ಸ್ನೇಹ ಮಿಲನದಲ್ಲಿ ನೆನಪಿನ ಬುತ್ತಿ ಅನಾವರಣ
ಧಾರವಾಡ: ಇಲ್ಲಿನ ಡಿಸಿ ಕಂಪೌಂಡ್ನ ಅಕ್ಕನ ಬಳಗದಲ್ಲಿ ಮಂಗಳವಾರ ಜರುಗಿದ ಸಮಾಜ ಸೇವಕ ಆರ್.ಕೆ.ಪಾಟೀಲ ಅವರ ಎಲ್ಲ ಗೆಳೆಯರ ಸ್ನೇಹ ಸಮ್ಮಿಲನ ನಡೆಯಿತು.
67ನೇಯ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ತಾಯಿ ಭುವನೇಶ್ವರಿ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೆ.ಇ.ಬೋರ್ಡ್ಸ್ ಶಾಲೆ, ಜೆಎಸ್ಎಸ್ ಮಹಾ ವಿದ್ಯಾಲಯ ಮತ್ತು ಎಸ್ಡಿಎಂ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ ಆರ್.ಕೆ.ಪಾಟೀಲರ ಎಲ್ಲ ಗೆಳೆಯರು ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು. ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು.
ಹಲವಾರು ಆರ್ಕೆಪಿ ಗೆಳೆಯರು ಮಾತನಾಡಿ, ಪ್ರಸಕ್ತ ಸಂದರ್ಭದಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಸಜ್ಜನ ಪ್ರಾಮಾಣಿಕ ವ್ಯಕ್ತಿಯ ಅವಶ್ಯಕತೆ ಇದೆ ಎಂಬ ಅಭಿಮತ ವ್ಯಕ್ತಪಡಿಸಿದರು.ನಂತರ ಆರ್.ಕೆ.ಪಾಟೀಲ ಮಾತನಾಡಿ, ಎಲ್ಲ ನನ್ನ ಗೆಳೆಯರ ಬೆಂಬಲ ನನಗೆ ಆನೆಬಲ ತಂದಿದೆ ಎಂದರಲ್ಲದೇ ಸನ್ಮಾನ ಹಾಗೂ ಗೌರವ ಅಕ್ಷರಶಃ ಭಾವುಕರನ್ನಾಗಿಸಿತು.
ಎಪಿಎಂಸಿ ಮಾಜಿ ಅಧ್ಯಕ್ಷ ಕಲ್ಲಪ್ಪಣ್ಣ ಯಲಿವಾಳ, ಗುರುಮೂರ್ತಿ ಯರಗಂಬಳಿಮಠ, ಗಿರಿಮಲ್ಲಯ್ಯ ನಂದಿಕೋಲಮಠ, ಗುರು ಹಿರೇಮಠ, ಸುನೀಲ ಬಾಗೇವಾಡಿ, ಆರ್.ಬಿ.ಪಾಟೀಲ, ಬಂಗಾರೇಶ್ ಹಿರೇಮಠ, ಬಾಬಾಜಾನ್ ಮುಧೋಳ, ರವಿ ಕಪಲಿ, ಕುಮಾರಗೌಡ ಪಾಟೀಲ, ಹರೀಶ ಬಾಳಂಬೀಡ, ಶಿವು ಹಿರೇಮಠ, ಪ್ರಸನ್ನ ಜೋಶಿ, ಫಯಾಜ್ ಜಾಗಿರದಾರ, ಆನಂದ ಬದಾಮಿ, ಕುಮಾರ ಚಿನಿವಾಲ, ರವಿ ಕುಲಕರ್ಣಿ, ಗೋಪಿ ಸೇರಿದಂತೆ 300ಕ್ಕೂ ಹೆಚ್ಚು ಗೆಳೆಯರು ಭಾಗವಹಿಸಿದ್ದರು.