ಡಿಕೆಶಿ ಸಮ್ಮುಖದಲ್ಲಿ ಸೇರ್ಪಡೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಿವೃತ್ತ ವಲಯ ಸಹಾಯಕ ಆಯುಕ್ತ, ಸುಮಾರು ನಾಲ್ಕು ದಶಕಗಳ ಕಾಲ ಜನಸ್ನೇಹಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಪ್ರಕಾಶ್ ಗಾಳೆಮ್ಮನವರ್ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು.
2023ರ ಚುನಾವಣೆ ಎಲ್ಲ ಪಕ್ಷಗಳಿಗೂ ನಿರ್ಣಾಯಕವಾಗಿದ್ದು ಕಾಂಗ್ರೆಸ್ ಶತಾಯ ಗತಾಯವಾಗಿ ಮರಳಿ ಸೆಂಟ್ರಲ್ ಕ್ಷೇತ್ರ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯತ್ನದಲ್ಲಿ ನಿರತವಾಗಿದ್ದು ವಾರ್ಡ್ ಸಂಖ್ಯೆ 53ರ ನಿವಾಸಿ, ನಿವೃತ್ತ ವಲಯಾಧಿಕಾರಿ, ಪರಿಷತ್ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದ ಗಾಳೆಮ್ಮನವರ್ ಅವರನ್ನು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಕಾಂಗ್ರೆಸ್ ಶಾಲು ಹಾಕಿ ಕೆಪಿಸಿಸಿ ಅಧ್ಯಕ್ಷರು ಪಕ್ಷಕ್ಕೆ ಬರಮಾಡಿಕೊಂಡರು.
ಸೆಂಟ್ರಲ್ ಕ್ಷೇತ್ರದಲ್ಲಿ ಕೈ ಸಂಘಟನೆ ಬೂತ್ ಮಟ್ಟದಿಂದ ಚುರುಕಾಗಿದ್ದು ಈ ಹಿಂದೆ ಬಿಜೆಪಿ ತೊರೆದು ನಾಯಕರು, ಹೊಸ ಯುವ ಮುಖಗಳು ಕಾಂಗ್ರೆಸ್ ನತ್ತ ಆಕರ್ಷಿಸಲು ಈಗ ನಿವೃತ್ತ ಅಧಿಕಾರಿಗಳನ್ನು ಸೆಳೆಯುವಲ್ಲಿ ರಜತ್ ಯಶಸ್ವಿಯಾಗಿದ್ದಾರೆ.
ಪ್ರತಿ ಹಂತದಲ್ಲೂ ಬಿಜೆಪಿಯ ಭ್ರಷ್ಟಾಚಾರದಿಂದ ಬೇಸತ್ತು, ಸೋನಿಯಾ ಗಾಂಧಿ ಅವರ ತ್ಯಾಗ, ರಾಹುಲ್ ಗಾಂಧಿಯವರ ಬದ್ಧತೆ, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಾಯಕತ್ವವನ್ನು ಒಪ್ಪಿ ತಾವು ಕಾಂಗ್ರೆಸ್ ಸೇರಿರುವುದಾಗಿ ಗಾಳೆಮ್ಮನವರ ಈ ಸಂದರ್ಭದಲ್ಲಿ ಹೇಳಿದರು.
ಈ ವೇಳೆ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಪಾಲಿಕೆ ಸದಸ್ಯರಾದ ಆರೀಫ್ ಭದ್ರಾಪುರ, ಸುವರ್ಣ ಕಲಕುಂಟ್ಲ, ಪ್ರಕಾಶ ಕುರಹಟ್ಟಿ, ಕೆಪಿಸಿಸಿ ಸದಸ್ಯ ರಾಬರ್ಟ ದದ್ದಾಪುರಿ,ಕೆಪಿಸಿಸಿ ಸಂಯೋಜಕ ಮೋಹನ ಹಿರೇಮನಿ, ಮಾಜಿ ಪಾಲಿಕೆ ಸದಸ್ಯರಾದ ಎಂ.ಎಸ್.ಪಾಟೀಲ, ಹೂವಪ್ಪ ದಾಯಗೋಡಿ, ಪ್ರಮುಖರಾದ ಬಂಗಾರೇಶ ಹಿರೇಮಠ,ಶಾಜಮಾನ್ ಮುಜಾಹಿದ, ನಾಗರಾಜ ಗುರಿಕಾರ ಸೇರಿದಂತೆ ಅನೇಕರಿದ್ದರು.