ಹುಬ್ಬಳ್ಳಿ-ಧಾರವಾಡ ಸುದ್ದಿ
ಬಿಜೆಪಿಗೆ ನಾನೇ ಟಾರ್ಗೆಟ್

ಬಿಜೆಪಿಗೆ ನಾನೇ ಟಾರ್ಗೆಟ್

ನಾನು ಎಂದೂ ದ್ವೇಷ ರಾಜಕೀಯ ಮಾಡಿಲ್ಲ; ಗ್ರಾಮೀಣದಿಂದಲೇ ಕಣಕ್ಕೆ – ಸ್ಪಷ್ಟನೆ

ಧಾರವಾಡ: ಬಿಜೆಪಿ ವಿನಯ ಕುಲಕರ್ಣಿಯನ್ನು ಟಾರ್ಗೆಟ್ ಮಾಡಿದೆ. ಕಳೆದ 25 ವರ್ಷದ ರಾಜಕಾರಣದಲ್ಲಿ ಎಂದೂ ನಾನು ದ್ವೇಷದ ರಾಜಕೀಯ ಮಾಡಿಲ್ಲ. ಸದ್ಯ ನನಗೆ ಕ್ಷೇತ್ರ ಪ್ರವೇಶಕ್ಕೆ ನಿಷೇಧವಿದೆ. ವಿಧಾನಸಭೆ ಚುನಾವಣೆ ಒಳಗೆ ಕ್ಷೇತ್ರ ಪ್ರವೇಶಕ್ಕೆ ಕೋರ್ಟ್ ಆದೇಶ ನೀಡುವ ಭರವಸೆ ಇದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.


’ಸಂಜೆದರ್ಪಣ’ದೊಂದಿಗೆ ಮಾತನಾಡಿದ ಅವರು ಮುಂಬರುವ ಚುನಾವಣೆಗೆ ಶಿಗ್ಗಾವಿ, ಕಿತ್ತೂರು ಸೇರಿದಂತೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಲು ಆಹ್ವಾನ ಬಂದಿದೆ. ಆದರೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ನಾನು ಸ್ಪರ್ಧಿಸುವೆ. ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ.ನನ್ನೂರಿನ ಜನರ ಸೇವೆಗೆ ನಾನು ಕೆಲಸ ಮಾಡುವೆ ಎಂದರು.
ಧಾರವಾಡ ಗ್ರಾಮೀಣದಿಂದ ಈಗಾಗಲೇ 10 ಜನ ಆಕಾಂಕ್ಷಿಗಳಿದ್ದು, ಟಿಕೆಟ್ ನೀಡಿಕೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದ ಅವರು, ನಾನು ರಾಜ್ಯಮಟ್ಟದ ನಾಯಕ ಎನ್ನುವುದನ್ನು ಒಪ್ಪುವೆ. ಅನ್ಯ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಹಣ ಗಳಿಕೆ ಆಸೆ ನನಗಿಲ್ಲ. ಬಡವರು, ದೀನ-ದಲಿತರ ಸೇವೆಯೇ ನನ್ನ ಧ್ಯೇಯ. ನಾನು ಅನ್ಯಾಯ ಸಹಿಸಲ್ಲ. ಬಿಜೆಪಿಗರಿಗೆ ನನ್ನ ಬಗ್ಗೆ ಅಪ್ರಚಾರ ಮಾಡಲು ಬೇರೆ ವಿಷಯಗಳಿಲ್ಲ. ಹೀಗಾಗಿ ಹಳೆಯ ವಿಷಯಗಳನ್ನೇ ಪುನಃ ಕೆದಕುತ್ತಿದ್ದಾರೆ ಎಂದು ದೂರಿದರು.
ಮುಸ್ಲಿಂ ಮೀಸಲಾತಿ ಕಬಳಿಸಿ, ಪಂಚಮಸಾಲಿಗೆ ನೀಡುವ ಯತ್ನಾಳ್ ಹಾಗೂ ಬೆಲ್ಲದ ಹೇಳಿಕೆ ವೈಯಕ್ತಿಕ. ನಾನಿದ್ದ ವೇದಿಕೆಯಲ್ಲಿ ಅವರು ಹೀಗೆ ಹೇಳಿಲ್ಲ. ಆದಾಗ್ಯೂ ಕೂಡ ಅವರ ಹೇಳಿಕೆ ತಪ್ಪು ಎಂದರಲ್ಲದೇ ಅಮೃತ ದೇಸಾಯಿ ಬಗೆಗೆ ಕೇಳಿದಾಗ ಬುದ್ದಿಮಟ್ಟ ಸಣ್ಣದು. ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲವೆಂದರು.

 

administrator

Related Articles

Leave a Reply

Your email address will not be published. Required fields are marked *