ಹುಬ್ಬಳ್ಳಿ: ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯವನ್ನು ಒಳಗೊಂಡಿರುವ ರೋಟರಿ ಇಂಟರನ್ಯಾಷನಲ್ ಡಿಸ್ಟ್ರಿಕ್ 3170ರ ವತಿಯಿಂದ ಹುಬ್ಬಳ್ಳಿ ಧಾರವಾಡದ 15 ಸದಸ್ಯರ ತಂಡ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಲಿರುವ ರೋಟರಿ ಮಿನಿ ವರ್ಲ್ಡ ಫೆಸ್ಟಿವಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ.
ಹು-ಧಾ ತಂಡ ನ.12ರಂದು ಬೆಂಗಳೂರು-ಕೋಲ್ಕತ್ತಾ-ಢಾಕಾ ತಲುಪಲಿದ್ದು ನ. 14 ರಿಂದ 17ರ ವರೆಗೆ ಮೂರು ಪಂದ್ಯಗಳನ್ನು ಆಡಲಿದೆ.
ರೋಟರಿ ವಿಶ್ವ ಕ್ರಿಕೆಟ್ ಉತ್ಸವವು ಪ್ರತಿ ವರ್ಷ ನಡೆಯುತ್ತಿದ್ದು, ಈ ಬಾರಿ ಅದು ಢಾಕಾದಲ್ಲಿ ನಡೆಯುತ್ತಿದ್ದು, ಮೊದಲ ಬಾರಿಗೆ ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿP 3170 ವತಿಯಿಂದ ತಂಡವು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದೆ.ಈಗಾಗಲೇ ವಿವಿಧ ಸೌಹಾರ್ಧ ಪಂದ್ಯಗಳನ್ನಾಡಿ ರೋಟರಿ ತಂಡ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ. ಪ್ರಪಂಚದಾದ್ಯಂತ ಕ್ರಿಕೆಟ್ ಆಡುವ ದೇಶಗಳ ರೋಟರಿ ಸದಸ್ಯರನ್ನೊಳಗೊಂಡ 12 ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು ಹುಧಾ ತಂಡ ನೇಪಾಳ, ಶ್ರೀಲಂಕಾ ಮುಂತಾದ ತಂಡಗಳ ಜತೆ ಸೆಣಸಲಿದೆ.
ತಂಡ ಇಂತಿದೆ : ಸುಮೇರಮಲ್ ಓಸ್ತವಾಲ್ ( ನಾಯಕ) ,ಸಂಜಯ ಇಂಗಳೆ, ಪ್ರಕಾಶ ಇರಕಲ್,ಗುರದೀಪ್ ಸಿಂಗ್,ಜಯಂತಿಲಾಲ್,ಶಿವಾನಂದ ಗುಂಜಾಳ, ಕೌಸ್ತುಭ ಸಂಶಿಕರ, ಬಸವರಾಜ ಕಲ್ಯಾಳ ,ರವಿ ಮುಧೋಳ, ಶಿವಣ್ಣ ಪಾಟೀಲ,ವಿಶ್ವನಾಥ ನಾಯಕ,ರಾಜು ಕರೂರ,ನರಸಿಂಹಮೂರ್ತಿ ಸುಶೀಲ ಕಾಟ್ಕರ್,ಅರುಣ ಹೆಬ್ಲೀಕರ ಎಂದು ಜಿಲ್ಲಾ ಕಾರ್ಯದರ್ಶಿ ಸಂಜಯ ಇಂಗಳೆ, ಜಿಲ್ಲಾ ಕಾರ್ಯದರ್ಶಿ (ಸ್ಪೋರ್ಟಸ್) ನಾಯಕ ರಾಗಿರುವ ಸುಮೇರ ಓಸ್ತವಾಲ್ ತಿಳಿಸಿದ್ದಾರೆ.