಿ-ಧಾರವಾಡ ಸುದ್ದಿ

ಪಾಲಿಕೆಯಲ್ಲಿ ತುರ್ತು ಕಾಮಗಾರಿಗೂ ಅನುದಾನವಿಲ್ಲ

ಕಾಂಗ್ರೆಸ್‌ನಿಂದ ’ಸೇ ಮೇಯರ್’ ಅಭಿಯಾನ

ಹುಬ್ಬಳ್ಳಿ : ಕಾಂಗ್ರೆಸ್‌ನಿಂದ ’ಪೇ ಸಿಎಂ’ ಅಭಿಯಾನದ ಬೆನ್ನಲ್ಲೇ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸದ ಮುಖ್ಯಮಂತ್ರಿ ವಿರುದ್ಧ ‘ಸೇ ಸಿಎಂ’ ಅಭಿಯಾನ ಆರಂಭಿಸಲು ಮುಂದಾಗಿದ್ದು ಅದೇ ರೀತಿ ಮಹಾನಗರದಲ್ಲಿ ಕೂಡ ಕಾಂಗ್ರೆಸ್ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹಾಗೂ ಆಡಳಿತಾರೂಢ ಬಿಜೆಪಿ ಬೆನ್ನು ಬಿದ್ದಿದ್ದು ’ಸೇ ಮೇಯರ್’ ಅಭಿಯಾನ ಆರಂಭಿಸಲು ಮುಂದಾಗಿದೆ.


ಇಂದು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ 53ನೇ ವಾರ್ಡಿನ ಕೈ ಸದಸ್ಯ ಎಂ.ಎಂ.ಭದ್ರಾಪುರ ಪಾಲಿಕೆಯಲ್ಲಿ ತುರ್ತು ಕಾಮಗಾರಿಗಳ ಕೈಗೊಳ್ಳಲು ಅನುದಾನವಿಲ್ಲ.ಆದರೆ ಮೇಯರ್ ಕಚೇರಿ ನವೀಕರಣಕ್ಕೆ ಸುಮಾರು 1 ಕೋಟಿ, ಅಲ್ಲದೇ ಕಳೆದ ಆರು ತಿಂಗಳಿಂದ ಬಾಡಿಗೆ ಇನ್ನೋವಾ ಕಾರಿಗೆ ತಿಂಗಳಿಗೆ 70 ಸಾವಿರ ಪಾವತಿಸುತ್ತಿದ್ದು ಇದಕ್ಕೇನೆನ್ನುತ್ತೀರಿ ಎಂದು ಸೇ ಮೇಯರ್ ಆರಂಭಿಸಿರುವದಾಗಿ ಹೇಳಿದರಲ್ಲದೇ ಟ್ರಾವೆಲ್ಸ್ ಬಿಲ್ ಸಹಿತ ಎಲ್ಲ ದಾಖಲೆ ಬಹಿರಂಗಗೊಳಿಸಿದರು.

ತಾವು 2 ತಿಂಗಳ ಹಿಂದೆ ಆಯುಕ್ತರು ಆನಂದ ನಗರಕ್ಕೆ ಸಮೀಕ್ಷೆಗೆ ಬಂದಾಗ ಒಂದು ಒಳಚರಂಡಿಗೆ ಕೂಡಲೆ ಅಂದಾಜು ಪತ್ರಿಕೆ ತಯಾರಿಸಲು ಹೇಳಿದ್ದರು. ಎರಡು ದಿನಗಳ ನಂತರ ಭದ್ರಾಪುರ ಆಯುಕ್ತರಿಗೆ ಮುಂಗಡ ಕೆಲಸ ಆರಂಭಿಸಲು ವಿನಂತಿಸಿದರೂ ಆದೇಶ ವಿಲ್ಲದೇ ಕಾರ್ಯ ಮಾಡಬಾರದೆಂದಿದ್ದರು. ಸಮೀಕ್ಷೆ ನಡೆಸಿ 5 ಲಕ್ಷ 63 ಸಾವಿರ ಮೊತ್ತ ನಿಗದಿಪಡಿಸಿದ್ದರೂ ಈಗ ಸದರಿ ಕಡತ ನೋಡಿದಾಗ 2022-23ನೇ ಸಾಲಿನಲ್ಲಿ ಒಟ್ಟು ಸುಮಾರು 345 ಕೋಟಿ ಮೊತ್ತದ ಒಂದು ಆರ್ಥಿಕ ವರ್ಷಕ್ಕೆ ೩೫ ಕೋಟಿ ರೂ ಮಾತ್ರ ಸಾಧ್ಯವಿದೆ ಎಂದು ಹೇಳಿ ವರದಿ ಸಲ್ಲಿಸಿದ್ದು, ಕಾರಣ 11 ವರ್ಷಗಳ ಬಳಿಕ ಹಣ ಪಡೆಯುವ ಗುತ್ತಿಗೆದಾರರನ್ನು ನೇಮಿಸುವಂತೆ ಸೂಚಿಸಲಾಗುತ್ತಿದೆ. ಇಂತಹ ಗುತ್ತಿಗೆದಾರರು ಯಾರಿಗೂ ಸಿಗುವುದಿಲ್ಲ. ಇದರಿಂದ ಜನರ ಸಮಸ್ಯೆ ಪರಿಹಾರವಾಗುತ್ತಿಲ್ಲ ಎಂದರು.


ಇದೀಗ ಲಭ್ಯವಿರುವ ಆದಾಯ ಮೂಲದಿಂದ ಹೆಚ್ಚುವರಿ ಕಾಮಗಾರಿಗೆ ಹಣ ಪಾವತಿ ಕಷ್ಟವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾದರೇ ನಮ್ಮನ್ನು ನಂಬಿ ಮತ ನೀಡಿದ ಜನರಿಗೆ ಉತ್ತರ ಕೊಡುವುದು ಹೇಗೆ ಎಂದು ಗೋಷ್ಠಿಯಲ್ಲಿದ್ದ ಗೋಷ್ಡಿಯಲ್ಲಿದ್ದ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಪಾಲಿಕೆ ಸದಸ್ಯರಾದ ಇಕ್ಬಾಲ್ ನವಲೂರ,ಸೆಂದಿಲ್ ಕುಮಾರ ಮುಂತಾದವರು ಪ್ರಶ್ನಿಸಿದರು.

 

administrator

Related Articles

Leave a Reply

Your email address will not be published. Required fields are marked *