ಹುಬ್ಬಳ್ಳಿ-ಧಾರವಾಡ ಸುದ್ದಿ

7ರಂದು ಚನ್ನಮ್ಮನ ಕಿತ್ತೂರಿನಲ್ಲಿ ’ವಿನಯೋತ್ಸವ’

ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿ, ದರ್ಶನ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರ 54ನೇ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ’ಜನನಾಯಕನಿಂದ ಜನ ನಮನ’ ಹೆಸರಲ್ಲಿ ದಿ.7ರಂದು ಕಿತ್ತೂರಿನಲ್ಲಿ ’ವಿನಯೋತ್ಸವ’ ಹಮ್ಮಿಕೊಂಡಿದೆ.


ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್ ಮುಖಂಡರಾದ ಬಾಬಾಸಾಹೇಬ ಪಾಟೀಲ, ಅರವಿಂದ ಏಗನಗೌಡರ ಹಾಗೂ ಈಶ್ವರ ಶಿವಳ್ಳಿ, ಇದೊಂದು ಪೋಷಿತ ಕಾರ್ಯಕ್ರಮ ಅಲ್ಲ ಎಂದು ಸ್ಪಷ್ಟಪಡಿಸಿದರು.
ವಿನಯ ಅವರು ಧಾರವಾಡ ಕ್ಷೇತ್ರಕ್ಕೆ ಬರಲು ಕಾನೂನು ತೊಡಕಿದೆ. ಈ ಹಿನ್ನೆಲೆ ಗಡಿ ಭಾಗದ ಕಿತ್ತೂರಿನ ಮಿನಿ ವಿಧಾನಸೌಧದ ಬಳಿ ಮೈದಾನದಲ್ಲಿ ಪಕ್ಷಾತೀತವಾಗಿ ಜನ್ಮದಿನ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಚಿತ್ರನಟ ದರ್ಶನ ಅವರು ಸಹ ಆಗಮಿಸಲಿದ್ದು, ಅಂದಾಜು ಎರಡು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಶಾಸಕರಾಗಿ, ಸಚಿವರಾಗಿ ವಿನಯ ಅವರು ಮಾಡಿದ ಕೆಲಸಗಳೇ ಅವರಿಗೆ ಶ್ರೀರಕ್ಷೆ. ಅವರ ಮೇಲಿನ ಅಭಿಮಾನದಿಂದ ಗ್ರಾಮೀಣ ಮಾತ್ರವಲ್ಲ, ಬೆಳಗಾವಿ, ಹಾವೇರಿ, ರಾಜ್ಯದಾದ್ಯಂತ ಜನರು ಸ್ವಇಚ್ಛೆಯಿಂದ ಬರುತ್ತಿದ್ದಾರೆ ಎಂದರು.


ಅಂದು ಸಂಜೆ 5.30ರಿಂದ ಟಿವಿ ಕಲಾವಿದರಿಂದ ಸಾಂಸ್ಕೃತಿಕ ಸಂಜೆ ನಂತರ ವಿನಯ ಕುಲಕರ್ಣಿ ಅವರ ಜನ್ಮ ದಿನಾಚರಣೆ, ರಾತ್ರಿ 10.30ರವರೆಗೂ ಪುನಃ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು.


ಅಭಿಮಾನಿಗಳಿಗೆ ವ್ಯವಸ್ಥಿತ ಊಟ ಹಾಗೂ ಕುಡಿಯುವ ನೀರು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅವರ ಜನ್ಮದಿನ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ರಕ್ತದಾನ ಶಿಬಿರ ಸಹ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚನ್ನಬಸಪ್ಪ ಮಟ್ಟಿ, ಶಿವಶಂಕರ ಹಂಪಣ್ಣವರ, ರಾಜಶೇಖರ ಕಮತಿ, ಕಾಂಗ್ರೆಸ್ ಮುಖಂಡ ಆರ್.ಕೆ.ಪಾಟೀಲ, ಮಲ್ಲು ಪೂಜಾರ,
ಕರಿಯಪ್ಪ ಮಾದರ, ವಿಜಯ ಕುರಕುರಿ, ಮನೋಜ ಕರ್ಜಗಿ, ನಿಜಾಮ ರಾಹಿ ಸೇರಿದಂತೆ ಅನೇಕರಿದ್ದರು.

administrator

Related Articles

Leave a Reply

Your email address will not be published. Required fields are marked *