ಹುಬ್ಬಳ್ಳಿ-ಧಾರವಾಡ ಸುದ್ದಿ

ಬೆಲ್ಲದ, ಯತ್ನಾಳ ಹೇಳಿಕೆ ಖಂಡನೀಯ

ಮುಸ್ಲಿಂ ಮೀಸಲು ಕೇಳದಂತೆ ಇಸ್ಮಾಯಿಲ್ ತಮಟಗಾರ ಮನವಿ

ಧಾರವಾಡ: ಓಬಿಸಿ ಕೊಟಾದಿಂದ ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆಯುವಂತೆ ಸರಕಾರವನ್ನು ಆಗ್ರಹಿಸಿರುವ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಬಸವರಾಜ ಪಾಟೀಲ ಯತ್ನಾಳ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಖಂಡಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪಂಚಮಸಾಲಿ ಶ್ರೀಗಳ ಬಗ್ಗೆ ಗೌರವ ಇದೆ. ಅವರ 2ಎ ಮೀಸಲಾತಿ ಹೋರಾಟ ಮುಸ್ಲಿಂ ಸಮುದಾಯ ಬೆಂಬಲಿಸಲಿದೆ. ಆದರೆ, ಮುಸ್ಲಿಂ ಮೀಸಲಾತಿ ಕಬಳಿಸುವ ಉಭಯ ಶಾಸಕರ ಹೇಳಿಕೆ ಸರಿಯಲ್ಲ ಎಂದರು.
ಇಂತಹ ಹೇಳಿಕೆ ಮೂಲಕ ಮುಸ್ಲಿಂ ಹಾಗೂ ಪಂಚಮಸಾಲಿ ಸಮಾಜದ ನಡುವೆ ಒಡಕು ಮೂಡಿಸುವುದು ಸಲ್ಲ. ಇಂಥ ಹೇಳಿಕೆ ನೀಡದಂತೆ ಈ ನಾಯಕರಿಗೆ ತಿಳುವಳಿಕೆ ಹೇಳುವಂತೆ ಶ್ರೀಗಳಿಗೆ ಮನವಿ ಮಾಡಿದರು.


ನಮ್ಮ ಸಮುದಾಯ ಎಂದಿಗೂ ಯಾವುದೇ ಸಮಾಜದ ಮೀಸಲಾತಿ ವಿರುದ್ಧ ಇಲ್ಲ. ಆದರೆ, ಮುಸ್ಲಿಂ ಸಮಾಜದ ಮೀಸಲಾತಿ ಬಗ್ಗೆ ಅಪಸ್ವರ ಎತ್ತದಂತೆ, ಹೋರಾಟ ತಪ್ಪು ದಾರಿಗೆ ಎಳೆಯದಂತೆ ಹಾಗೂ ಮುಸ್ಲಿಂ ಮೀಸಲಾತಿ ಕೇಳದಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿದರು.
ಯತ್ನಾಳ ಜೊತೆ ವೇದಿಕೆಯನ್ನು ಹಂಚಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ತಮಟಗಾರ ಒತ್ತಾಯಿಸಿದರು.


ತಾವು ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದು, ಟಿಕೇಟ್ ಸಿಗುವ ವಿಶ್ವಾಸವಿದೆ. ಹೀಗಾಗಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎಂದ ಅವರು, ವಿನಯ ಕುಲಕರ್ಣಿ ಅವರು ರಾಜ್ಯ ನಾಯಕರು, ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ, ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಐ.ಎ.ಜಮಾದಾರ, ಕಾರ್ಯದರ್ಶಿ ನಜೀರ ಮನಿಯಾರ, ಮಹ್ಮದಶಕೀಲ ತಮಟಗಾರ, ಬಶೀರ ಜಾಗೀರದಾರ, ಡಾ.ಎಸ್.ಎಸ್.
ಸರಗಿರೋ, ಎಸ್.ಎಸ್. ಸೌದಾಗರ ಸುದ್ದಿಗೋಷ್ಠಿಯಲ್ಲಿದ್ದರು.

 

administrator

Related Articles

Leave a Reply

Your email address will not be published. Required fields are marked *