ಹುಬ್ಬಳ್ಳಿ-ಧಾರವಾಡ ಸುದ್ದಿ

ಆನೆದಂತ ಕಲಾಕೃತಿ ಮಾರಾಟ: ಐವರು ಅರೆಸ್ಟ್

ಹುಬ್ಳಳ್ಳಿ ಅರಣ್ಯ ಸಂಚಾರಿ ದಳದ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ನೇತೃತ್ವದಲ್ಲಿ ಭರ್ಜರಿ ಬೇಟೆ

ಹುಬ್ಬಳ್ಳಿ: ಆನೆ ದಂತದಿಂದ ಮಾಡಿದ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸಿದ್ದ ಅಂತರರಾಜ್ಯದ ಐವರ ತಂಡವನ್ನು ಹುಬ್ಬಳ್ಳಿಯ ಸಿಐಡಿ ಪೊಲೀಸ್ ವಿಶೇಷ ಅರಣ್ಯ ಸಂಚಾರಿ ದಳ ಬಂಧಿಸುವಲ್ಲಿ ಯಶಸ್ವಿಯಾಗಿದೆ.


ಕೊಲ್ಲಾಪುರದ ಸಾತ್ ಶಹಜಾನ ಜಮಾದಾರ, ವಿಜಯ ರಾಜಾರಾಂ ಕುಂಬಾರ, ಸಾಗರ ಸುಭಾಷ ಪರಾಣಿಕ, ನಿಪ್ಪಾಣಿಯ ವಿನಾಯಕ ನಾಮದೇವ ಕಾಂಬ್ಲೆ ಹಾಗೂ ದಾನಜೀ ಪಾಂಡುರಂಗ ಪಾಟೀಲ ಎಂಬುವರೇ ಬಂಧಿಸಲ್ಪಟ್ಟವರಾಗಿದ್ದಾರೆ.


ಸಿಐಡಿ ಎಡಿಜಿಪಿ ಕೆ.ವಿ.ಶರತಚಂದ್ರ, ಮಾರ್ಗದರ್ಶನದಲ್ಲಿ ಸಿಐಡಿ ಅರಣ್ಯ ಘಟಕ ಹುಬ್ಬಳ್ಳಿ ವಿಭಾಗದವರು ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ನೇತೃತ್ವದಲ್ಲಿ ನಗರದ ಹೊಸ ಬಸ್‌ನಿಲ್ದಾಣ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ ಆನೆ ದಂತದಿಂದ ತಯಾರಿಸಿದ 384 ಗ್ರಾಂ ತೂಕದ ಅಲಂಕಾರಿಕ ಪೆಟ್ಟಿಗೆ, 112 ಗ್ರಾಂ ತೂಕದ ಕೆಂಪು ಹರಳು ಇರುವ ಒಂದು ಖಡ್ಗ, ೩೫೦ ಗ್ರಾಂ.ನ ಆಯತಾಕಾರದ ಪೆಟ್ಟಿಗೆ, 279 ಗ್ರಾಂ. ನ ಮೊಟ್ಟೆಯಾಕಾರದ ಪೆಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ.


ಆರೋಪಿ ಸಾತ್ ಶಹಜಾನ ಜಮಾದಾರ ಈತನನ್ನು ವಿಚಾರಿಸಿದಾಗ ನನ್ನ ತಂದೆ ಶಹಜಾನ ಅವರು ರಾಜಸ್ಥಾನದಲ್ಲಿ ನಡೆಯುವ ಜಾತ್ರೆಗಳು, ಸಂತೆಗಳು, ಸಾಧು ಸಂತರ ಬಳಿಯಿಂದ ಅನೇಕ ವರ್ಷಗಳ ಹಿಂದೆ ಸಂಗ್ರಹಿಸಿ ಮನೆಯಲ್ಲಿಟ್ಟಿದ್ದರು. ಅವುಗಳನ್ನು ಮಾರಾಟ ಮಾಡಿದರೆ ಸಾಕಷ್ಟು ದುಡ್ಡು ಬರಬಹುದು ಎಂದು ತಿಳಿದು ತಾವು ಹುಬ್ಬಳ್ಳಿಗೆ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ.


ಕಾರ್ಯಾಚರಣೆಯಲ್ಲಿ ಪಿಎಸ್ ಪ್ರಸಾದ ಪಣೇಕರ್, ಸಿಬ್ಬಂದಿಗಳಾದ ಎಲ್.ಎ.ಪಾಠಕ, ಅಶೋಕ ನಾಗರಹಳ್ಳಿ, ರವೀಂದ್ರ ಗೋಣೆನವರ, ಎಸ್.ಎಚ್.ಹುಲಗೇರ, ದಿವ್ಯ ಎಸ್. ನಾಯ್ಕ ಪಾಲ್ಗೊಂಡಿದ್ದರು.

administrator

Related Articles

Leave a Reply

Your email address will not be published. Required fields are marked *