ಕಾರ್ಯಾಚರಣೆ ಬಹುತೇಕ ಮುಕ್ತಾಯ ಹಂತಕ್ಕೆ
ಹುಬ್ಬಳ್ಳಿ: ಬಿಆರ್‌ಟಿಎಸ್ ಸಂಸ್ಥೆ ವ್ಯಾಪ್ತಿಗೆ ಒಳಪಟ್ಟಿದ್ದ ಇಲ್ಲಿನ ಬೈರಿದೇವರಕೊಪ್ಪದ ಹಜರತ್ ಸೈಯ್ಯದ್ ಮಹ್ಮದ್ ಶಾ ಖಾದ್ರಿ ದರ್ಗಾದ ತೆರವು ಕಾರ್ಯ ಬಹುತೇಕ ಮುಕ್ತಾಯಗೊಂಡಿದ್ದು, ಆವರಣದಲ್ಲಿರುವ ಮೂರು ಗೋರಿಗಳನ್ನು ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಸ್ಥಳಾಂತರಿಸಲಾಯಿತು.
ಅಂಜುಮನ್ ಸಂಸ್ಥೆ ನುರಿತ ಎಂಜಿನಿಯರ್‌ಗಳ ನೆರವಿನಿಂದ ಧರ್ಮಗುರುಗಳು, ಸಮುದಾಯದ ಪ್ರಮುಖರು ಸಮ್ಮುಖದಲ್ಲಿ ಸ್ಥಳಾಂತರಿಸಲಾಗಿದೆ. ಹಜರತ್ ಸೈಯ್ಯದ್ ಮಹ್ಮದ್ ಶಾ ಖಾದ್ರಿ ಅವರ ಗೋರಿ 10 x10 ವಿಸ್ತೀರ್ಣ,ಅವರ ಇಬ್ಬರು ಶಿಷ್ಯರ ಗೋರಿ ತಲಾ 7×7 ವಿಸ್ತೀರ್ಣ ಇದ್ದು. ಇದು ಜೀವಂತ ಸಮಾಧಿಯಾಗಿದ್ದು, ಗೋರಿಗಳಿಗೆ ಧಕ್ಕೆಯಾಗದ ಹಾಗೆ ಸ್ಥಳಾಂತರಿಸಲಾಗಿದೆ. ಗೋರಿಗಳ ಸುತ್ತ ಇರುವ ಕಾಂಕ್ರೀಟ್ ಅನ್ನು ಡ್ರಿಲ್ ಯಂತ್ರದಿಂದ ಬಿಡಿಸಿ, ಅಲ್ಲಿಗೆ ಸಮೀಪದ ಮೂರು ಕಡೆ 30×30 ವಿಸ್ತೀರ್ಣ ಹಾಗೂ 12 ಅಡಿ ಆಳದ ತಗ್ಗು ತೋಡಿ ಅಲ್ಲಿಗೆ ಸ್ಥಳಾಂತರಿಸಲಾಯಿತು. ಧರ್ಮಗುರುಗಳು,ಅಂಜುಮನ್ ಅಧ್ಯಕ್ಷ ಮಹ್ಮದ ಯೂಸೂಪ್ ಸವಣೂರ, ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ಇತರರು ಉಪಸ್ಥಿತರಿದ್ದರು.
ಬುಧವಾರ ಬೆಳಗಿನ ಜಾವ ಆರಂಭವಾದ ತೆರವು ಕಾರ್ಯಾಚರಣೆ ಗೋರಿ ಸ್ಥಳಾಂತರದ ನಂತರವೂ ಹು-ಧಾ ಮುಖ್ಯ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರಿಂದ ಇಂದೂ ವಾಹನಗಳು ಒಳ ರಸ್ತೆಗಳ ಮೂಲಕವೇ ವಾಹನ ಸಂಚಾರ ಮಾಡಿದವು. ಮುಖ್ಯರಸ್ತೆ ಬಂದ್ ಆಗಿದ್ದ ಕಾರಣ ಎರಡೂ ಕಡೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ.
ಕಾರ್ಯಾಚರಣೆ ಬಹುತೇಕ ಮುಕ್ತಾಯಗೊಂಡಿದ್ದು ತೆರವುಗೊಳಿಸಿದ ವಸ್ತುಗಳನ್ನು ಬಿಆರ್‌ಟಿಎಸ್ ಬೇರೆಡೆ ಸ್ಥಳಾಂತರಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯಲ್ಲಿ ಸಂಚಾರ ಆರಂಭ ಮಾಡಿಲ್ಲ. ಸಂಜೆವರೆಗೆ ಮುಗಿಯಬಹುದಾಗಿದೆ.ಮುಂದುವರಿದ ಮುಂಜಾಗೃತಾ ಕ್ರಮವಾಗಿ ಜಾರಿಗೊಳಿಸಿದ್ದ ನಿಷೇದಾಜ್ಞೆಯನ್ನು ನಾಳೆ ಬೆಳಿಗ್ಗೆವರೆಗೆ ವಿಸ್ತರಿಸಲಾಗಿದೆ.
ಲಾಭೂರಾಮ್
ಪೋಲಿಸ ಆಯುಕ್ತರು
ಸುರಕ್ಷಿತವಾಗಿ ಬೆಳಗಿನ ಜಾವ ಮೂರು ಗೋರಿಗಳ ಸ್ಥಳಾಂತರವಾಗಿದೆ.300 ವರ್ಷಗಳ ಹಿಂದಿನ ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿಯವರ ಮೃತ ದೇಹ ಯಥಾಸ್ಥಿತಿಯಲ್ಲಿದೆ.ಸುತ್ತಲಾಗಿದ್ದ ಬಿಳಿಯ ಬಟ್ಟೆಗೆ ಕೆಲವೆಡೆ ಮಣ್ಣು ಅಂಟಿದ್ದು ಬಿಟ್ಟರೆ ಹಾಗೆಯೆ ಇದೆ.
ಅಲ್ತಾಫ್ ಹಳ್ಳೂರು,
ಮಹಾನಗರ ಕಾಂಗ್ರೆಸ್ ಅಧ್ಯಕ್ಷರು