ಹುಬ್ಬಳ್ಳಿ-ಧಾರವಾಡ ಸುದ್ದಿ

ಬೇಂದ್ರೆ ಕ್ರಿಕೆಟ್ ಅಕಾಡೆಮಿಗೆ ಪ್ರಶಸ್ತಿ

2ನೇ ಡಿವಿಜನ್ ಅರ್ಹತೆ ಪಡೆದ ವಿಬಿಸಿಎ, ಟಿಎಸ್‌ಸಿ

ಹುಬ್ಬಳ್ಳಿ: ಧಾರವಾಡದ ವಿಕಾಸ ಬೇಂದ್ರೆ ಕ್ರಿಕೆಟ್ ಅಕಾಡೆಮಿ(ವಿಬಿಸಿಎ) ಈ ಸಾಲಿನ ಕೆಎಸ್‌ಸಿಎ ೩ನೇ ಡಿವಿಜನ್ ಕ್ರಿಕೆಟ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಸೋಮವಾರ ನಗರದ ಕೆಎಸ್ ಸಿಎ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ವಿಬಿಸಿಎ ಹುಬ್ಬಳ್ಳಿಯ ತಾನಾಜಿ ಸ್ಪೋರ್ಟ್ಸ ಕ್ಲಬ್ (ಟಿಎಸ್‌ಸಿ) ಎದರು 53 ಓಟಗಳಿಂದ ಜಯಗಳಿಸಿತು. ಎರಡು ತಂಡಗಳು ಮುಂದಿನ ಋತುವಿನಲ್ಲಿ 2ನೇ ಡಿವಿಜನ್‌ನಲ್ಲಿ ಆಡುವ ಅರ್ಹತೆ ಪಡೆದುಕೊಂಡವು.

ಎಡದಿಂದ ನಿಂತವರು ಶಶಾಂಕ ಕಲ್ಲಾಪುರ, ಸುಜಯ್ ಕೊರವರ್, ಎ.ಎಂ.ದೇಸಾಯಿ, ಸಾಯಿ ಸುಶೀಲ್ ರೆಡ್ಡಿ, ಆದಿತ್ಯ ಮಣಿ, ಕುಳಿತವರು ಎಡದಿಂದ ಮಹಾದೇವಗೌಡ ದೇಸಾಯಿ, ಶಾಮ್ ಪೈ, ಸಂದೀಪ ಪೈ, ಬಸವರಾಜ ಹೆಬ್ಬಳ್ಳಿ, ಮೃತ್ಯುಂಜಯ ಹಿರೇಮಠ, ಸಿ.ಎಂ.ದೇಸಾಯಿ, ಶ್ರೇಯಸ್ ನಾಗನೂರ

ಟಾಸ್ ಸೋತು ಬ್ಯಾಟಿಂಗ್‌ಗಿಗೆ ಇಳಿದ ವಿಬಿಸಿಎ ಸಾಯಿ ಶುಶೀಲ್ ರೆಡ್ಡಿ (89, 58ಎ,೭x4, 4×6) , ರಾಹುಲ್ ವರ್ಣೇಕರ(53, 41ಎ, 5×4, 1×6 ಸಿಕ್ಸರ್) ನೆರಿವಿನಿಂದ 29ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 202 ರ ಮೊತ್ತ ದಾಖಲಿಸಿತು. ಶಿವಶರಣ ಸಿ.(15ಕ್ಕೆ2) ಹಾಗೂ ಸಚಿನ್ ರೇವಣಕರ (35ಕ್ಕೆ2) ಟಿಎಸ್‌ಸಿ ಪರ ಯಶಸ್ವಿ ಬೌಲರ್‌ಗಳು. ಈ ಮೊತ್ತ ಬೆನ್ನು ಹತ್ತಿದ ಟಿಎಸ್‌ಸಿ ತಂಡದ ಪರ ಆಶ್ಪಕ್ ಎಂ.(70, 69ಎ, 6×4 ಬೌಂಡರಿ, 1×6) ಹಾಗೂ ಪ್ರಜ್ವಲ್ ಪ್ರಕಾಶ (38, 33ಎ, 5×4) 25.1 ಓವರ್‌ಗಳಲ್ಲಿ 149ಕ್ಕೆ ಆಲೌಟಾಯಿತು. ವಿಬಿಸಿಎ ಆದಿತ್ಯ ಮಣಿ (15ಕ್ಕೆ3), ಶ್ರೇಯಾಂಶ ನಾಗನೂರ(33ಕ್ಕೆ3)ವಿಕೆಟ್ ಪಡೆದರು.

ಹುಬ್ಬಳ್ಳಿಯ ತಾನಾಜಿ ಸ್ಪೋರ್ಟ್ಸ ಕ್ಲಬ್ (ಟಿಎಸ್‌ಸಿ) ತಂಡ ಈ ಸಾಲಿನ ಕೆಎಸ್‌ಸಿಎ ೩ನೇ ಡಿವಿಜನ್ ಕ್ರಿಕೆಟ್ ಟೂರ್ನಿಯಲ್ಲಿ ರನ್‌ರ್ ಅಪ್ ಆಗಿ ೨ನೇ ಡಿವಿಜನ್‌ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿತು. ನಿಂತವರು ಎಡದಿಂದ ಶಿವತೇಜ್, ಸಾಮಿ, ಬಸವರಾಜ, ಸಿದ್ದಾರ್ಥ, ಸ್ವಾಗತ, ಪ್ರಜ್ವಲ್, ಕುಳಿತವರು ಎಡದಿಂದ ರಫೀಕ್, ಅಶ್ಪಾಕ್ (ನಾಯಕ), ತಾಹೀರ್, ಚೇತನ್ (ಮ್ಯಾನೇಜರ್), ಸಚಿನ್, ಇರ್ಫಾನ್, ಶಿವಶಂಕರ್, ಸಚಿನ್ (ಉಪನಾಯಕ), ಅಭಿಜೀತ್ (ತಂಡದ ಉಸ್ತವಾರಿ).

ಈ ಟೂರ್ನಿಯಲ್ಲಿ 5ಲೀಗ್ ಪಂದ್ಯ, ಕ್ವಾಟರ್ ಪೈನ್‌ಲ್, ಸೆಮಿಫೈನಲ್ ಹಾಗೂ ಫೈನಲ್ ಸೇರಿದಂತೆ 8ಕ್ಕೆ 8 ಪಂದ್ಯವನ್ನು ಧಾರವಾಡದ ವಿಕಾಸ ಬೇಂದ್ರೆ ಕ್ರಿಕೆಟ್ ಅಕಾಡೆಮಿ ತಂಡ ಜಯಗಳಿಸಿತು.

administrator

Related Articles

Leave a Reply

Your email address will not be published. Required fields are marked *